»   » ಕನ್ನಡದ ರಾಜಧಾನಿಯಲ್ಲಿ ತಮಿಳು ಸಿಂಗಂ ಚಿತ್ರದ ಆರ್ಭಟ

ಕನ್ನಡದ ರಾಜಧಾನಿಯಲ್ಲಿ ತಮಿಳು ಸಿಂಗಂ ಚಿತ್ರದ ಆರ್ಭಟ

Posted By:
Subscribe to Filmibeat Kannada

ಮತ್ತೆ, ಮಗುದೊಮ್ಮೆ ಪರಭಾಷಾ ಚಿತ್ರಗಳಿಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಭಾಗ್ಯದ ಬಾಗಿಲಂತಾಗಿದೆ. ತಮಿಳು ನಟ ಸೂರ್ಯನಿಗಂತೂ ಬೆಂಗಳೂರಿನಲ್ಲಿ ಬೇಜಾನ್ ಮಾರುಕಟ್ಟೆ ಇರುವುದು ಮತ್ತೊಮೆ ಸಾಬೀತಾಗಿದೆ.

ಗಜನಿ ಖ್ಯಾತಿಯ ಸೂರ್ಯ ಅಭಿನಯದ ಇತ್ತೀಚಿನ ತಮಿಳು ಚಿತ್ರ ಸಿಂಗಂ 2 ಬೆಂಗಳೂರು ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಕಲರವ ಮಾಡುತ್ತಿದೆ. ಅವರ ಕಳೆದ ಎರಡು ಚಿತ್ರಗಳಾದ ವಾರನಂ ಆಯಿರಂ, ರಕ್ತಚರಿತ್ರಾ ಚಿತ್ರ ಕೂಡಾ ನಿರ್ಮಾಪಕರಿಗೆ ಉತ್ತಮ ಆದಾಯ ತಂದು ಕೊಟ್ಟಿತ್ತು.

ಕಮಲಹಾಸನ್ ಅವರ ವಿಶ್ವರೂಪಂ ಚಿತ್ರದ ನಂತರ ತಮಿಳು ಚಿತ್ರಕ್ಕೆ ಬೆಂಗಳೂರಿನಲ್ಲಿ ಈ ಮಟ್ಟಿಗೆ ಕಲೆಕ್ಷನ್ ಆಗುತ್ತಿರುವುದು ಮುಖ್ಯವಾಗಿ ಕನ್ನಡ ಚಿತ್ರ ನಿರ್ಮಾಪಕರು ಗಮನಿಸ ಬೇಕಾದ ಅಂಶ. ಚಿತ್ರಕ್ಕೆ ಮೊದಲ ವಾರದಲ್ಲಿ ಉತ್ತಮ ಗಳಿಕೆಯಾಗಿತ್ತು.

ಸಿಂಗಂ ಚಿತ್ರ ಕನ್ನಡದಲ್ಲಿ ಕೆಂಪೇಗೌಡ ಮತ್ತು ಹಿಂದಿಯಲ್ಲಿ ಸಿಂಗಂ ಎನ್ನುವ ಹೆಸರಿನಲ್ಲಿ ರಿಮೇಕಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೇ ಹಿಟ್ ಪಟ್ಟಿಗೆ ಸೇರಿರುವ ಸಿಂಗಂ 2 ಚಿತ್ರದ ರಿಮೇಕ್ ರೈಟ್ಸ್ ಯಾರ ಪಾಲಾಗಿದೆ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಕನ್ನಡ ಚಿತ್ರಗಳಿಗೆ ಹೊಡೆತ

ಸಿಂಗಂ ಚಿತ್ರದ ಭರ್ಜರಿ ಯಶಸ್ಸು ಕನ್ನಡ ಚಿತ್ರಗಳ ಗಳಿಕೆಗೆ ತೊಂದರೆಯಾಗುತ್ತಿದೆ. ಪ್ರಮುಖವಾಗಿ ಬಿಗ್ ಬಾಸ್ ವಿಜಯ್ ರಾಘವೇಂದ್ರ ಅಭಿನಯದ ಚೆಲ್ಲಾಪಿಲ್ಲಿ ಚಿತ್ರದ ಗಳಿಕೆಗೆ ತೊಂದರೆಯಾಗುತ್ತಿದೆ ಎನ್ನಲಾಗುತ್ತಿದೆ. ಅದಲ್ಲದೇ, ಸಿಂಗಂ ಚಿತ್ರಕ್ಕಾದ ಲಾಭವೇನೆಂದರೆ ಕನ್ನಡದ ಪ್ರಮುಖ ನಟರ ಚಿತ್ರಗಳು ಈಗ ಪ್ರದರ್ಶನ ಕಾಣುತ್ತಿಲ್ಲ.

ಗಲ್ಲಾಪೆಟ್ಟಿಗೆಯಲ್ಲಿ ಸಿಂಗಂ ಕಲರವ

ಬಾಕ್ಸಾಫೀಸ್ ವರದಿಗಳ ಪ್ರಕಾರ ಚಿತ್ರ ಬಿಡುಗಡೆಯದ ಕೆಲವೇ ದಿನಗಳಲ್ಲಿ ಕೋಟಿ ಮೇಲೆ ಆದಾಯ ಗಳಿಸಿದೆ. ಅಲ್ಲದೇ, ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಮೊದಲವಾರದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಮಲ್ಟಿಪ್ಲೆಕ್ಷ್ ಗಳಲ್ಲಿ ಉತ್ತಮ ಕಲೆಕ್ಷನ್

ಚಿತ್ರಕ್ಕೆ ಮಲ್ಟಿಪ್ಲೆಕ್ಷ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವಾರಾಂತ್ಯ ಹೆಚ್ಚಿನ ಕಡೆ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಕೆಲವು ಪತ್ರಿಕೆಗಳು, ಮಾಧ್ಯಮಗಳು ಚಿತ್ರವನ್ನು ಆವರೇಜ್ ಎಂದು ವಿಮರ್ಶಿಸಿದ್ದರೂ ಚಿತ್ರದ ಗಳಿಕೆಗೆ ಅಷ್ಟೇನೂ ತೊಂದರೆಯಾಗಿಲ್ಲ.

ಬೆಂಗಳೂರು ಚಿತ್ರಮಂದಿರದಲ್ಲಿ

ನಗರಗದ 41 ಚಿತ್ರಮಂದಿರಗಳಲ್ಲಿ ಸಿಂಗಂ 2 ಪ್ರದರ್ಶನ ಕಾಣುತ್ತಿದೆ. ಬಹಾರ್ ಎಂಟರ್ಪ್ರೈಸಸ್ ರಾಜ್ಯಕ್ಕೆ ಚಿತ್ರದ ಹಂಚಿಕೆದಾರರು. ಇದಲ್ಲದೆ ಸಿಂಗಂ ತೆಲುಗು ಆವೃತ್ತಿ ನಗರದ ಆರು ಚಿತ್ರಮಂದಿರಗಳಲ್ಲಿ ಪ್ರದರ್ಶನ ವಾಗುತ್ತಿದೆ.

ವಿಶ್ವರೂಪಂ

ಕಮಲಹಾಸನ್ ಅವರ ವಿವಾದೀತ ವಿಶ್ವರೂಪಂ ಚಿತ್ರಕ್ಕೆ ಈ ಮಟ್ಟಿನ ಪ್ರತಿಕ್ರಿಯೆ ಬೆಂಗಳೂರಿನಲ್ಲಿ ವ್ಯಕ್ತವಾಗಿತ್ತು. ಖುದ್ದು ಕಮಲಹಾಸನ್ ಬೆಂಗಳೂರಿನಲ್ಲಿ ಚಿತ್ರದ ಪ್ರಚಾರ ನಡೆಸಿ, ಅಂಬರೀಶ್ ಅವರನ್ನು ಭೇಟಿ ಮಾಡಿದ್ದರು. ಈಗ ಮತ್ತೊಂದು ತಮಿಳು ಚಿತ್ರ ಬೆಂಗಳೂರಿನಲ್ಲಿ ಗುಲ್ಲೆಬ್ಬಿಸುತ್ತಿದೆ.

English summary
Surya has struck the gold in Bangalore once again. The Ghajini star has cast the magic spell again with his latest movie Singam 2, as it has continued to rock at Box Office in the second week.
Please Wait while comments are loading...