Don't Miss!
- Technology
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- News
2022ರಲ್ಲಿ ಫಾಸ್ಟ್ಯಾಗ್ ಮೂಲಕ 50,855 ಕೋಟಿ ರೂ ಟೋಲ್ ಸಂಗ್ರಹ !
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Finance
ಷೇರು ಮಾರಾಟದಲ್ಲಿ ಭಾರೀ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್?
- Sports
ಆಸ್ಟ್ರೇಲಿಯನ್ ಓಪನ್: ಫೈನಲ್ಗೆ ಪ್ರವೇಶಿಸಿದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಬಂಗಾರಿ ಯಾರೇ ನೀ ಬುಲ್ ಬುಲ್.." ಹಾಡಲ್ಲಿ ಹೆಜ್ಜೆ ಹಾಕಲ್ಲ ಎಂದಿದ್ದ ದರ್ಶನ್: ಅಂದಿನ ಗುಟ್ಟು ಇಂದು ರಟ್ಟು!
ದರ್ಶನ್ ಸಿನಿಮಾ ಅಂದ್ರೆ ಥಿಯೇಟರ್ಗಳು ತುಂಬಿ ತುಳುಕುತ್ತವೆ. ಅದಕ್ಕೆ ಕಾರಣ ಹಲವು. ಚಾಲೆಂಜಿಂಗ್ ಸ್ಟಾರ್ ಸಿನಿಮಾಗಳಲ್ಲಿ ಪಕ್ಕಾ ಕಮರ್ಷಿಯಲ್. ಮಾಸ್ ಡೈಲಾಗ್, ಮಸ್ತ್ ಆಕ್ಷನ್ಗೆ ಮೋಸ ಇರೋದಿಲ್ಲ.
ಡೈಲಾಗ್, ಆಕ್ಷನ್ ಜೊತೆ ಜೊತೆನೇ ಎದ್ದು ಕುಣಿಯಬೇಕು ಅನ್ನೋ ಅನ್ನೋ ಹಾಡುಗಳಿಗೇನೂ ಕೊರತೆ ಇರೋದಿಲ್ಲ. ಆದರೆ, ದರ್ಶನ್ ತಮ್ಮ ಕರಿಯರ್ಗೆ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ 'ಗಜ' ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕೋದಿಲ್ಲ ಅಂತ ಹಠ ಹಿಡಿದಿದ್ದರಂತೆ.
"ಆ
ಗುಗ್ಗುಗಳು
ಬೆಳೆದಿದ್ದೇ
ನಮ್ಮ
ಸಿನಿಮಾಗಳಿಂದ":
ಗಾಂಧಿನಗರದ
ಕೆಲವರಿಗೆ
ದರ್ಶನ್
ಎಚ್ಚರಿಕೆ!
'ಗಜ' ಸಿನಿಮಾದ "ಬಂಗಾರಿ ಯಾರೇ ನೀ ಬುಲ್ ಬುಲ್.." ಹಾಡಿನಲ್ಲಿ ಹೆಜ್ಜೆ ಹಾಕುವುದಕ್ಕೆ ದರ್ಶನ್ ಹಿಂದೇಟು ಹಾಕಿದ್ದರು ಅನ್ನೋ ಮ್ಯಾಟರೇ ಏನೋ ರಿವೀಲ್ ಆಗಿತ್ತು. ಆದರೆ, ಯಾಕೆ ಅನ್ನೋದನ್ನು ದರ್ಶನ್ ರಿವೀಲ್ ಮಾಡಿರಲಿಲ್ಲ. ಈಗ 'ಕ್ರಾಂತಿ' ಸಿನಿಮಾದ ಸಂದರ್ಶನದ ವೇಳೆ ಆ ಗುಟ್ಟನ್ನು ರಿವೀಲ್ ಮಾಡಿದ್ದಾರೆ.

'ಗಜ' ಚಿತ್ರದ 'ಬಂಗಾರಿ' ಹಾಡಿಗೆ ನೋ ಅಂದಿದ್ದೇಕೆ?
'ಗಜ' ಸಿನಿಮಾದ ಹಿಟ್ ಹಾಡುಗಳಲ್ಲಿ "ಬಂಗಾರಿ ಯಾರೇ ನೀ ಬುಲ್ ಬುಲ್.." ಕೂಡ ಒಂದು. ಈ ಹಾಡಿಗೆ ದರ್ಶನ್ ಅಭಿಮಾನಿಗಳು ಅದೆಷ್ಟು ಬಾರಿ ಹೆಜ್ಜೆ ಹಾಕಿದ್ದರೋ. ಆದರೆ, ಇಂತಹ ಹಾಡನ್ನು ಯಾಕೆ ಒಪ್ಪಿರಲಿಲ್ಲ ಅನ್ನೋದು ಈಗ ರಿವೀಲ್ ಆಗಿದೆ." ಹಾಡು ಇಷ್ಟ ಆಗಿಲ್ಲ ಅಂತಲ್ಲ. ಬಂಗಾರಿ ಯಾರೇ ನೀ ಬುಲ್ ಬುಲ್.. ಹಾಡು ಹೀಗಿದೆ. ನಾನು ಕೊರಿಯೋಗ್ರಫಿ ಬಗ್ಗೆ ಯೋಚನೆ ಮಾಡುತ್ತಿದ್ದೆ. ಒಬ್ಬ ಡ್ಯಾನ್ಸ್ ಮಾಸ್ಟರ್ ಬೇರೆ ಏನೋ ಮಾಡುತ್ತಾನೆ. ಬೇಡ ಈ ಸಾಂಗ್ ಅಂದ್ಕೊಂಡಿದ್ದೆ. ಇದು ನನ್ನ ಇಮ್ಯಾಜಿನೇಷನ್. ಬ್ಯಾಂಕಾಕ್ನಲ್ಲಿ ವೈಲ್ಡಿ ಆಂಗಲ್ ಇಟ್ಟು ಶೂಟ್ ಮಾಡ್ತೀವಿ ಅಂದಾಗ, ಕುಣಿಯೋನು ನನಗೇ ಮುಜುಗರ ಆಗುತ್ತೆ. ಇನ್ನು ನೋಡೋರಿಗೆ ಎಷ್ಟು ಮುಜುಗರ ಆಗಬಹುದು.ಅಕ್ಕ ತಂಗಿಯಂದಿರು ಇರುತ್ತಾರೆ. ಅವರು ಪಕ್ಕದಲ್ಲಿ ಕೂತು ಸಾಂಗ್ ಹೇಗೆ ನೋಡುತ್ತಾರೆ? ಅದಕ್ಕೆ ನಾನು ಈ ಸಾಂಗ್ ಬೇಡ ಅಂತ ಹೇಳಿದೆ. ಅಷ್ಟೇ" ಎನ್ನುತ್ತಾರೆ ದರ್ಶನ್.

'ಹೆದರಿದ್ದು ಕೊರಿಯೋಗ್ರಫಿಗೆ, ಹಾಡಿಗಲ್ಲ'
'ಗಜ' ಸಿನಿಮಾದ 'ಬಂಗಾರಿ' ಹಾಡು ರಿಲೀಸ್ ಆದ ಬಳಿಕ ಇತಿಹಾಸವನ್ನೇ ಸೃಷ್ಟಿಸಿತ್ತು. ಅಂದು ಈ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೆ, ದರ್ಶನ್ ಹಾಡು ಬೇಡ ಅಂದಿದ್ದು ಕೇವಲ ಕೊರಿಯೋಗ್ರಫಿ ದೃಷ್ಟಿಯಿಂದ ಅಂತ ಹೇಳಿದ್ದಾರೆ. " ನನಗೆ ಈ ಸಾಂಗ್ ಬದಲು ಬೇರೆ ಏನಾದರೂ ಮಾಡಬಹುದಲ್ವಾ ಅಂತ. ಆ ಮೇಲೆ ಕೊರಿಯೋಗ್ರಾಫರ್ ಕೂರಿಸಿಕೊಂಡು ಈ ಸಾಂಗ್ ಹಿಂಗಲ್ಲ ಹಿಂಗೆ ಅಂದ್ಮೇಲೆ ಓಕೆ ಗುಡ್ ಅಂಡ್ ಫೈನ್ ಅಂದೆ. ಅದು ಇತಿಹಾಸವನ್ನೇ ಸೃಷ್ಟಿಸಿಬಿಡ್ತು.ನಾನು ಹೆದರಿದ್ದು ಕೊರಿಯೋಗ್ರಫಿಯಲ್ಲಿ, ಸಾಂಗ್ನಲ್ಲಿ ಅಲ್ಲ." ಎನ್ನುತ್ತಾರೆ ದರ್ಶನ್.

ಹರಿಕೃಷ್ಣ ಬಗ್ಗೆ ದರ್ಶನ್ ಹೇಳಿದ್ದೇನು?
" ರಿ ರೆಕಾರ್ಡಿಂಗ್ ಆದ್ಮೇಲೆ ಸಿನಿಮಾ ನೋಡ್ಬೇಡಿ. ರಿ ರೆಕಾರ್ಡಿಂಗ್ ತುಂಬಾನೇ ಮುಚ್ಚಾಕುತ್ತೆ.ಡಬ್ಬಿಂಗ್ ಮುಗೀತಾ ಸುಮ್ಮನೆ ಸಿನಿಮಾ ನೋಡಿ. ಯಾಕಂದ್ರೆ ಮ್ಯೂಸಿಕ್ ಇರಲ್ಲ. ಬರೀ ಡೈಲಾಗ್ ಇರುತ್ತೆ. ಆ ಸೈಲೆನ್ಸ್ನಲ್ಲಿ ನಿಮ್ಮನ್ನು ಸಿನಿಮಾ ಕೂರಿಸಿದರೆ, ನೀವು ಅಂದ್ಕೊಂಡಂತೆ ಆಗುತ್ತೆ. ಹರಿ, ರಿ ರೆಕಾರ್ಡಿಂಗ್ಗೆ ಬರೋಕೂ ಮುನ್ನ ಸಿನಿಮಾ ನೋಡುತ್ತಾರೆ. ಎಷ್ಟೋ ಸಿನಿಮಾ ಇದು ಲೆಂಥ್ ಆಯ್ತು ತೆಗೀರಿ, ಇದ್ಯಾಕೋ ಸರಿಯಿಲ್ಲ. ಆ ಜಡ್ಜ್ಮೆಂಟ್ ಇರೋರು ಅವರೇ ಡೈರೆಕ್ಷನ್ಗೆ ಬಂದಾಗ ಎಷ್ಟು ಜಡ್ಜ್ಮೆಂಟ್ ಇರಬೇಡಾ? ಇದೊಂದು ಸಾಕಲ್ಲ." ಎನ್ನುತ್ತಾರೆ ದರ್ಶನ್.

'ಹೃರಿಕೃಷ್ಣ ಮೊದಲ ಮೆಕಾನಿಕ್ ಆಗಿದ್ರು'
ಹರಿಕೃಷ್ಣ ಮ್ಯೂಸಿಕ್ ಮಾಡುವುದಕ್ಕೂ ಮುನ್ನ ಮೊದಲ ಮೆಕಾನಿಕ್ ಆಗಿದ್ದರು ಅನ್ನೋದನ್ನು ದರ್ಶನ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. " ಹರಿ ಪಕ್ಕಾ ಮಾಸ್. ಹರಿಯನ್ನು ನೀವೆಲ್ಲ ಮ್ಯೂಸಿಕ್ ಡೈರೆಕ್ಟರ್ ಅಂತ ಅಂದ್ಕೊಂಡಿದ್ದೀರ. ಇದಕ್ಕೂ ಮುನ್ನ ಅವರು ಮೆಕಾನಿಕ್. ಅವರಿಗೆ ಮಾಸ್ ಏನು ಅನ್ನೋದು ಅಲ್ಲಿಂದಲೇ ಗೊತ್ತು. ಮ್ಯೂಸಿಕ್ ಡೈರೆಕ್ಟರ್ ಆಗಿ ಅಲ್ಲಿಂದ ಬೆಳೆದುಕೊಂಡು ಬಂದ್ರು." ಅಂತ ಹರಿಕೃಷ್ಣ ಅವರ ಮಾಸ್ ಸಿನಿಮಾ ಮೇಕಿಂಗ್ ಗುಟ್ಟನ್ನು ರಿವೀಲ್ ಮಾಡಿದ್ದಾರೆ.