Don't Miss!
- Sports
ಟಿ20 ಕ್ರಿಕೆಟ್ನಿಂದ ಕೊಹ್ಲಿ, ರೋಹಿತ್ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್
- Automobiles
ನವ ದಂಪತಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ...ಶ್ರೀಮಂತ ಸೆಲಬ್ರಿಟಿ ಯಾರು? ಇವರ ಕಾರ್ ಕಲೆಕ್ಷನ್ ನೋಡಿ ಸಾಕು...
- Technology
ಸ್ಮಾರ್ಟ್ಫೋನ್ ಖರೀದಿಸಬೇಕೇ?.. ಫೆಬ್ರವರಿಯಲ್ಲಿ ಈ ಫೋನ್ಗಳು ಲಾಂಚ್ ಆಗಲಿವೆ ನೋಡಿ!
- Lifestyle
ತನ್ನ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳಿವು
- News
Vande Bharat Express; ದಕ್ಷಿಣ ಭಾರತಕ್ಕೆ 3 ಹೊಸ ರೈಲುಗಳು
- Finance
ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ಹೊಸ ಡೆಡ್ಲೈನ್ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಪ್ಪಿಯ 'ಯುಐ'ನಲ್ಲಿ 'ಅವತಾರ್ 2' ಟೆಕ್ನಾಲಜಿ ಬಳಕೆ: ಇಡೀ ಸಿನಿಮಾದ ಬಜೆಟ್ ಇಷ್ಟು?
2022 ಮುಗೀತು. ದೊಡ್ಡ ಚಿತ್ರರಂಗವನ್ನು ಪಕ್ಕಕ್ಕೆ ತಳ್ಳಿದ್ದೂ ಆಯ್ತು. ಈಗ 2023ಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷನೂ ಸ್ಯಾಂಡಲ್‌ವುಡ್ ಇದೇ ಚಮತ್ಕಾರವನ್ನೇ ಮಾಡುತ್ತಾ? ಇಂತಹದ್ದೊಂದು ಪ್ರಶ್ನೆ ಚಿತ್ರರಂಗದ ಮುಂದಿದೆ. ಆ ಪ್ರಶ್ನೆ ಅವರ ಮುಂದಿರೋ ಉತ್ತರ 'ಯುಐ'.
ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳುತ್ತಿರೋ ಸಿನಿಮಾ 'ಯುಐ'. ಈ ಸಿನಿಮಾ ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಶೂಟಿಂಗ್ ಮಾಡಿ ಮುಗಿಸಿದೆ. ಉಪ್ಪಿನೇ ಡೈರೆಕ್ಟರ್ ಕ್ಯಾಪ್ ತೊಟ್ಟಿರೋದ್ರಿಂದ ಸಿನಿಪ್ರಿಯರ ನಿರೀಕ್ಷೆಯೇನು ಕಮ್ಮಿಯಿಲ್ಲ. ಉಪ್ಪಿ ಈ ಬಾರಿ ಬಾರಿ ದೊಡ್ಡ ಬಜೆಟ್ ಸಿನಿಮಾಗೆ ಕೈ ಹಾಕಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ಬಳಸಿದ ತಂತ್ರಜ್ಙಾನವನ್ನ ಬಳಸುತ್ತಿದ್ದಾರೆ.
ಮಾನಿಟರ್
ಪ್ಲೀಸ್..
ಪ್ರೋಬ್..
360..
ಆಕ್ಷನ್:
ಉಪ್ಪಿ
'ಯುಐ'
ರಿಲೀಸ್
ಯಾವಾಗ?
'ಯುಐ' ಒಂದೆರಡು ಭಾಷೆಯಲ್ಲಿ ಅಲ್ಲ. ಹಲವು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಇಲ್ಲಿವರೆಗೂ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಸಿನಿಪ್ರಿಯರಿಗಷ್ಟೇ ಉಪ್ಪಿಗಿಂತ ರುಚಿ ಬೇರೆಯಿಲ್ಲ ಅನ್ನೋದು ಗೊತ್ತಿದೆ. ಆದ್ರೀಗ ವಿಶ್ವದಾದ್ಯಂತ ಉಪ್ಪಿಯ ವಿಭಿನ್ನ ಸಿನಿಮಾ ಶೈಲಿ ಪರಿಚಯ ಆಗಲಿದೆ. ಅದರಲ್ಲೂ ಭಾರತದಲ್ಲಿ ಇದೇ ಮೊದಲ ಬಾರಿಗೆ 'ಅವತಾರ್ 2'ನಲ್ಲಿ ಬಳಸಿದ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ.

'ಯುಐ'ನಲ್ಲಿ 'ಅವತಾರ್ 2' ತಂತ್ರಜ್ಞಾನ
ಜಗತ್ತಿನ ಅತ್ಯಂತ ದುಬಾರಿ ಸಿನಿಮಾಗಳಲ್ಲೊಂದಾದ 'ಅವತಾರ್ 2'ನಲ್ಲಿ ವಿಶಿಷ್ಟ ತಂತ್ರಜ್ಙಾನವನ್ನು ಬಳಸಿಕೊಳ್ಳಲಾಗಿತ್ತು. ಅದುವೇ ವರ್ಚ್ಯುವಲ್ ರಿಯಾಲಿಟಿ ಟೆಕ್ನಾಲಜಿ. ಇದೇ ಟೆಕ್ನಾಲಜಿಯನ್ನು ಉಪೇಂದ್ರ ನಿರ್ದೇಶಿಸುತ್ತಿರುವ 'ಯುಐ'ನಲ್ಲೂ ಬಳಸಿಕೊಳ್ಳಲಾಗಿದೆ. "ಒಂದು ಇಡೀ ಸೀಕ್ವೆನ್ಸ್ ಈ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರ ಅರ್ಥ ಚಿತ್ರೀಕರಣದ ವಾತಾವರಣವನ್ನು ವರ್ಚ್ಯುವಲ್ ಸೆಟಪ್‌ನಲ್ಲಿ 3ಡಿಯಲ್ಲಿ ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಶೂಟಿಂಗ್ ನಡೆಯುತ್ತಿರುವಾಗಲೇ ಔಟ್‌ಪುಟ್ ಅನ್ನು ನೋಡಬಹುದಾಗಿದೆ." ಎಂದು ಸಹ ನಿರ್ಮಾಪಕ ನವೀನ ಮನೋಹರನ್ ಫೆಡರಲ್ ವೆಡ್‌ಸೈಟ್‌ಗೆ ಮಾಹಿತಿ ನೀಡಿದ್ದಾರೆ.

'ಯುಐ' ಸಿನಿಮಾ ಬಜೆಟ್ ಎಷ್ಟು?
'ಯುಐ' ಸಿನಿಮಾ ಮೇಕಿಂಗ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. 200 ಕ್ಯಾಮರಾಗಳಿಂದ 3ಡಿಯಲ್ಲಿ ಸ್ಕ್ಯಾನ್ ಆದ ಕನ್ನಡದ ಮೊದಲ ನಟಿ ಉಪೇಂದ್ರ ಅಂತ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್‌ಗಳನ್ನು ಈ ಸಿನಿಮಾದಲ್ಲಿ ಬಳಸಲಾಗಿದ್ಯಂತೆ. 'ವಿಕ್ರಾಂತ್ ರೋಣ'ಗಿಂತ ಹೆಚ್ಚು ವಿಎಫ್‌ಎಕ್ಸ್ ಅನ್ನು ಈ ಸಿನಿಮಾದಲ್ಲಿ ಬಳಸಲಾಗಿದೆ ಎನ್ನಲಾಗಿದೆ. ಮೋಷನ್ ಕ್ಯಾಪ್ಚರ್, ಫೇಶಿಯಲ್ ಕ್ಯಾಪ್ಚರ್, ವರ್ಚ್ಯುವಲ್ ರಿಯಾಲಿಟಿ ಅಂತ ತಂತ್ರಜ್ಞಾನವನ್ನು ಈ ಸಿನಿಮಾದಲ್ಲಿ ಬಳಸಲಾಗಿದೆ. ಹೀಗಾಗಿ ಈ ಸಿನಿಮಾದ ಬಜೆಟ್ ಸುಮಾರು 100 ಕೋಟಿ ರೂ. ಅಧಿಕ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

8 ಎಕರೆಯಲ್ಲಿ 'ಯುಐ' ಸೆಟ್
ಉಪೇಂದ್ರ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ. ಈಗಾಗಲೇ ಶೇ.60ಕ್ಕೂ ಅಧಿಕ ಭಾಗದ ಚಿತ್ರೀಕರಣ ನಡೆದಿದೆ. ಅಲ್ಲದೆ, 8 ಎಕರೆ ಜಾಗದಲ್ಲಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸೆಟ್ ಹಾಕಲಾಗುತ್ತಿದ್ಯಂತೆ. ಈಗಾಗಲೇ ಶೇ.90ರಷ್ಟು ಸೆಟ್ ಹಾಕುವ ಕೆಲಸ ಕೂಡ ಮುಗಿದಿದೆ. ಇದೇ ಜನವರಿ 20ರಿಂದ ಶೂಟಿಂಗ್ ಗ್ರ್ಯಾಂಡ್ ಆಗಿ ಆರಂಭ ಆಗಿಲಿದೆ.

ಸೆಟ್ ಬಾಯ್‌ಗಳಿಗೆ ಸುಳಿವೇ ಸಿಗುತ್ತಿಲ್ಲ
ಸಹ - ನಿರ್ಮಾಪಕ ನವೀನ್ ಮನೋಹರನ್ ನೀಡಿರುವ ಮಾಹಿತಿ ಪ್ರಕಾರ, " ಉಪ್ಪಿ ಶೂಟ್ ಮಾಡುತ್ತಿರುವ ಸಿನಿಮಾ ಬಗ್ಗೆ ಸೆಟ್ ಬಾಯ್‌ಗಳಿಗೆನೇ ಏನು ಆಗುತ್ತಿದೆ ಅಂತ ಗೊತ್ತಾಗುತ್ತಿಲ್ಲವಂತೆ. ಆಧುನಿಕ ತಂತ್ರಜ್ಞಾನವನ್ನೇ ಹೆಚ್ಚು ಬಳಸುತ್ತಿರೋದ್ರಿಂದ ಫೈನಲ್ ಔಟ್‌ಪುಟ್ ಹೇಗೆ ಬರುತ್ತೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಸಿನಿಮಾ ಬಿಡುಗಡೆಯಾಗೋವರೆಗೂ ಯಾರಿಗೂ ಏನೂ ಗೊತ್ತಾಗುವುದಿಲ್ಲ. ಸದ್ಯ ಸಿನಿಮಾ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ಬೇಸಿಗೆ ರಜೆಗೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ ಎಂದು ಫೆಡರಲ್‌ಗೆ ತಿಳಿಸಿದ್ದಾರೆ.