»   » ಕಿರುತೆರೆ ನಟಿ ಸಾಯಿ ಶಿರೀಶಾ ನಿಗೂಢ ನಾಪತ್ತೆ

ಕಿರುತೆರೆ ನಟಿ ಸಾಯಿ ಶಿರೀಶಾ ನಿಗೂಢ ನಾಪತ್ತೆ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸಿನಿಮಾ ನಟಿಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ತೆಲುಗು, ತಮಿಳು ನಟಿ ಅಂಜಲಿ ನಾಪತ್ತೆಯಾದ ಸುದ್ದಿಯನ್ನು ಓದಿಯೇ ಇರುತ್ತೀರಾ. ಈಗ ಟಾಲಿವುಡ್ ಚಿತ್ರರಂಗದಲ್ಲಿ ಮತ್ತೊಂದು ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಾರಿ ಮಿಸ್ ಆಗಿರುವ ನಟಿ ಹೆಸರು ಸಾಯಿ ಶಿರೀಶಾ. ಈಕೆ ಇನ್ನೂ ಹದಿನೇಳರ ಹರೆಯದ ನಟಿ. ತೆಲುಗಿನ ಲವ್ ಅಟ್ಯಾಕ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಶಿರೀಶಾ ತೆಲುಗು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಮೇ 20ರಂದು ಕಾಣೆಯಾದ ಈಕೆ ಮೂರು ತಿಂಗಳಾದರೂ ಇನ್ನೂ ಪತ್ತೆಯಾಗಿಲ್ಲ. ಶಿರೀಶಾ ತಂದೆ ಎನ್ ಪ್ರಸಾದ್ ರಾವ್ ಅವರು ಹೈದರಾಬಾದಿನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಮೇ.20ರಂದು ಕಾಣೆಯಾದ ಅವರು ಇದುವರೆಗೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೇ.20ರಂದು ಕಾಣೆಯಾದ ಬಳಿಕ ಮೂರು ದಿನಗಳ ಕಾಲ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಕುಟುಂಬಿಕರು ಆಕೆಯನ್ನು ಹಲವಾರು ಪ್ರದೇಶಗಳಲ್ಲಿ ಹುಡುಕಿದರು. ಆದರೆ ಇದುವರೆಗೂ ಅವರು ಪತ್ತೆಯಾಗಿಲ್ಲ.

ಜುಲೈ 6ರಂದು ಮೊಬೈಲ್ ನಲ್ಲಿ ಮಾತನಾಡಿದ್ದರು

ನಮ್ಮೊಂದಿಗೆ ಶಿರೀಶಾ ಕೊನೆಯದಾಗಿ ಜುಲೈ 6ರಂದು ಮಾತನಾಡಿದ್ದಾರೆ. ಆಗ ಶೀಘ್ರದಲ್ಲೇ ಮನೆಗೆ ಮರಳುವುದಾಗಿ ತಿಳಿಸಿದ್ದರು.

ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಶಿರೀಶಾ

ಅದಾದ ಬಳಿಕ ಆಕೆ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಮನೆಯ ಇತರೆ ಸದಸ್ಯರೊಂದಿಗೂ ಮಾತನಾಡಿಲ್ಲ ಎಂದಿದ್ದಾರೆ ಅವರ ತಂದೆ ಪ್ರಸಾದ್.

ಇಷ್ಟು ದಿನ ಮನೆಯವರು ಏನು ಮಾಡುತ್ತಿದರು?

ಶಿರೀಶಾ ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಪೊಲೀಸರಿಗೆ ದೂರು ನೀಡಲಿಲ್ಲ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದು ಹಲವಾರು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶಿರೀಶಾ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ

ಈಗ ಬಂಜಾರಾ ಹಿಲ್ಸ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕಾಗಿಯೇ ವಿಶೇಷ ತಂಡ ರಚಿಸಿದ್ದು ಶಿರೀಶಾ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಮೂಲ

ಪಶ್ಚಿಮ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಮೂಲದ ಶಿರೀಶಾ ಅವರ ತಂದೆ ಕಾರು ಚಾಲಕ.

ಹೈದರಾಬಾದಿನಲ್ಲಿ ಸೆಟ್ಲ್ ಆಗಿದ್ದ ಕುಟುಂಬ

ಕೆಲ ವರ್ಷಗಳ ಹಿಂದೆ ಇವರ ಕುಟುಂಬ ಹೈದರಾಬಾದಿಗೆ ಸ್ಥಳಾಂತರವಾಗಿತ್ತು.

ಕಿರುತೆರೆ ಮೂಲಕ ವೃತ್ತಿ ಬದುಕು ಆರಂಭ

ಶಿರೀಶಾ ವೃತ್ತಿ ಜೀವನ ಕಿರುತೆರೆ ಮೂಲಕ ಆರಂಭವಾಯಿತು. ಕೆಲವು ತೆಲುಗು ಧಾರಾವಾಹಿಗಳು ಸೇರಿದಂತೆ ಹಲವು ಟಿವಿ ಶೋಗಳನ್ನೂ ನಿರೂಪಿಸಿದ್ದಾರೆ.

ಲವ್ ಅಟ್ಯಾಕ್ ಬಿಡುಗಡೆಗೆ ಸಿದ್ಧವಾಗಿದೆ

ತೆಲುಗಿನ 'ಲವ್ ಅಟ್ಯಾಕ್' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟರು. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕು.

ಚಿತ್ರೀಕರಣ ಇದೆ ಎಂದು ಹೋದವಳು

ಚಿತ್ರೀಕರಣ ಇದೆ ಎಂದು ಮೇ 20ರಂದು ಹೋದ ಶಿರೀಶಾ ಇನ್ನೂ ಮನೆಗೆ ಬಂದಿಲ್ಲ. ಏತನ್ಮಧ್ಯೆ ಇನ್ನೊಂದು ಚಿತ್ರಕ್ಕೂ ಸಹಿ ಹಾಕಿದ್ದರು.

ಇಷ್ಟಕ್ಕೂ ಶಿರೀಶಾ ಏನಾದರು?

ಇಷ್ಟಕ್ಕೂ ಆಕೆ ಏನಾದರು? ಯಾರಾದರೂ ಅಪಹರಿಸಿದರೇ? ಅಥವಾ ಹತ್ಯೆಯಾದರೇ, ಏನಾದರು ಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.

English summary
TV actress Sai Sirisha, who is set to start her acting career in films with Love Attack, is said to have gone missing since May 20. On Sunday, her father N Prasada Rao approached the Banjara Hills police and told that she had left home to attend shooting on the outskirts of Hyderabad in May 20 and has not returned yet.
Please Wait while comments are loading...