»   » ಸ್ಯಾಂಡಲ್ ವುಡ್ ಸಾಮ್ರಾಜ್ಯದ ಮುಂದಿನ ರಾಣಿ 'ಶೃತಿ ಹರಿಹರನ್' ಆಗ್ಬಹುದಲ್ವಾ?

ಸ್ಯಾಂಡಲ್ ವುಡ್ ಸಾಮ್ರಾಜ್ಯದ ಮುಂದಿನ ರಾಣಿ 'ಶೃತಿ ಹರಿಹರನ್' ಆಗ್ಬಹುದಲ್ವಾ?

Posted By: Naveen
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಒಂದು ಕಾಲಕ್ಕೆ ನಟಿ ರಮ್ಯಾ ರಾಣಿಯಾಗಿ ಮೆರೆದಿದ್ದರು. ರಮ್ಯಾ ಬಳಿಕ ಖಾಲಿಯಾದ ಸ್ಥಾನವನ್ನು ತುಂಬಿದ್ದ ರಾಧಿಕಾ ಪಂಡಿತ್ 'ಕನ್ನಡದ ನಂ.1 ನಟಿ' ಅಂತ ಬಹುಕಾಲ ಕರೆಸಿಕೊಂಡರು. ಈಗ ಅದೇ ಸ್ಥಾನಕ್ಕೆ ನಟಿ ಶೃತಿ ಹರಿಹರನ್ ಪೈಪೋಟಿ ನೀಡುತ್ತಿರುವಂತಿದೆ.

ಸ್ಯಾಂಡಲ್ ವುಡ್ ಸಿನಿ ಸ್ಕ್ರೀನ್ ಮೇಲೆ ಈಗ ಶೃತಿ ಹರಿಹರನ್ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಶೃತಿ ನಟನೆಯ ಹೊಸ ಸಿನಿಮಾಗಳು ತಿಂಗಳಿಗೆ ಒಂದಾದರೂ ಸೆಟ್ಟೇರುತ್ತಲಿವೆ. ಕನ್ನಡದಲ್ಲಿ ಮಾತ್ರವಲ್ಲದೆ ಶೃತಿ ಪರಭಾಷಾ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.[ಬುಲೆಟ್ ಏರಿ ಬಂದ ಮೂಗುತಿ ಸುಂದರಿ ಶ್ರುತಿ ಹರಿಹರನ್]

'ಲೂಸಿಯ' ಬೆಡಗಿ ಶೃತಿ ಹರಿಹರನ್ ಅದೇನು ಮೋಡಿ ಮಾಡಿದ್ದಾರೋ ಏನೋ... ಈಗ ಅವರ ಕೈ ತುಂಬ ಸಿನಿಮಾಗಳಿವೆ. ಸದ್ಯ ಬರೋಬ್ಬರಿ 8 ಸಿನಿಮಾಗಳಲ್ಲಿ ಶೃತಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಬಹುಪಾಲು ದೊಡ್ಡ ದೊಡ್ಡ ಸಿನಿಮಾಗಳೇ.! ಮುಂದೆ ಓದಿ...

ಬರೋಬ್ಬರಿ 8 ಸಿನಿಮಾಗಳಲ್ಲಿ ನಟಿ ಶೃತಿ

ಶೃತಿ ಹರಿಹರನ್ ಈಗ ಬರೋಬ್ಬರಿ 8 ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಇತ್ತೀಚೆಗಷ್ಟೆ 'ತಾರಕಾಸುರ' ಮತ್ತು 'ಟೆಸ್ಲಾ' ಎನ್ನುವ ಹೊಸ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದಾರೆ.['ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್]

ಉಪ್ಪಿ, ದರ್ಶನ್ ಜೊತೆ ಸ್ಕ್ರೀನ್ ಶೇರ್

ಶೃತಿ ಹರಿಹರನ್ ಈಗ ಕನ್ನಡದ ದೊಡ್ಡ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಉಪ್ಪಿ ಅಭಿನಯದ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಹಾಗೂ ದರ್ಶನ್ ನಟನೆಯ 'ತಾರಕ್' ಚಿತ್ರಗಳಿಗೆ ಶೃತಿ ನಾಯಕಿ.[ಕಾಮುಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶ್ರುತಿ ಹರಿಹರನ್ ದೂರು]

ಅರ್ಜುನ್ ಸರ್ಜಾ 150ನೇ ಚಿತ್ರ

ತಮ್ಮ ಕೆರಿಯರ್ ನ ಮಹತ್ವಾಕಾಂಕ್ಷೆಯ ಸಿನಿಮಾ ಒಂದರಲ್ಲಿ ಶೃತಿ ಈಗ ನಟಿಸಿದ್ದಾರೆ. ಅರ್ಜುನ್ ಸರ್ಜಾ ಅವರ 150ನೇ ಸಿನಿಮಾದಲ್ಲಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು.

'ದಿ ವಿಲನ್'ಗೆ ಸಾಥ್

ಪ್ರೇಮ್ ನಿರ್ದೇಶನದ ಕನ್ನಡದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್'. ಶಿವಣ್ಣ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಪ್ರಮುಖ ಪಾತ್ರವೊಂದನ್ನು ಶೃತಿ ನಿರ್ವಹಿಸಲಿದ್ದಾರೆ.

ತ್ರಿಭಾಷಾ ನಟಿ

ಕನ್ನಡದ ಸಿನಿಮಾ ಮಾತ್ರವಲ್ಲದೆ ಪರಭಾಷೆಯಲ್ಲೂ ಸಹ ಶೃತಿ ಮೈ ಮಾಟ ಮ್ಯಾಜಿಕ್ ಮಾಡಿದೆ. ಸದ್ಯ ಈಗ ತಮಿಳಿನಲ್ಲಿ ಮತ್ತು ಮಲೆಯಾಳಂ ನಲ್ಲಿ ಒಂದೊಂದು ಚಿತ್ರಗಳಲ್ಲಿ ಶೃತಿ ಅಭಿನಯಿಸುತ್ತಿದ್ದಾರೆ.

ಪ್ರಯೋಗಾತ್ಮಕ ಪಾತ್ರಗಳು

ಶೃತಿ ಹರಿಹರನ್ ಹೆಚ್ಚು ಗಮನ ಸೆಳೆಯುತ್ತಿರುವುದು ಅವರ ಪ್ರಯೋಗಾತ್ಮಕ ಪಾತ್ರಗಳ ಮೂಲಕ. ಲೂಸಿಯಾ, ರಾಟೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಊರ್ವಿ, ಬ್ಯೂಟಿಫುಲ್ ಮನಸುಗಳು ಸಿನಿಮಾಗಳಲ್ಲಿನ ಅವರ ಡಿಫರೆಂಟ್ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿದೆ.

ಪ್ರತಿಭೆ ಜೊತೆ ಲಕ್

ಒಂದು ಕಡೆ ಪ್ರತಿಭೆ ಇನ್ನೊಂದು ಕಡೆ ಅದೃಷ್ಟ... ಎರಡು ಇರುವ ಶೃತಿಗೆ ಒಳ್ಳೊಳ್ಳೆ ಸಿನಿಮಾ ಅವಕಾಶ ಹುಡುಕಿಕೊಂಡು ಬರುತ್ತಿದೆ.

ರಾಜ್ಯ ಪ್ರಶಸ್ತಿ ಸಿಕ್ಕಿದೆ

ಶೃತಿ ಹರಿಹರನ್ ಒಳ್ಳೆಯ ನಟಿ ಅಂತ ಸಾಬೀತು ಮಾಡಿದ್ದಾರೆ. ಇತ್ತೀಚಿಗಷ್ಟೆ 'ಬ್ಯೂಟಿಫುಲ್ ಮನಸುಗಳು' ಸಿನಿಮಾದ ಅವರ ನಟನೆಗೆ 'ರಾಜ್ಯ ಚಲನಚಿತ್ರ ಪ್ರಶಸ್ತಿ' ಲಭಿಸಿದೆ.

ನಂ 1 ನಟಿ ಆಗಬಹುದಲ್ವಾ

ಶೃತಿ ಹರಿಹರನ್ ಹೋಗುತ್ತಿರುವ ಸ್ಪೀಡ್ ನೋಡಿದರೆ ಅವರು ಕನ್ನಡ ನಂ 1 ನಟಿ ಆಗಬಹುದು ಅಂತ ಅನಿಸದೇ ಇರುವುದಿಲ್ಲ. ಇದೇ ರೀತಿ ದೊಡ್ಡ ದೊಡ್ಡ ಅವಕಾಶಗಳು ಸಿಕ್ಕಿ ಒಳ್ಳೆಯ ಪಾತ್ರಗಳನ್ನು ಮಾಡಿದರೆ ಶೃತಿ ಖಂಡಿತ ಸ್ಯಾಂಡಲ್ ವುಡ್ ಕ್ವೀನ್ ಆಗುವುದರಲ್ಲಿ ಡೌಟೇ ಇಲ್ಲ.

English summary
Will 'Sruthi Hariharan' be next queen of Sandalwood ?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X