For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಮಾಡಿರೋ ಉಪ್ಪಿ 2 ತಿನ್ನೋ ಮುನ್ನ ಓದಿ!

  By Mahesh
  |

  ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರೋ ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಅಂದರೆ ಏನು ಅಂತ ಕನ್ನಡ ಚಿತ್ರರಂಗಕ್ಕೇ ತೋರಿಸಿಕೊಟ್ಟವರು. ಉಪೇಂದ್ರ ಸೂಪರ್ ಸಿನಿಮಾ ವಿಷಯದಲ್ಲೂ ಮಾಧ್ಯಮದ ಮುಂದೆ ತೊಡೆತಟ್ಟಿ ಹೇಳಿದ್ರು ಸಿನಿಮಾ ಡಿಫರೆಂಟಾಗಿರುತ್ತೆ ಅಂಥ.

  ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸುವ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ್ದ 'ಉಪೇಂದ್ರ' ಚಿತ್ರದ ಎರಡನೇ ಭಾಗ ಸೆಟ್ಟೇರಿ ಎರಡು ವರ್ಷಗಳು ಕಳೆದಿರುವುದು ಎಲ್ಲರಿಗೂ ಗೊತ್ತೇ ಇದೆ.

  ಈಗ ಈ ಪ್ರೊಡೆಕ್ಷನ್ ನ ಬಹುನಿರೀಕ್ಷಿತ ಚಿತ್ರ ಉಪ್ಪಿ 2 ಚಿತ್ರ ಆಗಸ್ಟ್ 14ರಂದು ಮಧ್ಯರಾತ್ರಿಗೆ ಬಿಡುಗಡೆಯಾಗಲಿದೆ. ಅಲ್ಲಿಗೆ ನಾನು ಎಂಬ ಜೀವಿಗೆ ಸ್ವಾತಂತ್ರ್ಯ ಸಿಕ್ಕಿ ನೀನು ನಾವು ನೀವು ಇರುವ ಪ್ರಪಂಚಕ್ಕೆ ನಾಯಕನ ಪ್ರವೇಶವಾಗಲಿದೆ.

  1999ರಲ್ಲಿ ತೆರೆಕಂಡ 'ಉಪೇಂದ್ರ' ಚಿತ್ರದಲ್ಲಿ ಮೂವರು ನಾಯಕಿಯರಿದ್ದರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಈಗ ಕ್ರಿಸ್ಟೀನಾ ಅಖಿವಾ, ಪರೂಲ್ ಯಾದವ್ ನಾಯಕಿಯರು. ನಾಯಕಿಯರು ಹೇಗೆ ಕಥೆಯ ಪ್ರಮುಖ ಪಾತ್ರ ಎಂಬುದನ್ನು ಕಾಣಲು ಚಿತ್ರಮಂದಿರಕ್ಕೆ ಬನ್ನಿ. [ರಿಯಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಕಿಚ್ಚ]

  "ನಾನು ಚಿತ್ರ ಮಾಡುವುದು ನನಗಾಗಿ. ನನ್ನೊಳಗಿನ ಕಲಾವಿದನ ಸಂತೃಪ್ತಿಗಾಗಿ ನನ್ನ ಅಭಿಮಾನಿಗಳು ನನ್ನ ಎಲ್ಲಾ ಪ್ರಯತ್ನಗಳಿಗೆ ಕೈ ತಟ್ಟಿ ಬೆಂಬಲಿಸಿರುವುದರಿಂದ ನಾನು ಅವರ ಮುಂದೆ ನೈಜವಾಗಿ ನನ್ನೊಳಗಿರುವ ಪ್ರತಿಭೆ ಅನಾವರಣ ಮಾಡುತ್ತಾ ಬಂದಿದ್ದೇನೆ" ಎಂದು ಉಪೇಂದ್ರ ಹೇಳಿದ್ದಾರೆ. ನಿMMA ಉಪ್ಪಿUnknownನು ಹೇಳಿದ್ದೇನು..

  ತಿದ್ದುಪಡಿ:
  ಉಪ್ಪಿ2 ಚಿತ್ರದ ಛಾಯಾಗ್ರಾಹಕರ ಹೆಸರು ತಪ್ಪಾಗಿ ಬರೆಯಲಾಗಿತ್ತು. ಈಗ ತಿದ್ದುಪಡಿ ಮಾಡಲಾಗಿದೆ. ಇದನ್ನು ಫೇಸ್ ಬುಕ್ ನಲ್ಲಿ ಸ್ವಚ್ಛ ನುಡಿಗಳೊಂದಿಗೆ ಸೂಚಿಸಿದ ಸಾರಕ್ಕಿ ಮಂಜು ಅವರಿಗೆ ಧನ್ಯವಾದಗಳು.

  ಉಪೇಂದ್ರ ಭಾಗ ಎರಡಲ್ಲ ಉಪ್ಪಿ 2

  ಉಪೇಂದ್ರ ಭಾಗ ಎರಡಲ್ಲ ಉಪ್ಪಿ 2

  'ಉಪೇಂದ್ರ' (1999) ಚಿತ್ರದ ಮುಂದುವರೆದ ಭಾಗವಂತೂ ಖಂಡಿತ ಅಲ್ಲ ಎಂದಿದ್ದಾರೆ ಉಪ್ಪಿ. ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಪೆನ್ನು, ಪೇಪರ್ ಖರ್ಚು ಮಾಡಿರುವ ಉಪ್ಪಿ ಅವರು ಅದಕ್ಕಿಂತ ಹೆಚ್ಚಾಗಿ ತಲೆ ಓಡಿಸಿದ್ದು ಅದ್ಭುತ ಸ್ಕ್ರಿಪ್ಟ್ ಕೊನೆಗೂ ತಯಾರಿಸಿದ್ದಾರಂತೆ. ಹೀಗಾಗಿ ತಲೆಕೆಡಿಸಿಕೊಳ್ಳದೆ ಚಿತ್ರಮಂದಿರಕ್ಕೆ ಹೋಗಿ ಬನ್ನಿ

  ಉಪ್ಪಿ 2 ಕಥೆ ಏನಿರಬಹುದು?

  ಉಪ್ಪಿ 2 ಕಥೆ ಏನಿರಬಹುದು?

  ಉಪೇಂದ್ರ ಚಿತ್ರದಲ್ಲಿ ಅದ್ವೈತ ತತ್ತ್ವ (ತತ್ವಮಸಿ) ಸಾರಿದ್ದ ಉಪ್ಪಿ ಇಲ್ಲಿ ದ್ವೈತ ತತ್ತ್ವ ಸಾರಲು ಹೊರಟ ಹಾಗೆ ಕಾಣುತ್ತದೆ. ಉಪೇಂದ್ರ ಚಿತ್ರದ ಕೊನೆಗೆ ನಾನು ಯಾರು ಎಂಬುದನ್ನು ಅರಿತ ನಾಯಕ ಎಲ್ಲವನ್ನು ತೊರೆದು ಹೊರಡುತ್ತಾನೆ. ಬೇರೆಯೊಬ್ಬರ ಬಗ್ಗೆ ಕೈ ಮಾಡಿ ತೋರಿಸುವುದಕ್ಕೂ ಮೊದಲು ನಾನು ಬದಲಾಗಬೇಕು ನಂತರ ಬೇರೆಯವರನ್ನು ಬದಲಾಯಿಸಬೇಕು ಎಂಬ ಆಶಯ ಇರಬಹುದು.

  ನಾನು ಬದಲಾದೆ ಈಗ 'ನೀನು' ಬದಲಾಗು

  ನಾನು ಬದಲಾದೆ ಈಗ 'ನೀನು' ಬದಲಾಗು

  ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಒಂದು ಹಾಡಿನ ಸಾಲು ಹೀಗಿದೆ: 'ಕಣ್ಣಮುಚ್ಚಿ ಕುಳಿತರೆ ಕಾಣುವೆ ನೀನೊಬ್ಬನೇ, ಕಣ್ಣ ತೆರೆದು ನೋಡಲು ಕಾಣ್ವರು ನೂರಾರು ಶಿವರು". ಅದರಂತೆ, ನಾನು ಬದಲಾದೆ ಈಗ 'ನೀನು' ಬದಲಾಗು ಎಂದು ಜಗತ್ತಿಗೆ ನಾಯಕ ಸಾರುವ ಕಥೆ ಇರಬಹುದು. ಕಥೆ ಎಳೆ ಚಿಕ್ಕದ್ದಾದರೂ ಉಪ್ಪಿ ನಿರೂಪಣೆ ನೋಡಲು ಹೋಗಲೇ ಬೇಕು. ಕಥೆಯ ಮೂಲತತ್ತ್ವವನ್ನು ಹೇಗೆ ಕಮರ್ಷಿಯಲ್ ಆಗಿ ತೊರಿಸಬಹುದು ಎಂಬ ಕಲೆ ಉಪೇಂದ್ರ ಅವರಿಗೆ ಸಿದ್ಧಿಸಿದೆ.

  ಉಪ್ಪಿ 2 ಉಪೇಂದ್ರನ ಮತ್ತೊಂದು ಮುಖ

  ಉಪ್ಪಿ 2 ಉಪೇಂದ್ರನ ಮತ್ತೊಂದು ಮುಖ

  ಉಪ್ಪಿ 2: ಉಪ +ಇಂದ್ರನ ಮತ್ತೊಂದು ಮುಖ ಅನಾವರಣ ಮಾಡುವ ಸಾಧ್ಯತೆಯಿದೆ. ಉಪೇಂದ್ರನ ಅಪ್ಗ್ರೇಡ್ ಆಗಿ ಕಾಣಬಹುದು. ಚಿತ್ರ ಸೆಟ್ಟೇರುವ ಕಾಲದಲ್ಲೂ ಆಹ್ವಾನ ಪತ್ರಿಕೆ ಜತೆಗೆ ಎಲ್ಲರ ಕೈಲಿ ಇದ್ದಿದ್ದು ಕನ್ನಡಿ.. ಕನ್ನಡಿಯಲ್ಲಿ ಕಾಣುವುದು ನಿಮ್ಮನ್ನು ನೀವೇ ಎಂದು ಉಪ್ಪಿ ಹೇಳಲು ಹೊರಟ್ಟಂತಿದೆ. ಉಫೇಂದ್ರ ಚಿತ್ರದಲ್ಲೇ ನಿಮ್ಮನ್ನು ನೀವು ತಿದ್ದಿಕೊಳ್ಳಿ ಎಂದಿದ್ದ ಉಪ್ಪಿ ಈಗ ಉಪ್ಪಿ 2 ಚಿತ್ರದಲ್ಲಿ ಕನ್ನಡಿಯೊಳಗಿನ ಬಿಂಬವನ್ನು ನಿಮ್ಮ ಮುಂದಿಡಲಿದ್ದಾರೆ.

  ನೀನು ಎಂಬುದು ಹೊಸ ಕಾನ್ಸೆಪ್ಟಾ

  ನೀನು ಎಂಬುದು ಹೊಸ ಕಾನ್ಸೆಪ್ಟಾ

  ನನ್ನ ಹಿಂದಿನ ಉಪೇಂದ್ರ ಚಿತ್ರದಲ್ಲಿ ನಾನು ಎನ್ನುವ ಪದವನ್ನು ಬಳಸಿದ್ದೆ, ಈ ಚಿತ್ರದಲ್ಲಿ ನೀನು ಎನ್ನುವ ಪದ ಬಳಸಿಕೊಂಡಿದ್ದೇನೆ. ನಾನು ಆದಮೇಲೆ ನೀನು. ಅಷ್ಟೇ, ಅದಕ್ಕೆ ವಿಶೇಷ ಅರ್ಥವೇನೂ ಇಲ್ಲ ಎಂದು ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಉಪ್ಪಿ ಹೇಳಿಕೊಂಡಿದ್ದರು. [ಪೂರ್ತಿ ಸಂದರ್ಶನ ಇಲ್ಲಿ ಓದಿ]

  ಸದಭಿರುಚಿ ಚಿತ್ರಗಳನ್ನು ಬೆಳೆಸಲು ಚಿತ್ರ ಬೆಂಬಲಿಸಿ

  ಸದಭಿರುಚಿ ಚಿತ್ರಗಳನ್ನು ಬೆಳೆಸಲು ಚಿತ್ರ ಬೆಂಬಲಿಸಿ

  ಉಪೇಂದ್ರ ಪ್ರೊಡಕ್ಷನ್ ಬ್ಯಾನರಿನ ಈ ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಮತ್ತು ಸಿ ಆರ್ ಮನೋಹರ್ ನಿರ್ಮಾಪಕರು.

  ಗುರುಕಿರಣ್ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ಈ ಚಿತ್ರದಲ್ಲೂ ಮುಂದುವರೆಯಲಿದೆ. ಸೂಪರ್ (2010) ಚಿತ್ರದ ಬಳಿಕ ಉಪೇಂದ್ರ ಯಾವ ಚಿತ್ರವನ್ನೂ ನಿರ್ದೇಶಿಸಿಲ್ಲ. ಉಪ್ಪಿ ಡೈರೆಕ್ಟರ್ ಹ್ಯಾಟ್ ಧರಿಸಿದರೆ ಆ ಚಿತ್ರ ಸೋಲುವ ಮಾತೇ ಇಲ್ಲ ಎಂಬ ನಂಬಿಕೆಯಿದೆ.

  English summary
  Upendra a different director, actor and narrator also a trend setter in Sandalwood aka Kannada Film Industry. Here is a preview to UPP 2 his latest creation which is already creating a buzz in the industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X