Don't Miss!
- News
ಮಂಚದ ಜೊತೆ ಡ್ಯಾನ್ಸ್ ಮಾಡಿದ ವ್ಯಕ್ತಿ: ಬಿದ್ದು ಬಿದ್ದು ನಕ್ಕ ನೆಟ್ಟಿಗರು- ವಿಡಿಯೋ
- Technology
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಬೈರತಿ ರಣಗಲ್' ಶಿವಣ್ಣನ 125ನೇ ಸಿನಿಮಾ ಆಗಿಲ್ಲ ಯಾಕೆ? ಸಿನಿಮಾ ಸೆಟ್ಟೇರುತ್ತಾ ಇಲ್ವಾ?
2022ರ ಕೊನೆಯಲ್ಲಿ ಶಿವರಾಜ್‌ಕುಮಾರ್ 125ನೇ ಸಿನಿಮಾ 'ವೇದ' ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ಅದ್ದೂರಿಯಾಗಿ ಓಪನಿಂಗ್ ಕೂಡ ಸಿಕ್ಕಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡಿದ್ದ ಸಿನಿಮಾಗೆ ಇನ್ನೂ ಪ್ರಚಾರ ಮಾಡುತ್ತಲೇ ಇದ್ದಾರೆ.
ಹೊಸ ವರ್ಷದಲ್ಲೂ ಶಿವಣ್ಣ 'ವೇದ' ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಸೆಂಚ್ಯುರಿ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಕುತೂಹಲದಿಂದ ಚರ್ಚೆಯಾಗುತ್ತಿದೆ. ಇದೇ ವೇಳೆ ಬಹಳ ದಿನಗಳ ಹಿಂದೆ ನಿಂತು ಹೋಗಿದ್ದ ಶಿವಣ್ಣನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬೈರತಿ ರಣಗಲ್' ಬಗ್ಗೆನೂ ಟಾಕ್ ಆಗುತ್ತಿದೆ.
2023
Sandalwood:
ಹೊಸ
ವರ್ಷಕ್ಕೆ
ಹೊಚ್ಚ
ಹೊಸ
ಪೋಸ್ಟರ್ಸ್,
ಮೇಕಿಂಗ್
ಝಲಕ್
ಅಷ್ಟಕ್ಕೂ 'ಬೈರತಿ ರಣಗಲ್' ಸಿನಿಮಾ ಆರಂಭ ಆಗೋದಿಲ್ವಾ? 'ವೇದ' ಬಳಿಕ ಇದೇ ಸಿನಿಮಾ ಸೆಟ್ಟೇರುತ್ತಾ? ಈ ಪ್ರಶ್ನೆಯಂತೂ ಇದ್ದೇ ಇದೆ. ಅಷ್ಟಕ್ಕೂ ಶಿವರಾಜ್‌ಕುಮಾರ್ ಹಾಗೂ ಮಫ್ತಿ ಸಿನಿಮಾದ ನರ್ತನ್ ಈ ಬಗ್ಗೆ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಮಫ್ತಿ' ಬಳಿಕ 'ಬೈರತಿ ರಣಗಲ್?
'ಮಫ್ತಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿ. ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣನ ಮಾಸ್ ಎಂಟ್ರಿ ಪ್ರೇಕ್ಷಕರು ಫಿದಾ ಆಗಿದ್ದರು. ಬ್ಲ್ಯಾಕ್ ಶರ್ಟ್ ಹಾಗೂ ಪಂಚೆಯುಟ್ಟು ರಗಡ್ ಲುಕ್ ಕೊಟ್ಟಿದ್ದ ಶಿವಣ್ಣ ಜನರ ಮನಗೆದ್ದಿದ್ದರು. ಇದೇ ವೇಳೆ 'ಮಫ್ತಿ' ಸಿನಿಮಾದ ನಿರ್ದೇಶಕ ನರ್ತನ್ ಶಿವಣ್ಣನಿಗಾಗಿ 'ಬೈರತಿ ರಣಗಲ್' ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಅಂತ ಸುದ್ದಿಯಾಗಿತ್ತು. 'ವೇದ' ಸಿನಿಮಾದ ಬಳಿಕ ಮತ್ತೆ 'ಬೈರತಿ ರಣಗಲ್' ಬಗ್ಗೆ ಟಾಕ್ ಶುರುವಾಗಿದೆ.

'ಮಫ್ತಿ'ಯ ಪ್ರೀಕ್ವೆಲ್ 'ಬೈರತಿ ರಣಗಲ್'
'ವೇದ' ಸಿನಿಮಾ ಬಳಿಕ 'ಬೈರತಿ ರಣಗಲ್' ಬಗ್ಗೆ ಶಿವರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಬಜ್ ಜೊತೆ ಮಾತಾಡುವಾಗ, ಈ ಸಿನಿಮಾ ಯಾಕೆ ಸೆಟ್ಟೇರಿಲ್ಲ? ಯಾವಾಗ ಶುರುವಾಗುತ್ತೆ? ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. "ಡೈರೆಕ್ಟರ್ ನಾನು 'ಬೈರತಿ ರಣಗಲ್' ಸಿನಿಮಾ ಮಾಡಬೇಕಿತ್ತು. ಬೇರೆ ಯಾವುದರಲ್ಲೋ ಬ್ಯುಸಿಯಾಗಿದ್ದೀನಿ ಅಂತ ಹೇಳಿದ್ದರಿಂದ ಸ್ವಲ್ಪ ಪಿಕ್ಚರ್ ತಳ್ಳಿತು ಅಷ್ಡೇ. ಮತ್ತೆ ಈ ಸಿನಿಮಾ ಆರಂಭ ಆಗುತ್ತೆ. ಇದೂ ಒಂದು ಕಲ್ಟ್ ಸಿನಿಮಾ. ಪ್ರೀಕ್ವೆಲ್ ಅಂಡ್ ಸೀಕ್ವೆಲ್ ಆಗುತ್ತೆ." ಎಂದಿದ್ದಾರೆ ಶಿವಣ್ಣ.

ನಿರ್ದೇಶಕ ನರ್ತನ್ ಹೇಳಿದ್ದೇನೆ?
'ಬೈರತಿ ರಣಗಲ್' ಸಿನಿಮಾದ ಟೈಟಲ್ ಈಗಾಗಲೇ ರಿಜಿಸ್ಟರ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಸಿನಿಮಾ ಯಾಕೆ ಸೆಟ್ಟೇರಿಲ್ಲ? ಅನ್ನೋ ಬಗ್ಗೆ ನರ್ತನ್ ಫಿಲ್ಮಿಬೀಟ್ ಬಗ್ಗೆ ಮಾಹಿತಿ ನೀಡಿದ್ದಾರೆ. "ಕಥೆ ಸಿದ್ಧ ಮಾಡಿ ಆಗಿದೆ. ಅದೂ ಆಗಿಲ್ಲ. ಯಾಕಂದ್ರೆ, ಶಿವಣ್ಣ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. 'ಬೈರತಿ ರಣಗಲ್' ಶಿವಣ್ಣ ಅವರ 125ನೇ ಸಿನಿಮಾ ಆಗಬೇಕಿತ್ತು. ಆದರೆ, ಅದ್ಯಾಕೋ ಆಗಲಿಲ್ಲ." ಎಂದು ಫಿಲ್ಮಿಬೀಟ್ ನರ್ತನ್ ಮಾಹಿತಿ ನೀಡಿದ್ದಾರೆ.

ಥಿಯೇಟರ್‌ನಲ್ಲಿ 'ವೇದ'ಗೆ ರೆಸ್ಪಾನ್ಸ್ ಹೇಗಿದೆ?
'ಬೈರತಿ ರಣಗಲ್' ಶಿವಣ್ಣನ 125ನೇ ಸಿನಿಮಾ ಆಗುತ್ತೆ ಅಂತ ಸುದ್ದಿ ಹಬ್ಬಿತ್ತು. ಆದರೆ, ಆ ಸಿನಿಮಾ ಸೆಟ್ಟೇರಲಿಲ್ಲ. ಅದೇ ಜಾಗದಲ್ಲಿ 125ನೇ ಸಿನಿಮಾ ಆಗಿ 'ವೇದ' ಸೆಟ್ಟೇರಿತ್ತು. ಥಿಯೇಟರ್‌ನಲ್ಲಿ ಈಗಾಗಲೇ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸಖತ್ ಆಗಿಯೇ ಕಲೆಕ್ಷನ್ ಮಾಡುತ್ತಿದೆ ಎಂದು ವಿತರಕರು ಹೇಳುತ್ತಿದ್ದಾರೆ.