twitter
    For Quick Alerts
    ALLOW NOTIFICATIONS  
    For Daily Alerts

    ವಿವಾದಕ್ಕೆ ಕಾರಣವಾಗಿದ್ದ 'ದಿ ವಿಲನ್' ಹಾಡು ಬಂತು ನೋಡ್ರಪ್ಪಾ.!

    By Bharath Kumar
    |

    Recommended Video

    Tick Tick Tick New Lyrical Video 2018 | The Villain | ShivarajKumar | Sudeepa | Song Released

    ಇಷ್ಟು ದಿನ ಮೇಕಿಂಗ್, ಪೋಸ್ಟರ್ ನಿಂದ ಸದ್ದು ಮಾಡುತ್ತಿದ್ದ 'ದಿ ವಿಲನ್' ಈಗ ಹಾಡುಗಳಿಂದ ಅಬ್ಬರಿಸುತ್ತಿದೆ. 'ದಿ ವಿಲನ್' ಚಿತ್ರದ ಎರಡನೇ ಹಾಡು ರಿಲೀಸ್ ಆಗಿದ್ದು, ಒಂದಕ್ಕಿಂತ ಮತ್ತೊಂದು ಕಿಕ್ ಹೆಚ್ಚಿಸುತ್ತಿದೆ.

    ನಿರೀಕ್ಷೆಯಂತೆ ಎರಡನೇ ಹಾಡು ಶಿವರಾಜ್ ಕುಮಾರ್ ಅವರ ಬಗ್ಗೆಯೆ ಇರುತ್ತೆ ಎಂಬ ಅಂದಾಜು ಹಾಕಲಾಗಿತ್ತು. ಅದರಂತೆ ಶಿವಣ್ಣ ಕುರಿತಾದ ಹಾಡು ರಿಲೀಸ್ ಆಗಿದೆ. 'ಟಿಕ್ ಟಿಕ್ ಟಿಕ್....' ಶುರುವಾಗ ಈ ಸಾಲುಗಳು ಸಂಪೂರ್ಣವಾಗಿ ಹ್ಯಾಟ್ರಿಕ್ ಹೀರೋಗೆ ಹೇಳಿ ಮಾಡಿಸಿದಂತಿದೆ.

    ಅಂದ್ಹಾಗೆ, ಈ ಹಾಡು ಬಿಡುಗಡೆಗೂ ಮುಂಚೆ ವಿವಾದಕ್ಕೆ ಕಾರಣವಾಗಿತ್ತು. 'ನಿನ್ನೆ ಮೊನ್ನೆ ಬಂದವರೆಲ್ಲಾ ನಂಬರ್ ಒನ್ ಅಂತಾವ್ರೋ....' ಎಂಬ ಸಾಲುಗಳು ಕೆಲವರು ಆಕ್ರೋಶಕ್ಕೆ ಗುರಿ ಮಾಡಿತ್ತು. ಇದೀಗ. ಈ ಹಾಡು ಬಂದಿದ್ದು, ಈ ಸಾಲು ಯಾಕೆ ಬಳಸಲಾಗಿದೆ ಎಂಬುದು ಗೊತ್ತಾಗಿದೆ. ಪೂರ್ತಿ ಓದಿ....

    ಮೊದಲೇ ವಿವಾದಕ್ಕೆ ಕಾರಣವಾಗಿದ್ದ ಹಾಡಿದು

    ಮೊದಲೇ ವಿವಾದಕ್ಕೆ ಕಾರಣವಾಗಿದ್ದ ಹಾಡಿದು

    ಈ ಹಾಡು ಬಿಡುಗಡೆಗೆ ಮುಂಚೆಯೇ ವಿವಾದಕ್ಕೆ ಕಾರಣವಾಗಿತ್ತು. 'ನಿನ್ನೆ ಮೊನ್ನೆ ಬಂದವರೆಲ್ಲಾ ನಂಬರ್ ಒನ್ ಅಂತಾವ್ರೋ....' ಎಂಬ ಸಾಲು ಈ ಹಾಡಿನಲ್ಲಿತ್ತು. ಈ ಸಾಲನ್ನ ಹೈಲೈಟ್ ಮಾಡಿದ್ದ ಪ್ರೇಮ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದರು. ನಂತರ ಕೆಲವರು ಈ ಸಾಲಿನ ವಿರುದ್ಧ ಕಿಡಿಕಾರಿದ್ದರು.

    ಪರಭಾಷಿಗರನ್ನ ಹಿಂದಿಕ್ಕಿದ 'ವಿಲನ್' ಟ್ರೆಂಡಿಂಗ್ ನಲ್ಲಿ ನಂಬರ್ 1 ಪರಭಾಷಿಗರನ್ನ ಹಿಂದಿಕ್ಕಿದ 'ವಿಲನ್' ಟ್ರೆಂಡಿಂಗ್ ನಲ್ಲಿ ನಂಬರ್ 1

    ಸ್ಪಷ್ಟನೆ ನೀಡಿದ್ದ ಪ್ರೇಮ್

    ಸ್ಪಷ್ಟನೆ ನೀಡಿದ್ದ ಪ್ರೇಮ್

    ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಬಗ್ಗೆ ಚರ್ಚೆಗಳು ಆಗಿದ್ದನ್ನ ಗಮನಿಸಿದ ನಿರ್ದೇಶಕ ಪ್ರೇಮ್, ಉದ್ದೇಶಪೊರ್ವಕವಾಗಿ ಈ ಸಾಲು ಬಳಸಿಲ್ಲ. ಕಥೆಗೆ ಅವಶ್ಯಕವಾಗಿದ್ದರಿಂದ ಬಳಸಲಾಗಿದೆ ಎಂದಿದ್ದರು. ಹೀಗಾಗಿ, ಈ ಹಾಡು ಹೇಗಿರುತ್ತಪ್ಪಾ ಎಂದು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ರಿಲೀಸ್ ಆಗಿದೆ.

    ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡುಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು

    ದೊಡ್ಡ ಗಾಯಕರ ಕಂಠದಲ್ಲಿ ಹಾಡು

    ದೊಡ್ಡ ಗಾಯಕರ ಕಂಠದಲ್ಲಿ ಹಾಡು

    ಸದ್ಯ ಬಿಡುಗಡೆಯಾಗಿರುವ ಈ ಹಾಡಿಗೆ ಸ್ವತಃ ಪ್ರೇಮ್ ಅವರ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಕೈಲಾಶ್ ಖೇರ್, ವಿಜಯ ಪ್ರಕಾಶ್ ಹಾಗೂ ನಿರ್ದೇಶಕ ಪ್ರೇಮ್ ಹಾಗೂ ಸಿದ್ಧಾರ್ಥ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ 10 ಲಕ್ಷ ಜನ ಈ ಹಾಡನ್ನ ನೋಡಿದ್ದಾರೆ.

    ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು

    ಮೊದಲ ಹಾಡು

    ಮೊದಲ ಹಾಡು

    ಈ ಮೊದಲು ದಿ-ವಿಲನ್ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. 'ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ, ಕೋಟೆ ಕಟ್ಟಿ ಮೆರೆದವನಲ್ಲ ಆದ್ರೂ ರಾಜ್ಯ ಆಳುತ್ತವನಲ್ಲ' ಎಂದು ಮೂಡಿ ಬಂದಿದ್ದ ಈ ಹಾಡಿಗೆ ಜೋಗಿ ಪ್ರೇಮ್ ಸಾಹಿತ್ಯ ಬರೆದಿದ್ದರು. ಶಂಕರ್ ಮಹಾದೇವನ್ ಹಾಡಿದ್ದ ಈ ಟೈಟಲ್ ಟ್ರ್ಯಾಕ್ ಕೇಳುಗರಿಗೆ ಸಖತ್ ಕಿಕ್ ನೀಡಿತ್ತು.

    ಆಗಸ್ಟ್ 24ಕ್ಕೆ ಸಿನಿಮಾ.?

    ಆಗಸ್ಟ್ 24ಕ್ಕೆ ಸಿನಿಮಾ.?

    ಇನ್ನುಳಿದಂತೆ ದಿ ವಿಲನ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡೊಂದು ಬಾಕಿ ಇತ್ತು. ಆ ಹಾಡಿನ ಚಿತ್ರೀಕರಣ ಕೂಡ ಈಗ ನಡೆಯುತ್ತಿದೆ. ನಂತರ ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ಆಗಸ್ಟ್ 24 ರಂದು ತೆರೆಗೆ ತರುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆಯಂತೆ.

    ಅಭಿಮಾನಿಗಳ ನಡುವಿನ ಸಮರಸಕ್ಕೆ ಪ್ರೇಮ್ ಮಾಡಿದ ಪ್ಲಾನ್

    English summary
    The second song from Shivaraj Kumar and Kiccha Sudeep's The Villain has hit the internet with a bang. Arjun Janya-composed music is sung by Kailash Kher, Vijay Prakash and director Prem himself.
    Saturday, July 21, 2018, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X