»   » ರಜನಿಕಾಂತ್ ದಾಖಲೆಗೆ ಸೆಡ್ಡುಹೊಡೆದ ವಿಶ್ವರೂಪಂ

ರಜನಿಕಾಂತ್ ದಾಖಲೆಗೆ ಸೆಡ್ಡುಹೊಡೆದ ವಿಶ್ವರೂಪಂ

By: ಶಂಕರ್, ಚೆನ್ನೈ
Subscribe to Filmibeat Kannada
ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿರುವ 'ವಿಶ್ವರೂಪಂ' ಚಿತ್ರ ಬಾಕ್ಸ್ ಆಫೀಸ್ ಉಡ್ಡೀಸ್ ಮಾಡಿದೆ. ಇದುವರೆಗೂ ಈ ಚಿತ್ರ ರು.200 ಕೋಟಿ ಬಾಚಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಚಿತ್ರಗಳಿಗೆ ಉತ್ತರ ಭಾರತದಲ್ಲಿ ಮಾರುಕಟ್ಟೆ ಅಷ್ಟಕ್ಕಷ್ಟೇ. ಆದರೆ ಕಮಲ್ ಚಿತ್ರ ಮ್ಯಾಜಿಕ್ ಮಾಡಿದೆ.

ಜ.25ರಂದು ತೆರೆಕಂಡ ಈ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದೆ. ತಮಿಳುನಾಡಿನಲ್ಲಿ ಫೆ.7ರಂದು ತೆರೆಕಂಡರೂ ಅಲ್ಲಿನ ಬಾಕ್ಸ್ ಆಫೀಸಲ್ಲೂ ತಕ್ಕಮಟ್ಟಿಗೆ ಸದ್ದು ಮಾಡುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂಧಿರನ್ ಚಿತ್ರದ ದಾಖಲೆಯನ್ನು ಇದುವರೆಗೂ ಯಾವ ತಮಿಳು ಚಿತ್ರವೂ ಮುರಿದಿಲ್ಲ. ಆದರೆ ಕಮಲ್ ಹಾಸನ್ ವಿಶ್ವರೂಪಂ ಚಿತ್ರ ಅದರ ಸಮೀಪಕ್ಕೆ ಬಂದು ನಿಂತಿದೆ. ಮೂರನೇ ಸ್ಥಾನದಲ್ಲಿ 'ತುಪಾಕಿ' ಚಿತ್ರವಿದೆ.

ಮುಂದಿನ ದಿನಗಳಲ್ಲಿ ವಿಶ್ವರೂಪಂ ಚಿತ್ರ ಎಲ್ಲ ದಾಖಲೆಗಳನ್ನು ಮುರಿಯುವ ಸೂಚನೆಗಳನ್ನು ನೀಡಿದೆ. ಪೂಜಾ ಕುಮಾರ್, ಆಂಡ್ರಿಯಾ, ರಾಹುಲ್ ಬೋಸ್ ಹಾಗೂ ಶೇಖರ್ ಕಪೂರ್ ಪಾತ್ರವರ್ಗದಲ್ಲಿರುವ ಈ ಚಿತ್ರವನ್ನು ಸುಮಾರು ರು.95 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.

ಏತನ್ಮಧ್ಯೆ ಕಮಲ್ ಅವರು ವಿಶ್ವರೂಪಂ ಭಾಗ 2ರನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ. 'ವಿಶ್ವರೂಪಂ' ಚಿತ್ರದಲ್ಲಿ ಅಭಿನಯಿಸಿದ್ದ ಪೂಜಾ ಕುಮಾರ್, ಆಂಡ್ರಿಯಾ ಹಾಗೂ ರಾಹುಲ್ ಬೋಸ್ ಭಾಗ 2ರಲ್ಲೂ ಇರುತ್ತಾರೆ. ಚಿತ್ರದಲ್ಲಿ ಹೊಸ ಪಾತ್ರವೊಂದು ಇರುತ್ತದೆ ಎನ್ನಲಾಗಿದ್ದು, ಸದ್ಯಕ್ಕೆ ಅದರ ಬಗ್ಗೆ ಕಮಲ್ ಆಗಲಿ ಚಿತ್ರತಂಡವಾಗಲಿ ತುಟಿಪಿಟಕ್ ಎಂದಿಲ್ಲ.

English summary
Kamal Haasan's Vishwaroopam has grossed over Rs.200 crs worldwide. Pooja Kumar told at a concert in New Jersey that Kamal starrrer Vishwaroopam collected Rs. 200 crore worldwide in the box office.
Please Wait while comments are loading...