For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರ ಖರೀದಿಸಲು ಮುಂದಾದ ತಮಿಳು ಬ್ಯಾನರ್

  |

  ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸುಧಾರಣೆ ಕಂಡು ಬರುತ್ತಿದೆ ಎಂದು ಅಂಕಿಅಂಶಗಳ ಮೂಲಕ ಈ ಹಿಂದೆ ನಾವು ಲೇಖನವನ್ನು ಪ್ರಕಟಿಸಿದ್ದೆವು (ಆ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ)

  ಕಳೆದ ವರ್ಷ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ, ಅದ್ದೂರಿ, ಅಣ್ಣಾಬಾಂಡ್, ದಂಡುಪಾಳ್ಯ ಮುಂತಾದ ಚಿತ್ರಗಳು ದಕ್ಷಿಣ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದ್ದವು. ಹೀಗಾಗಿ ಇತರ ಭಾಷೆಯ ಚಿತ್ರ ನಿರ್ಮಾಪಕರ ಕಣ್ಣು ಈಗ ಕನ್ನಡ ಚಿತ್ರಗಳತ್ತ ನೆಟ್ಟಿದೆ.

  ತಮಿಳಿನ ಸ್ಟಾರ್ ನಟ ಸೂರ್ಯ ಮತ್ತು ಅವರ ನೆಂಟ ಗ್ನಾನವೇಲರಾಜ್ ಒಡೆತನದ 'ಸ್ಟುಡಿಯೋ ಗ್ರೀನ್' ಕನ್ನಡ ಚಿತ್ರ 'ಮೈನಾ' ಖರೀದಿಸಲು ಗಂಭೀರ ಚರ್ಚೆಯಲ್ಲಿ ತೊಡಗಿದೆ.

  ಆದಿನಗಳು ಚೇತನ್ ಮತ್ತು ನಿತ್ಯಾ ಮೆನನ್ ಪ್ರಮುಖ ಭೂಮಿಕೆಯಲ್ಲಿರುವ ಮೈನಾ ಚಿತ್ರವನ್ನು ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ನಿರ್ದೇಶಿಸಿದ್ದಾರೆ.

  ಸ್ಟುಡಿಯೋ ಗ್ರೀನ್ ಈ ವಿಷಯವನ್ನು ಖಚಿತ ಪಡಿಸಿದ್ದು 'ಮೈನಾ ಚಿತ್ರದ ಖರೀದಿಯ ಬಗ್ಗೆ ನಿರ್ಮಾಪಕರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಯುತ್ತಿದೆ. ಕನ್ನಡ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಲು ನಮ್ಮ ಪ್ರೊಡಕ್ಷನ್ ಹೌಸ್ ಉತ್ಸುಕವಾಗಿದೆ' ಎಂದು ಗ್ನಾನವೇಲರಾಜ್ ಹೇಳಿದ್ದಾರೆ.

  ಮೈನಾ ಚಿತ್ರದ ಮೇಕಿಂಗ್ ನೋಡಿದ್ದೇನೆ. ಕಥೆ ಮತ್ತು ಚಿತ್ರಕಥೆಯ ಬಗ್ಗೆ ನಿರ್ದೇಶಕರಲ್ಲಿ ಕೇಳಿಕೊಂಡಿದ್ದೇನೆ. ಬಹಳ ಇಷ್ಟಪಟ್ಟು ಚಿತ್ರ ಖರೀದಿಸಲು ಮುಂದೆ ಬಂದಿದ್ದೇವೆ ಎಂದು ಗ್ನಾನವೇಲರಾಜ್ ಸಿನಿ ವರದಿಗಾರರಿಗೆ ಸ್ಪಷ್ಟ ಪಡಿಸಿದ್ದಾರೆ.

  ನೈಜ ಕಥಾದಾರಿತ ಸ್ವಮೇಕ್ ಚಿತ್ರ ಇದಾಗಿದ್ದು ಚಿತ್ರದ ಇತರ ತಾರಾಗಣದಲ್ಲಿ ಶರತ್ ಕುಮಾರ್, ಸುಹಾಸಿನಿ ಮಣಿರತ್ನಂ, ಸುಮನ್ ರಂಗನಾಥ್, ಮಾಳವಿಕಾ ಅವಿನಾಶ್, ರಂಗಾಯಣ ರಘು ಮುಂತಾದವರಿದ್ದಾರೆ.

  ಮೈನಾ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

  English summary
  Tamil actor Surya and his cousin KE Gnanavelraja owned production house 'Studio Green' is negotiating a deal with the makers of Mynaa to buy this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X