For Quick Alerts
  ALLOW NOTIFICATIONS  
  For Daily Alerts

  ಜಲ್ಲಿಕಟ್ಟು ವಿವಾದ: ತಮಿಳುಗರಿಗೆ ವಿಲನ್ ಆದ್ರು ತ್ರಿಷಾ

  By Suneel
  |

  ತಮಿಳುನಾಡು ರಾಜ್ಯದಲ್ಲಿ ಜಲ್ಲಿಕಟ್ಟು ವಿವಾದ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಸಂಬಂಧ ಪಟ್ಟಂತೆ ಕಾಲಿವುಡ್ ಮೋಹಕ ತಾರೆ ತ್ರಿಷಾ ಕೃಷ್ಣನ್ ಪ್ರತಿಕ್ರಿಯೆ ನೀಡಿ ಈಗ ತಮ್ಮ ಟ್ವಿಟರ್ ಖಾತೆಯನ್ನೇ ಸ್ಥಗಿತಗೊಳಿಸಿದ್ದಾರೆ.[ಪ್ರಿಯಕರನೊಂದಿಗೆ ತಾರೆ ತ್ರಿಷಾ ಗುಟ್ಟಾಗಿ ನಿಶ್ಚಿತಾರ್ಥ]

  ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಕೇಳಿ ತಮಿಳು ನಾಡಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ, ಇಂತಹ ಸಮಯದಲ್ಲಿ ತ್ರಿಷಾ ತಮ್ಮ ಟ್ವಿಟರ್ ಖಾತೆಯಿಂದ ಜಲ್ಲಿಕಟ್ಟು ಕ್ರೀಡೆಗೆ ವಿರೋಧ ವ್ಯಕ್ತಪಡಿಸುವಂತಹ ಸಂದೇಶ ನೀಡಿದ್ದರು. "ಸಂಪ್ರದಾಯ ಎಷ್ಟು ದೀರ್ಘಕಾಲದ್ದಾದರೇನು, ಪ್ರಾಣಿಗಳನ್ನು ಹಿಂಸಿಸುವುದನ್ನು ವಿರೋಧಿಸುತ್ತೇನೆ. ನಾನು ತಮಿಳುಗಳಾಗಿದ್ದು, 'ಪೆಟಾ'ಗೆ ಬೆಂಬಲ ವ್ಯಕ್ತಪಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದರು. ಇವರ ಈ ಪ್ರತಿಕ್ರಿಯೆ ಈಗ ಜನರ ಪಾಲಿಗೆ ತ್ರಿಷಾ ವಿಲನ್‌ ಆಗಿ ಕಾಣುವಂತೆ ಮಾಡಿದೆ.

  'ಘರ್ಜನೈ' ಸಿನಿಮಾ ಚಿತ್ರೀಕರಣದಲ್ಲಿ ತ್ರಿಷಾ ಬ್ಯುಸಿಯಾಗಿದ್ದ ವೇಳೆ, ಶೂಟಿಂಗ್ ಸ್ಥಳಕ್ಕೆ ಹೋರಾಟಗಾರರು ದಾವಿಸಿ ಪ್ರತಿಭಟನೆ ಮಾಡಿದ್ದರು. ಈ ಸಮಯದಲ್ಲಿ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ತ್ರಿಷಾ ಮನೆಗೆ ಹೋಗಿದ್ದರು.[ಮದುವೆ ಸುದ್ದಿ ಬಗ್ಗೆ ಮೌನ ಮುರಿದ ತ್ರಿಷಾ ಕೃಷ್ಣನ್]

  ಹೋರಾಟಗಾರರ ಪ್ರತಿಭಟನೆಗೆ ಬೆಚ್ಚಿ ಬಿದ್ದ ತ್ರಿಷಾ ಮತ್ತೆ ಜಲ್ಲಿಕಟ್ಟು ವಿರುದ್ಧವಾಗಿ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಯಾವುದೇ ಟ್ವೀಟ್ ಅನ್ನು ಮಾಡಿಲ್ಲ. ನನ್ನ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಯಾರೋ ಹ್ಯಾಕ್ ಮಾಡಿದ್ದಾರೆ. ಆದ್ದರಿಂದ ನನ್ನ ಟ್ವಿಟರ್ ಖಾತೆಯನ್ನು ಡಿಆಕ್ಟಿವೇಟ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತ್ರಿಷಾ ತಾಯಿ ಉಮಾ ಕೃಷ್ಣನ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ರಕ್ಷಣೆ ಕೇಳಿದ್ದಾರೆ.

  English summary
  Actress Trisha's mother Uma Krishnan has lodged a complaint with the city police commissioner's office seeking protection for her daughter and action against those who hacked into her Twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X