Don't Miss!
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿ ಸಂಭ್ರಮದಲ್ಲಿ ಮುಳುಗೆದ್ದ ಯಶ್, ದರ್ಶನ್, ರಕ್ಷಿತಾ ಪ್ರೇಮ್!
ಸಂಕ್ರಾಂತಿ ಸಂಭ್ರಮ ಸಡಗರ ಎಲ್ಲೆಲ್ಲೂ ಜೋರಾಗಿತ್ತು. ಅದರಲ್ಲೂ ಸ್ಯಾಂಡಲ್‌ವುಡ್‌ನ ಕೆಲವು ತಾರೆಯರು ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ.
ಪ್ರತಿ ವರ್ಷದಂತೆ ದರ್ಶನ್ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ರೆ, ಅತ್ತ ಯಶ್ ಕೂಡ ತೋಟದಲ್ಲಿ ಕಟ್ಟುತ್ತಿರುವ ಹೊಸ ಮನೆ ಹಾಗೂ ತೋಟದಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ.
Puttakkana
Makkalu:
ಪುಟ್ಟಕ್ಕನ
ಮಗಳು
ಸಹನಾ
ಟ್ರೆಡಿಷನಲ್
ಲುಕ್
ಹೇಗಿದೆ
ನೋಡಿ!
ಇನ್ನೊಂದು ಕಡೆ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ತಮ್ಮ ಫ್ಯಾಮಿಲಿ ಸಮೇತ ಮಂಡ್ಯದ ಫಾರ್ಮ್ ಹೌಸ್‌ನಲ್ಲಿ ಕಿಚ್ಚು ಹಾಯಿಸುವ ಮೂಲಕ ಸುಗ್ಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಸಂ'ಕ್ರಾಂತಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಡು, ಟ್ರೈಲರ್ ರಿಲೀಸ್ ಅಂತ ಬ್ಯುಸಿಯಾಗಿದ್ರೆ, ಇನ್ನೊಂದು ಕಡೆ ಬ್ಯಾಕ್ ಟು ಬ್ಯಾಕ್ ಸಂದರ್ಶನ ನೀಡುತ್ತಿದ್ದಾರೆ.ಈ ಮಧ್ಯೆ ಪ್ರತಿ ವರ್ಷದಂತೆಯೇ ತಮ್ಮ ತೋಟದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಆಪ್ತರೊಂದಿಗೆ ಫಾರ್ಮ್ ಹೌಸ್‌ನಲ್ಲಿ ಕೇಕ್ ಮಾಡಿಯೂ ಹಬ್ಬವನ್ನು ಆಚರಿಸಿದ್ದಾರೆ.
'ವಾಲ್ತೇರು
ವೀರಯ್ಯ',
'ವೀರ
ಸಿಂಹ
ರೆಡ್ಡಿ',
'ವಾರಿಸು'ಗೆ
ಹೆಚ್ಚು
ಥಿಯೇಟರ್:
ಕನ್ನಡದ
ಕತೆಯೇನು?

ಕುಟುಂಬದೊಂದಿಗೆ ರಾಕಿಭಾಯ್ ಸಂಭ್ರಮ
ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ, ರಾಕಿಂಗ್ ಸ್ಟಾರ್ ಯಶ್ ವಿಶೇಷ ಸಂದರ್ಭಗಳಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಾರೆ. ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಯಶ್ ಸಂಕ್ರಾಂತಿ ಹಬ್ಬವನ್ನು ಮಾತ್ರ ಫ್ಯಾಮಿಲಿ ಜೊತೆನೇ ಆಚರಿಸಿದ್ದಾರೆ. ಅದರಲ್ಲೂ ಹಾಸನದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಪತ್ನಿ ರಾಧಿಕಾ ಪಂಡಿತ್, ಮಕ್ಕಳು ಹಾಗೂ ತಂದೆತಾಯಿ ಜೊತೆ ಸಂಭ್ರಮಿಸಿದ್ದಾರೆ.

ಯಶ್ ಹೊಸ ಮನೆ ನಿರ್ಮಾಣ
ಹಾಸನದಲ್ಲಿ ರಾಕಿ ಭಾಯ್ ಜಮೀನು ಖರೀದಿ ಮಾಡಿರೋದು ಗೊತ್ತೇ ಇದೆ. ಇದೇ ಜಮೀನಿನಲ್ಲಿ ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ಯಶ್ ಹೊಸ ಮನೆ ನಿರ್ಮಾಣದಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊಗಳು ಕೂಡ ಇದನ್ನೇ ಹೇಳುತ್ತಿವೆ.

ರಕ್ಷಿತಾ ಪ್ರೇಮ್ ಸಂಕ್ರಾಂತಿ
ನಿರ್ದೇಶಕ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಕೂಡ ಮಂಡ್ಯದಲ್ಲಿರುವ ತಮ್ಮ ತೋಟದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸಿದ್ದಾರೆ. ಕಿಚ್ಚು ಹಾಯಿಸಿ ಸಂಭ್ರಮ ಪಟ್ಟಿದ್ದಾರೆ. ತೋಟದಲ್ಲಿ ಸಾಕಿರುವ ಹಸುಗಳ ಜೊತೆ ರಕ್ಷಿತಾ ನಿಂತು ಪೋಟೊಗಳನ್ನು ತೆಗೆಸಿಕೊಂಡಿದ್ದಾರೆ. ಒಟ್ನಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.