»   » ಇತಿಹಾಸದ ಪುಟಕ್ಕೆ ಬೆಂಗಳೂರಿನ ಮತ್ತೆರಡು ಚಿತ್ರಮಂದಿರಗಳು

ಇತಿಹಾಸದ ಪುಟಕ್ಕೆ ಬೆಂಗಳೂರಿನ ಮತ್ತೆರಡು ಚಿತ್ರಮಂದಿರಗಳು

Posted By:
Subscribe to Filmibeat Kannada

ದಶಕಗಳ ಹಿಂದಿನ ಚಿತ್ರಮಂದಿರಗಳು ಒಂದೊಂದಾಗಿಯೇ ಮುಚ್ಚುತ್ತಿರುವುದು ಹಳೆಯ ಸುದ್ದಿ, ಈಗ ಆ ಪಟ್ಟಿಗೆ ಬೆಂಗಳೂರಿನ ಮತ್ತೆರಡು ಚಿತ್ರಮಂದಿರಗಳು ಸೇರ್ಪಡೆಯಾಗಿರುವುದು ಹೊಸ ಸುದ್ದಿ.

ನಗರದ ಕಲಾಸಿಪಾಳ್ಯದಲ್ಲಿರುವ ಅಪ್ಸರಾ ಮತ್ತು ಮಹಾಲಕ್ಷ್ಮಿಪುರಂನಲ್ಲಿರುವ ನಂದಿನಿ ಚಿತ್ರಮಂದಿರ ತನ್ನ ಕೊನೆಯ ಪ್ರದರ್ಶನವನ್ನು ಮುಗಿಸಿದೆ. (ಇತಿಹಾಸದ ಪುಟ ಸೇರಲು ಸಜ್ಜಾಗಿವೆ ನರ್ತಕಿ ಮತ್ತು ಸಪ್ನ)

ಹಿಂದಿ ಚಿತ್ರಕ್ಕೆಂದೇ ಮೀಸಲಾಗಿದ್ದ ಅಪ್ಸರ ಚಿತ್ರಮಂದಿರದಲ್ಲಿ ದರ್ಶನ್, ರಕ್ಷಿತಾ ಅಭಿನಯದ ಕಲಾಸಿಪಾಳ್ಯ ಚಿತ್ರ ಬಹುದಿನಗಳ ನಂತರ ಪ್ರದರ್ಶನಗೊಂಡಿತ್ತು.

Two more single screen theaters in Bengaluru closed operation

ಇದಾದ ನಂತರ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಈಗ ಅಪ್ಸರಾ ಚಿತ್ರಮಂದಿರ ಇತಿಹಾಸದ ಪುಟಕ್ಕೆ ಸೇರಿದೆ, ಚಿತ್ರಮಂದಿರವನ್ನು ನೆಲಸಮ ಮಾಡಲಾಗಿದೆ.

ಆದರೆ, ನಂದಿನಿ ಚಿತ್ರಮಂದಿರದ ವಿಚಾರದಲ್ಲಿ ಹಾಗಲ್ಲ. ಈ ಚಿತ್ರಮಂದಿರ ಕನ್ನಡ ಸಿನಿಮಾಗಳಿಗಾಗಿಯೇ ಮೀಸಲಾಗಿತ್ತು. ಕನ್ನಡ ಚಿತ್ರಗಳ ಸೆಂಟರ್‌ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ನಂದಿನಿ ಚಿತ್ರಮಂದಿರ ಸದ್ಯ ತನ್ನ ಕಾರ್ಯ ಸ್ಥಗಿತಗೊಳಿಸಿದೆ.

ಉತ್ತಮ ಗುಣಮಟ್ಟದ ಚಿತ್ರಮಂದಿರಗಳಲ್ಲೊಂದಾಗಿದ್ದ ನಂದಿನಿ ಚಿತ್ರಮಂದಿರದಲ್ಲಿ ಹದಿನೈದು ದಿನದಿಂದ ಯಾವುದೇ ಶೋ ನಡೆಯುತ್ತಿಲ್ಲ. ಇಲ್ಲಿ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ ಎನ್ನುವ ಸುದ್ದಿಯಿದೆ.

English summary
Two more single screen theaters in Bengaluru closed operation. Apsara theater in Kalasipalya and Nandini theater in Mahalakshmi Puram stopped screening.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X