Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರ್ಚ್ 11ಕ್ಕೆ ಉಪ್ಪಿ ನಿರ್ದೇಶನದ ಸಿನಿಮಾ ಅನೌನ್ಸ್: ಹಾಗಿದ್ರೆ ಶಶಾಂಕ್ ಸಿನಿಮಾ ಯಾವಾಗ?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಉಪ್ಪಿ ಹಟ್ಟುಹಬ್ಬದಂದೇ ಈ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಅಲ್ಲಿಂದ ರಿಯಲ್ ಸ್ಟಾರ್ ಯಾವಾಗ ಆಕ್ಷನ್ ಕಟ್ ಹೇಳುತ್ತಾರೆ? ಎಂದು ಉಪ್ಪಿ ಅಭಿಮಾನಿಗಳು ಎದುರು ನೋಡುತ್ತಲೇ ಇದ್ದಾರೆ. ಅದಕ್ಕೆ ತಕ್ಕಂತೆ ಉಪೇಂದ್ರ ಈಗ ತಮ್ಮ ನಿರ್ದೇಶನದ ಹೊಸ ಸಿನಿಮಾ ಬಗ್ಗೆ ಸುಳಿವು ಒಂದನ್ನು ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಉಪ್ಪಿ ಹೊಸ ಸಿನಿಮಾ ಬಗ್ಗೆ ಅದ್ಯಾವಾ ರಹಸ್ಯ ಬಿಟ್ಟುಕೊಡಬಹುದು? ಎನ್ನುವ ಕೂತೂಹಲಕ್ಕೆ ಮಾರ್ಚ್ 11ರಂದು ತೆರೆಬೀಳಲಿದೆ.
ಕಳೆದ ಕೆಲವು ದಿನಗಳಿಂದ ಉಪೇಂದ್ರ ತಾವು ನಿರ್ದೇಶನ ಮಾಡಲು ಹೊರಟಿರುವ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಇಷ್ಟು ದಿನ ಕಥೆ ಹಾಗೂ ಚಿತ್ರಕಥೆ ಹೆಣೆಯುವುದರಲ್ಲಿ ಉಪೇಂದ್ರ ಬ್ಯುಸಿಯಾಗಿದ್ದರು. ಈ ಗ್ಯಾಪ್‌ನಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೀಗ ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಗಮನ ಹರಿಸಲಿದ್ದಾರೆ. ಜೊತೆಗೆ ಮತ್ತೊಬ್ಬ ನಿರ್ದೇಶಕನ ಸಿನಿಮಾದಲ್ಲೂ ನಟಿಸಲಿದ್ದಾರೆ. ಒಟ್ಟೊಟ್ಟಿಗೆ ಎರಡು ಸಿನಿಮಾಗಳಲ್ಲಿ ಉಪೇಂದ್ರ ನಟಿಸಲಿದ್ದಾರೆ.
'ಕಬ್ಜ'
ಸೆಟ್ಟಿಗೆ
ಎಂಟ್ರಿಕೊಟ್ಟ
ಶ್ರಿಯಾ
ಸರಣ್:
ಇಲ್ಲಿವೆ
ಎಕ್ಸ್ಕ್ಲ್ಯೂಸಿವ್
ಫೋಟೊಗಳು

ಮಾರ್ಚ್ 11ಕ್ಕೆ ಉಪ್ಪಿ ಸರ್ಪ್ರೈಸ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾಗಳಿಗಿಂತ ಒಂದು ಪಾಲು ಹೆಚ್ಚು ನಿರ್ದೇಶನದ ಚಿತ್ರದ ಬಗ್ಗೆ ಕ್ರೇಜ್ ಜಾಸ್ತಿ. ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅಂದ್ರೆ, ಆ ಸಿನಿಮಾ ಹಿಟ್ ಲಿಸ್ಟ್ ಸೇರಿದಂತೆ. ಈ ಹಿಂದೆ ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದವು. ಈ ಕಾರಣಕ್ಕೆ ಉಪ್ಪಿ ಹೊಸ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಹೀಗಾಗಿ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಮಾರ್ಚ್ 11 ಡೇಟ್ ಸೇವ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೇ ದಿನ ಮಧ್ಯಾಹ್ನ 12.46ಕ್ಕೆ ಸಿನಿಪ್ರಿಯರಿಗೆ ಉಪ್ಪಿ ಸರ್ಪ್ರೈಸ್ ನೀಡಲಿದ್ದಾರೆ.

ಹೊಸ ಸಿನಿಮಾ ಪೋಸ್ಟರ್ ಲೀಕ್
2021 ಸೆಪ್ಟೆಂಬರ್ 18ರಂದು 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ದಿನವೇ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಆಗಿತ್ತು. ಮೂರು ನಾಮವಿರುವ ಟೈಟಲ್ ಚಿತ್ರತಂಡದಿಂದಲೇ ಲೀಕ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ರಿಯಲ್‌ಸ್ಟಾರ್ ಉಪೇಂದ್ರ ಆ ಪೋಸ್ಟರ್ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ. ಮೂರು ನಾಮದ ಚಿನ್ಹೆ ಇರುವ ಈ ಸಿನಿಮಾದ ಟೈಟಲ್ ಪೋಸ್ಟರ್ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಅಲ್ಲಿಂದ ಮತ್ತೆ ಸುದ್ದಿನೇ ಇರಲಿಲ್ಲ. ಆದ್ರೀಗ ರಿಯಲ್‌ಸ್ಟಾರ್ ಸರ್ಪ್ರೈಸ್ ನೀಡಲು ಮುಂದಾಗಿದ್ದಾಗಿದ್ದಾರೆ.
ಉಪೇಂದ್ರ,
ಸುದೀಪ್
ಅಭಿನಯದ
'ಕಬ್ಜ'
ಚಿತ್ರಕ್ಕೆ
ಇಬ್ಬರು
ನಾಯಕಿಯರು
ಫಿಕ್ಸ್:
ಯಾರವರು?

ಉಪ್ಪಿಗೆ ಶಶಾಂಕ್ ನಿರ್ದೇಶನ
ರಿಯಲ್ ಸ್ಟಾರ್ ಉಪೇಂದ್ರಗೆ ಶಶಾಂಕ್ ಒಂದು ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ, ಆ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಈ ಗ್ಯಾಪ್‌ನಲ್ಲಿ 'ಶಶಾಂಕ್ ಲವ್ 360' ಸಿನಿಮಾ ಮುಗಿಸಿ ಬಂದಿದ್ದಾರೆ. ಏಪ್ರಿಲ್, ಮೇ ತಿಂಗಳ ಸಮಯದಲ್ಲಿ ಶಶಾಂಕ್ ಹೊಸ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಮಧ್ಯೆ, ಏಪ್ರಿಲ್ ತಿಂಗಳಲ್ಲಿ ಶಶಾಂಕ್ ನಿರ್ದೇಶನದ ಚಿತ್ರ ಕೂಡ ಸೆಟ್ಟೇರಲಿದೆ. ಹಾಗಿದ್ದರೆ, ಉಪೇಂದ್ರ ಮಾಚ್ 11ಕ್ಕೆ ಅನೌನ್ಸ್ ಮಾಡಲು ಹೊರಟಿರುವ ಸಿನಿಮಾ ಯಾವುದು ಎಂಬ ಅನುಮಾನ ಕಾಡದೆ ಇರುವುದಿಲ್ಲ.

ಒಟ್ಟೊಟ್ಟಿಗೆ ಎರಡು ಸಿನಿಮಾ ನಿರ್ದೇಶನ
"ಉಪೇಂದ್ರ ಅವರಿಗೆ ನಾನು ನಿರ್ದೇಶನ ಮಾಡಬೇಕಿರುವ ಸಿನಿಮಾ ಏಪ್ರಿಲ್‌ನಿಂದ ಆರಂಭ ಆಗುತ್ತೆ. ಉಪೇಂದ್ರ ನಿರ್ದೇಶನದ ಸಿನಿಮಾ ಕೂಡ ಇದೇ ಸಮಯದಲ್ಲಿ ಶುರುವಾಗಬಹುದು. ಉಪೇಂದ್ರ ಎರಡೂ ಸಿನಿಮಾಗಳಲ್ಲೂ ಒಟ್ಟೊಟ್ಟಿಗೆ ನಟಿಸುವ ಎಲ್ಲಾ ಸಾಧ್ಯತೆಗಳೂ ಇವೆ." ಎಂದು ಫಿಲ್ಮಿ ಬೀಟ್ ಕನ್ನಡಗೆ ತಿಳಿಸಿದ್ದಾರೆ. ಉಪೇಂದ್ರ ಅಭಿನಯದ 'ಕಬ್ಜ' ಇನ್ನೂ ಚಿತ್ರೀಕರಣ ಮುಗಿದಿಲ್ಲ. ಇದರೊಂದಿಗೆ 'ತ್ರಿಶೂಲಂ', 'ಲಗಾಂ', 'ಬುದ್ಧಿವಂತ 2', ತೆಲುಗು ಸಿನಿಮಾ 'ಘನಿ' ಕೂಡ ಕೈಯಲ್ಲಿವೆ. ಇವುಗಳ ಮಧ್ಯೆ ಉಪೇಂದ್ರ ನಿರ್ದೇಶಿಸಲು ಹೊರಟಿರುವ ಸಿನಿಮಾ ಕೂಡ ಸೆಟ್ಟೇರಲಿದೆ.