For Quick Alerts
  ALLOW NOTIFICATIONS  
  For Daily Alerts

  ತುಳು ದೈವ ಕೊರಗಜ್ಜನ ಸಿನಿಮಾ 'ಕರಿ ಹೈದ ಕರಿ ಅಜ್ಜ'ಮೂರು ಭಾಷೆಯಲ್ಲಿ ರಿಲೀಸ್!

  |

  'ಕಾಂತಾರ' ಸಿನಿಮಾ ಬಳಿಕ ತುಳುನಾಡಿನ ಮತ್ತೊಂದು ದೈವದ ಮಹಿಮೆಯನ್ನು ತೆರೆಮೇಲೆ ತರುವುದಕ್ಕೆ ಚಿತ್ರತಂಡ ಮುಂದಾಗಿದೆ. ಅದುವೇ 'ಕರಿ ಹೈದ ಕರಿ ಅಜ್ಜ'. ತುಳುನಾಡಿಗರು ಅತಿಯಾಗಿ ನಂಬುವ ಕೊರಗಜ್ಜನ ಮಹಿಮೆಯನ್ನು ತೆರೆಮೇಲೆ ತೋರಿಸಲು ಹೊರಟಿದೆ ಚಿತ್ರತಂಡ.

  ಸದ್ಯ 'ಕರಿ ಹೈದ ಕರಿ ಅಜ್ಜ' ಸಿನಿಮಾ ಶೂಟಿಂಗ್ ಮುಗಿದಿದ್ದು, ಸುಧೀರ್ ಅತ್ತಾವರ್ ಆಕ್ಷನ್ ಕಟ್ ಹೇಳಿದ್ದಾರೆ.ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್ ಹಾಗೂ ನಟ ಸಂದೀಪ್ ಸೋಪರ್ಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಗುಳಿಗ ಪಾತ್ರದಲ್ಲಿ ಸಂದೀಪ್

  ಗುಳಿಗ ಪಾತ್ರದಲ್ಲಿ ಸಂದೀಪ್

  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂದೀಪ್ ಸೋಪರ್ಕರ್ ಈ ಸಿನಿಮಾದಲ್ಲಿ ಗುಳಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಸುಧೀರ್ ಅತ್ತಾವರ್ ಇತ್ತೀಚೆಗಷ್ಟೇ ಕೊರಗಜ್ಜನ ಸಿನಿಮಾ ಮಾಡಿ ಮುಗಿಸಿದ್ದಾರೆ. 'ಕರಿ ಹೈದ ಕರಿ ಅಜ್ಜ' ಸಿನಿಮಾದ ಶೂಟಿಂಗ್ ವೇಳೆ ಸಾಕಷ್ಟು ಪವಾಡಗಳು ನಡೆದಿದ್ದು,ಚಿತ್ರತಂಡದ ಅನುಭವಕ್ಕೆ ಬಂದಿದೆಯಂತೆ. 22, 23 ವರ್ಷ ಬದುಕಿದ್ದ ಕೊರಗಜ್ಜ ಹುಡುಗನ ಕಥೆಯನ್ನೇ ತೆರೆಮೇಲೆ ತರಲಾಗುತ್ತಿದೆ. ಅಂದ್ಹಾಗೆ ಕೊರಗಜ್ಜನ ಜೊತೆಗೆ ಸಾಗುವ ಗುಳಿಗನ ಪಾತ್ರವನ್ನು ಡ್ಯಾನ್ಸ್ ಬೇಸ್‌ನಲ್ಲಿ ತೋರಿಸಲಾಗಿದೆಯಂತೆ.

  'ಕೊರಗಜ್ಜ' ಸಿನಿಮಾ ಮಾಡಲು ಹರಸಾಹಸ ಪಟ್ಟಿದ್ದರು

  'ಕೊರಗಜ್ಜ' ಸಿನಿಮಾ ಮಾಡಲು ಹರಸಾಹಸ ಪಟ್ಟಿದ್ದರು

  ಕೊರಗಜ್ಜನ ಬಗ್ಗೆ ಸಿನಿಮಾ ಮಾಡಲು 7 ರಿಂದ 8 ಮಂದಿ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲವಂತೆ. ಈ ತಂಡಕ್ಕೂ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಶೂಟಿಂಗ್ ಶುರು ಮಾಡಿದ್ದರು. ಈ ಸಿನಿಮಾವನ್ನು ಸೋಮೇಶ್ವರದಲ್ಲಿ ಶೂಟ್ ಆರಂಭ ಆಗಿತ್ತು. ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಆರಾಧಿಸುತ್ತಾರೆ. ಜನ ವಿಸ್ಕಿ, ಬ್ರಾಂದಿ, ಕೊರಗಜ್ಜಗೆ ನೀಡುತ್ತಿದ್ದು, ಅಂದಿನ ಕಾಲಕ್ಕೆ ಕಳ್ಳಬಟ್ಟಿ ನೀಡುತ್ತಿದ್ದರು. ಆದರೆ, ಜನ ಈಗ ವಿಸ್ಕಿ, ಬ್ರಾಂದಿ ಕೊಡುತ್ತಿರುವುದು ಕೊರಗ ಜನಾಂಗಕ್ಕೆ ಬೇಸರ ತಂದಿದೆ. ಹೀಗಾಗಿ ಈ ಸಿನಿಮಾದಲ್ಲಿ ಕೊರಗಜ್ಜನ ನೈಜ ಕಥೆ ಹೇಳಲಾಗಿದೆ.

  ಡ್ಯಾನ್ ಜೊತೆ ನಟನೆ

  ಡ್ಯಾನ್ ಜೊತೆ ನಟನೆ

  ಕೊರಗಜ್ಜನ ಸಿನಿಮಾದ ಗುಳಿಗ ಪಾತ್ರ ಮಾಡಿರುವ ಸಂದೀಪ್ ಸೋಪರ್ಕರ್ ವಿಶಿಷ್ಠ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ."ಈ ಸಿನಿಮಾ ನನಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ.ನಾನು ಮಾಡಿರೋ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಇಲ್ಲಿ ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ."ನಟ ಸಂದೀಪ್ ಸೋಪರ್ಕರ್

  ಶ್ರುತಿ, ಭವ್ಯಾ ನಟನೆ

  ಶ್ರುತಿ, ಭವ್ಯಾ ನಟನೆ

  ಕೊರಗಜ್ಜನ ಸಾಕು ತಾಯಿ ಪಾತ್ರದಲ್ಲಿ ನಟಿ ಶ್ರುತಿ ನಟಿಸಿದ್ದಾರೆ. ಭೈರಕ್ಕಿ ಅನ್ನೋ ಕೊರಗಜ್ಜನ ಸಾಕು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಹಿರಿಯ ನಟಿ ಭವ್ಯಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶೂಟಿಂಗ್ ಮಾಡುವಾಗ ಗ್ಲಿಸರಿನ್ ಇಲ್ಲಿ ಅತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

  English summary
  Tulunadu Daiva Koragajja Based Movie Kari Haida kari Ajja Competed, Know More.
  Sunday, January 15, 2023, 22:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X