For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ತಮಿಳು ನಟಿ ಪ್ರಿಯಾ ಭವಾನಿ ಶಂಕರ್!

  |

  ಡಾಲಿ ಧನಂಜಯ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ. ತಾವೇ ನಿರ್ಮಿಸಿ ನಟಿಸಿರುವ 'ಹೆಡ್ ಬುಷ್' ಸಿನಿಮಾದ ರಿಲೀಸ್‌ಗಾಗಿ ಓಡಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇದೇ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

  ದಾವಣಗೆರೆಯಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಅನ್ನು ಅದ್ಧೂರಿಯಾಗಿ ಮಾಡಿದ್ದಾರೆ. 'ಹೆಡ್ ಬುಷ್' ಸಿನಿಮಾ ಕಥೆ ಒಂದೆಡೆಯಾದರೆ, ಇನ್ನೊಂದು ಕಡೆ ಧನಂಜಯ್ ನಟನೆಯ 26ನೇ ಸಿನಿಮಾ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿದೆ.

  ಡಾಲಿ ಧನಂಜಯ್ ಹಾಗೂ ತೆಲುಗು ನಟ ಸತ್ಯ ದೇವ್ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದ ತಯಾರಿ ನಡೆಯುತ್ತಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

  ವಿಶೇಷ ಅಂದ್ರೆ, ಇದು ಡಾಲಿ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಇಬ್ಬರಿಗೂ 26ನೇ ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಇನ್ನೂ ಈ ಸಿನಿಮಾ ಟೈಟಲ್ ರಿವೀಲ್ ಆಗಿಲ್ಲ. ಆದರೆ, ಸಿನಿಮಾದ ಶೂಟಿಂಗ್‌ ಆರಂಭ ಮಾಡಿ ಆಗಿದೆ. ಸದ್ಯ ಈ ತಂಡದಿಂದ ಲೇಟೆಸ್ಟ್ ಅಪ್‌ಡೇಟ್ ಹೊರಬಿದ್ದಿದೆ.

  ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿರುವ ನಟಿ ಧನಂಜಯ್ ಸಿನಿಮಾಗೆ ನಾಯಕಿ. ಧನಂಜಯ್, ಸತ್ಯದೇವ್ ಸಿನಿಮಾಗೆ ತಂಡ ನಾಯಕಿಯರ ಹುಡುಕಾಟದಲ್ಲಿತ್ತು. ಇದೀಗ ಆ ನಾಯಕಿ ಸಿಕ್ಕಿದ್ದು, ಪ್ರಿಯಾ ಭವಾನಿ ಶಂಕರ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

  ಪ್ರಿಯಾ ಭವಾನಿ ಶಂಕರ್ ಈಗಾಗಲೇ ತಮಿಳಿನಲ್ಲಿ 'ಓಹ್ ಮನಪೆಣ್ಣೆ', 'ಬ್ಲಡ್ ಮನಿ', 'ತಿರುಚಿತ್ರಬಾಲಂ' ಅಂತಹ ಸೂಪರ್‌ ಹಿಟ್ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದಾರೆ. ಅಂದ್ಹಾಗೆ ಪ್ರಿಯಾ ಭವಾನಿ ಶಂಕರ್‌ಗೆ ಈ ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ಮೊದಲನೆಯದ್ದು.

  ಪ್ರಿಯಾ ಭವಾನಿ ಶಂಕರ್ ಈ ಸಿನಿಮಾದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ನಟಿಯೊಬ್ಬರು ಈ ಸಿನಿಮಾ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಂತಾಗಿದೆ. ಹಾಗೇ ಸಿನಿಮಾದ ಇನೊಬ್ಬ ನಟಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ.

  Tamil Actress Priya Bhavani Shankar Will Be The Lead Actor In Dhananjay Movie

  ತೆಲುಗಿನಲ್ಲಿ 'ಪೆಂಗ್ವಿನ್' ಅನ್ನೋ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಈ ಸಿನಿಮಾ ನಿರ್ದೇಶಕ. ಡಾಲಿ ಧನಂಜಯ್ ಹಾಗೂ ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಸಿನಿಮಾಗೆ ಇವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡ ಕ್ರೈಮ್ ಆಕ್ಷನ್ ಎಂಟಟೈನರ್ ಕಥಾಹಂದರ ಒಳಗೊಂಡಿದ್ದು, ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.

  'ಟಗರು' ಸಿನಿಮಾಗೆ ಸಂಗೀತ ನೀಡಿದ್ದ ಚರಣ್ ರಾಜ್ ಟ್ಯೂನ್ ಹಾಕಿತ್ತಿದ್ರೆ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಸಾಹಸ ಚಿತ್ರಕ್ಕಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಸಿನಿಮಾ ಟೈಟಲ್ ಅನೌನ್ಸ್ ಮಾಡಲಿದೆ.

  English summary
  Tamil Actress Priya Bhavani Shankar Will Be The Lead Actor In Dhananjay Movie, Know More.
  Monday, October 17, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X