For Quick Alerts
  ALLOW NOTIFICATIONS  
  For Daily Alerts

  ಪಾರ್ವತಮ್ಮ ಪಾರ್ಥೀವ ಶರೀರಕ್ಕೆ ರಾಷ್ಟ್ರಧ್ವಜ ಬಳಕೆ: ದೂರು ದಾಖಲು

  By Suneel
  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರ ಪಾರ್ಥೀವ ಶರೀರದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿದ್ದ ಬಗ್ಗೆ ವಿರೋಧಿಸಿ ಖಾಸಗಿ ದೂರು ದಾಖಲಾಗಿದೆ.[ಮಣ್ಣಲ್ಲಿ ಮಣ್ಣಾದ ಕನ್ನಡ ಚಿತ್ರರಂಗದ 'ವಜ್ರೇಶ್ವರಿ' ಪಾರ್ವತಮ್ಮ ರಾಜ್ ಕುಮಾರ್]

  ಪಾರ್ವತಮ್ಮ ರಾಜ್ ಕುಮಾರ್ ಅಂತಿಮಯಾತ್ರೆಯಲ್ಲಿ ರಾಷ್ಟ್ರಧ್ವಜ ಬಳಕೆ ಮಾಡಿರುವುದು 1971 ರ ರಾಷ್ಟ್ರಧ್ವಜ ನಿಯಮ 5ರ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ವಿಜಯನಗರದ ವಕೀಲರೊಬ್ಬರು ಶುಕ್ರವಾರ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಆದರೆ ಈ ದೂರನ್ನು ನ್ಯಾಯಾಲಯ ಇನ್ನೂ ಕೈಗೆತ್ತಿಕೊಂಡಿಲ್ಲ ಎಂದು ತಿಳಿದಿದೆ.

  ವಿಜಯರನಗರದ ವಕೀಲ ಚೇತನ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ನಗರದ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

  ಪಾರ್ವತಮ್ಮ ರಾಜ್ ಕುಮಾರ್ ರವರ ಪಾರ್ಥೀವ ಶರೀರವನ್ನು ಮೇ 31 ರಂದು ರಾಷ್ಟ್ರಧ್ವಜ ಹೊದಿಸಿ ಕಂಠೀರವ ಸ್ಟುಡಿಯೋಗೆ ಮೆರವಣಿಗೆಯಲ್ಲಿ ಕೊಂಡೊಯ್ದು, ಡಾ.ರಾಜ್ ಸಮಾಧಿಯ ಪಕ್ಕದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು.['ದೊಡ್ಮನೆ ಅಮ್ಮ'ನಿಗೆ ಕನ್ನಡ ಚಿತ್ರರಂಗದ ಗಣ್ಯರ ನುಡಿ ನಮನ]

  English summary
  A city advocate has approached a magistrate court with a private complaint against the draping of the national flag on the coffin of Parvathamma Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X