»   » ಮಲೇಶಿಯಾದಲ್ಲಿ ದರ್ಶನ್ 'ತಾರಕ್' ಹಾಡಿನ ಚಿತ್ರೀಕರಣ

ಮಲೇಶಿಯಾದಲ್ಲಿ ದರ್ಶನ್ 'ತಾರಕ್' ಹಾಡಿನ ಚಿತ್ರೀಕರಣ

Posted By:
Subscribe to Filmibeat Kannada

ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಶೂಟಿಂಗ್ ಮಲೇಶಿಯಾದಲ್ಲಿ ನಡೆಯುತ್ತಿದೆ. ಸದ್ಯ ಸಿನಿಮಾದ ಸ್ಪೆಷಲ್ ಹಾಡಿನ ಚಿತ್ರೀಕರಣವಾಗುತ್ತಿದ್ದು, ಹಾಡಿನ ಕೆಲ ಮೇಕಿಂಗ್ ಫೋಟೋಗಳು ಇದೀಗ ಹೊರಬಿದ್ದಿದೆ.

ನಟ ದರ್ಶನ್ ಮತ್ತು ಕುರಿ ಪ್ರತಾಪ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸ್ಪೆಷಲ್ ಹಾಡನ್ನು ಒಂದು ಕ್ಲಬ್ ನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಹಾಟ್ ಬೆಡಗಿಯರೊಂದಿಗೆ ಕುರಿ ಪ್ರತಾಪ್ ಹೆಜ್ಜೆ ಹಾಕಿದ್ದಾರೆ.

['ತಾರಕ್' ದರ್ಶನ್ ಗೆ ಮೊತ್ತೊಬ್ಬ ನಾಯಕಿ 'ಮಾಸ್ಟರ್ ಪೀಸ್' ಬೆಡಗಿ?]

'Tarak' Movie song shooting in malesia

ಈ ಹಿಂದೆ ಮಲೇಶಿಯಾದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಈಗ ಹಾಡಿನ ಶೂಟಿಂಗ್ ಮಾಡುತ್ತಿದೆ. ಸಿನಿಮಾದ ಅನೇಕ ದೃಶ್ಯಗಳನ್ನು ಮಲೇಶಿಯಾದಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಭಾಗದ ಶೂಟಿಂಗ್ ನಲ್ಲಿ ನಟಿ ಶಾನ್ವಿ ಶ್ರೀವಾಸ್ತವ ಕೂಡ ಭಾಗಿಯಾಗಿದ್ದರು.

['ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್]

'Tarak' Movie song shooting in malesia

'ತಾರಕ್' ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಶೃತಿ ಹರಿಹರನ್ ಸಹ ಚಿತ್ರದ ಮತ್ತೊಬ್ಬ ನಾಯಕಿಯಾಗಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ವಿದೇಶಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

['ತಾರಕ್'ಗಾಗಿ ಮಲೇಷ್ಯಾದಲ್ಲಿ ದರ್ಶನ್ ಅದ್ಧೂರಿ ಸಾಹಸ]

English summary
Darshan starrer 'Tarak' Movie song shooting in Malaysia. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada