»   » ಹಾಲಿವುಡ್ ಸಿನ್ಮಾ ರೆಕಾರ್ಡ್ ಮುರಿದ ತಮಿಳಿನ 'ಬೇತಾಳ'

ಹಾಲಿವುಡ್ ಸಿನ್ಮಾ ರೆಕಾರ್ಡ್ ಮುರಿದ ತಮಿಳಿನ 'ಬೇತಾಳ'

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮಿಳು ಚಿತ್ರದ 45 ಸೆಕಂಡುಗಳ ಟೀಸರ್ ವಿಡಿಯೋವೊಂದು ಹೊಸ ದಾಖಲೆ ಬರೆದಿದೆ. ಅಮೆರಿಕನ್ ಪಾಪ್ ಸಿಂಗರ್ ಟೇಲರ್ ಸ್ವಿಫ್ಟ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಜಿತ್ ಕುಮಾರ್ ಅವರ 'ವೇದಾಳಂ' ಮುರಿದು ಹಾಕಿದೆ.

ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬಿನಲ್ಲಿ ಟೇಲರ್ ಸ್ವಿಫ್ಟ್ ಅವರ ವಿಡಿಯೋ ಅತ್ಯಂತ ವೇಗವಾಗಿ ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಪಡೆದ ವಿಡಿಯೋ ಆಗಿತ್ತು.

ಈಗ ಈ ದಾಖಲೆ ಅಜಿತ್ ಅವರ ಮುಂಬರುವ ಚಿತ್ರ 'ವೇದಾಳಂ (ಕನ್ನಡದಲ್ಲಿ ಬೇತಾಳ ಎಂದರ್ಥ) ಪಾಲಾಗಿದೆ. ಯೂಟ್ಯೂಬ್ ನಲ್ಲಿ ವಿಡಿಯೋ ಬಿಡುಗಡೆಯಾಗಿ ಒಂದು ಗಂಟೆಯಲ್ಲೇ 50,000 ಲೈಕ್ ಗಳಿಸಿ ಯೂಟ್ಯೂಬ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.[ಲಿಂಗಾ ದಾಖಲೆ ಪಕ್ಕಕ್ಕೆ ಸರಿಸಿದ ಅಜಿತ್ ಟೀಸರ್]

ಈ ಹಿಂದೆ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್ ಅವರ 'ಬ್ಯಾಡ್ ಬ್ಲಡ್' ವಿಡಿಯೋ ಬಿಡುಗಡೆಯಾದ ಒಂದು ಗಂಟೆ ಅವಧಿಯಲ್ಲೇ 34 ಸಾವಿರ ಲೈಕ್ಸ್ ಪಡೆದುಕೊಂಡಿತ್ತು. ಅಕ್ಟೋಬರ್ 07ರಂದು ಸೋನಿ ಮ್ಯೂಸಿಕ್ ಇಂಡಿಯಾ ಅಧಿಕೃತ ತಾಣದಿಂದ ಹೊರ ಬಂದಿರುವ ಅಜಿತ್ ಅವರ 'ವೇದಾಳಂ' ಟೀಸರ್ ಹೊಸ ಇತಿಹಾಸ ಸೃಷ್ಟಿಸುತ್ತಿದೆ. 5 ನಿಮಿಷಕ್ಕೆ 6 ಸಾವಿರ ಲೈಕ್ಸ್ ಪಡೆದುಕೊಂಡಿತ್ತು.

ಅಜಿತ್, ಶ್ರುತಿ ಹಾಸನ್, ಲಕ್ಷ್ಮಿ ಮೆನನ್ ಅಭಿನಯದ ಈ ಚಿತ್ರಕ್ಕೆ ಅನಿರುಧ್ ಸಂಗೀತವಿದೆ. ಶಿವ ನಿರ್ದೇಶನದ ಚಿತ್ರಕ್ಕೆ ಐಶ್ವರ್ಯಾ ಅವರು ಹೂಡಿಕೆ ಮಾಡಿದ್ದಾರೆ.

ಬಿಡುಗಡೆಯಾದ ಎರಡು ದಿನಕ್ಕೆ ಹೊಸ ದಾಖಲೆ

ವೇದಾಳಂ ಚಿತ್ರದ ಟೀಸರ್ ರಿಲೀಸ್ ಆದ ಎರಡು ದಿನಕ್ಕೆ ಈ ಸಮಯಕ್ಕೆ ಯೂಟ್ಯೂಬಿನಲ್ಲಿ 1,928,767 ವೀಕ್ಷಣೆ, 1,09,005 ಬಾರಿ ಲೈಕ್ಸ್ ಪಡೆದುಕೊಂಡಿದೆ. 35,640 ಮಂದಿ ಅನ್ ಲೈಕ್ ಮಾಡಿದ್ದಾರೆ. ಸುಮಾರು 7,715ಕ್ಕೂ ಅಧಿಕ ಕಾಮೆಂಟ್ ಗಳು ಈ ಪುಟದಲ್ಲಿದೆ.

ಕಾಲಿವುಡ್ ನಲ್ಲಿ ಮೊದಲ ಬಾರಿಗೆ ಕಬೀರ್ ಸಿಂಗ್

ಮಾಡೆಲ್ ಕಮ್ ನಟ ಕಬೀರ್ ದುರಾನ್ ಸಿಂಗ್ ಅವರು ಮೊದಲ ಬಾರಿಗೆ ಅಜಿತ್ ಅವರ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ 'ಜಿಲ್' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ಕಬೀರ್ ಕೈಯಲ್ಲಿ ಕಿಕ್ 2, ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಅವರ ಸಿನಿಮಾ, ಪುನೀತ್ ರಾಜ್ ಕುಮಾರ್ ಅವರ ಮುಂಬರುವ ಚಿತ್ರಗಳಿವೆ.

ರೆಹಮಾನ್ ಅಳಿಯನ ಕೈ ತಪ್ಪಿದ ವೇದಾಳಂ

ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಅಳಿಯ ಜಿವಿ ಪ್ರಕಾಶ್ ಅವರು ಮೊದಲಿಗೆ ವೇದಾಳಂ ಚಿತ್ರಕ್ಕೆ ಸಂಗೀತ ನೀಡಬೇಕಿತ್ತು. ಅದರೆ, ಬಿಡುವಿಲ್ಲದ ಕಾರಣ ಅನಿರುಧ್ ಕೈಗೆ ಚಿತ್ರ ಸಿಕ್ಕಿತು. ಈಗ ಜಿವಿ ಪ್ರಕಾಶ್ ಅವರು ಅಜಿತ್ ಅವರ 59ನೇ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಅಜಿತ್ ಜೊತೆಗೆ ವಿದ್ಯುಲ್ಲೇಖ ಮತ್ತೊಮ್ಮೆ

ಅಜಿತ್ ಜೊತೆಗೆ ನಟಿ ವಿದ್ಯುಲ್ಲೇಖ ಮತ್ತೊಮ್ಮೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ವೀರಂ ಚಿತ್ರದಲ್ಲಿ ನಟಿಸಿದ್ದರು. ವೇದಾಳಂನಲ್ಲಿ ಫ್ಲಾಶ್ ಬಾಕ್ ಸೀನ್ ನಲ್ಲಿ ವಿದ್ಯುಲ್ಲೇಖ ಕಾಣಿಸಿಕೊಂಡಿದ್ದಾರೆ.

ವೇದಾಳಂ ಟೀಸರ್ ಗೆ ಅಭಿಮಾನಿಗಳು ಫಿದಾ

ವೇದಾಳಂ ಟೀಸರ್, ಅಜಿತ್ ಲುಕ್, ಕಾರ್ಯಾಚರಣೆ ದೃಶ್ಯಗಳನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ...

ಅಜಿತ್ ಗಾಗಿ ಟೈಟಲ್ ಬಿಟ್ಟುಕೊಟ್ಟ ಲಾರೆನ್ಸ್

ಡ್ಯಾನ್ಸರ್ ಕಮ್ ನಟ ರಾಘವ ಲಾರೆನ್ಸ್ ಅವರು ಅಜಿತ್ ಗಾಗಿ ತಾವು ಪಡೆದುಕೊಂಡಿದ್ದ ವೇದಾಳಂ ಚಿತ್ರದ ಶೀರ್ಷಿಕೆಯನ್ನು ಬಿಟ್ಟುಕೊಂಡಿದ್ದಾರೆ. ಕಾಂಚನ(ಕನ್ನಡದಲ್ಲಿ ಕಲ್ಪನಾ) ಮಾದರಿಯಲ್ಲೇ ವೇದಾಳಂ ಹೆಸರಿನಲ್ಲಿ ಚಿತ್ರ ಮಾಡುವ ಯೋಜನೆಯನ್ನು ರಾಘವ ಲಾರೆನ್ಸ್ ಹಾಕಿಕೊಂಡಿದ್ದರಂತೆ, ನಂತರ ಆ ಚಿತ್ರಕ್ಕೆ ಬೇರೆ ಹೆಸರು ಇಡಲಾಗಿದೆಯಂತೆ.


English summary
The official teaser of Thala Ajith's Vedalam was released at the stroke of midnight (October 8th) and the 45 seconds video has already smashed a certain record, earlier set by American singer Taylor Swift in the video sharing website YouTube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada