»   » ರಮೇಶ್-ಕಮಲ್ ಜೋಡಿಯ 'ಉತ್ತಮ ವಿಲನ್' ಟ್ರೇಲರ್

ರಮೇಶ್-ಕಮಲ್ ಜೋಡಿಯ 'ಉತ್ತಮ ವಿಲನ್' ಟ್ರೇಲರ್

Posted By:
Subscribe to Filmibeat Kannada

ಸಕಲಕಲಾವಲ್ಲಭ ಕಮಲ್ ಹಾಸನ್ ನಟಿಸಿರುವ, ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶಿಸಿರುವ ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ 'ಉತ್ತಮ ವಿಲನ್'. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳಿಂದ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದ 'ಉತ್ತಮ ವಿಲನ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ರೂಪದಲ್ಲಿ ತೆರೆಕಾಣಬೇಕಿದ್ದ 'ಉತ್ತಮ ವಿಲನ್' ಟ್ರೇಲರ್ ಎರಡು ದಿನಗಳ ಮುಂಚಿತವಾಗಿ, ಅಂದ್ರೆ ಇಂದು (ಜನವರಿ 13) ಬಿಡುಗಡೆಯಾಗಿದೆ. ಸಕಲಕಲಾವಲ್ಲಭನ ಸಕಲಕಲಾ ಪ್ರತಿಭೆ 'ಉತ್ತಮ ವಿಲನ್' ಟ್ರೇಲರ್ ನಲ್ಲಿ ಅನಾವರಣವಾಗಿರುವುದು ಸ್ಪೆಷಲ್.

Kamal Haasan

ಎರಡು ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಕಮಲ್ ಹಾಸನ್, 'ಸೂಪರ್ ಸ್ಟಾರ್' ಆಗಿ ಒಮ್ಮೆ ಕಾಣಿಸಿಕೊಂಡರೆ, ಇನ್ನೊಮ್ಮೆ ಎಂಟನೇ ಶತಮಾನದ ಡ್ರಾಮಾ ನಟನಾಗಿ ಮಿಂಚಿದ್ದಾರೆ. ತೆರೆಮೇಲೂ ನಟನ ಪಾತ್ರವನ್ನೇ ಪೋಷಿಸುತ್ತಿರುವುದರಿಂದ ಕಮಲ್ ಹಾಸಸ್, ಫ್ರೇಮ್ ಟು ಫ್ರೇಮ್ ಭಿನ್ನವಿಭಿನ್ನವಾಗಿ ಕಾಣುತ್ತಾರೆ. [ರಮೇಶ್ ಅರವಿಂದ್ 'ಉತ್ತಮ ವಿಲನ್' ತಾಜಾ ಚಿತ್ರ ]

ಜಾನಪದ ನೃತ್ಯ ಪ್ರಕಾರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿರುವುದರಿಂದ ಹಿಡಿದು, ಎಲ್ಲಾ ಗೆಟಪ್ ಗಳಲ್ಲೂ ಕಮಲ್ ಹಾಸನ್ ಸೂಪರ್. ಹೇಳಿ ಕೇಳಿ, 'ಉತ್ತಮ ವಿಲನ್' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವುದು ಖುದ್ದು ಕಮಲ್ ಹಾಸನ್.

Kamal Haasan2

ಹೀಗಾಗಿ, ಟ್ರೇಲರ್ ನಲ್ಲಿರುವ ಕೆಲವು ದೃಶ್ಯಗಳನ್ನ ಗಮನಿಸಿದ್ರೆ, ಇದು ಕಮಲ್ ಹಾಸನ್ 'ರೀಲ್ ಬದುಕಿನ ರಿಯಲ್ ಕಥೆ' ಅನ್ನುವುದು ಅವರ ಅಭಿಮಾನಿಗಳಿಗೆ ಭಾಸವಾಗುತ್ತೆ. ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಗರಡಿಯಲ್ಲೇ ಪಳಗಿದ ಕಮಲ್, 'ಉತ್ತಮ ವಿಲನ್' ಮೂಲಕ ತಮ್ಮ ಗುರುಗಳಿಗೂ ನಮನವನ್ನ ಸಲ್ಲಿಸಿರುವುದು ಇದಕ್ಕೆ ಪೂರಕ ಉದಾಹರಣೆ. [ರಮೇಶ್-ಕಮಲ್ ಕಾಂಬಿನೇಷನ್ 'ಉತ್ತಮ ವಿಲನ್' ಫಿನಿಷ್]

ಕಮಲ್ ಹಾಸನ್ ಜೊತೆ ಕೆ.ಬಾಲಚಂದರ್, ಪೂಜಾ ಕುಮಾರ್, ಪಾರ್ವತಿ, ಪಾರ್ವತಿ ನಾಯರ್, ಊರ್ವಶಿ ಸೇರಿದಂತೆ ದೊಡ್ಡ ಕಲಾವಿದರ ದಂಡೇ 'ಉತ್ತಮ ವಿಲನ್' ಚಿತ್ರದಲ್ಲಿದೆ. ಸೂಪರ್ ಸ್ಟಾರ್ ನಟನೊಬ್ಬನ ಸುತ್ತ ನಡೆಯುವ ಈ ಚಿತ್ರಕಥೆಗೆ ಆಕ್ಷನ್ ಕಟ್ ಹೇಳಿರುವುದು ಕಮಲ್ ಆಪ್ತ, ಕೆ.ಬಾಲಚಂದರ್ ಶಿಷ್ಯ ಮತ್ತು ಕನ್ನಡಿಗ ರಮೇಶ್ ಅರವಿಂದ್. [ಕಮಲ್ ಹಾಸನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಮೇಶ್]

Kamal Haasan3

ಔಟ್ ಅಂಡ್ ಔಟ್ ಕಮರ್ಶಿಯಲ್ ಚಿತ್ರವಾದರೂ, ಅದಕ್ಕೆ ಕಲಾತ್ಮಕ ಟಚ್ ಇರುವ 'ಉತ್ತಮ ವಿಲನ್' ಟ್ರೇಲರ್ ಕಮಲ್ ಅಭಿಮಾನಿ ಬಳಗದಲ್ಲಿ ಕುತೂಹಲ ಹೆಚ್ಚಿಸಿದೆ. ಅದಕ್ಕೆ ತೆರೆಬೀಳುವುದು ಫೆಬ್ರವರಿ ತಿಂಗಳಲ್ಲಿ. ಯಾಕಂದ್ರೆ, 'ಉತ್ತಮ ವಿಲನ್' ವಿಶ್ವದಾದ್ಯಂತ ರಿಲೀಸ್ ಆಗುವುದು ಆಗಲೇ....

English summary
Kamal Haasan starrer Most Expected Tamil film 'Uttama Villain' Trailer is out. It is said to be the story of an ageing superstar, played by Kamal Haasan, who has also penned the story for the film. Uttama Villain is directed by Ramesh Aravind. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada