»   » ಅಭಿಮಾನಿಯ ಕಷ್ಟಕ್ಕೆ ಓಡೋಡಿ ಬಂದ ಯಶ್, ರಾಧಿಕಾ

ಅಭಿಮಾನಿಯ ಕಷ್ಟಕ್ಕೆ ಓಡೋಡಿ ಬಂದ ಯಶ್, ರಾಧಿಕಾ

Posted By:
Subscribe to Filmibeat Kannada

ಬೆಳ್ಳಿ ತೆರೆಯ ಮೇಲೆ ಜನಾನುರಾಗಿಯಾಗಿರುವ ನಾಯಕ, ನಾಯಕಿಯರ ಕಥೆಗಳನ್ನು ನೋಡಿದ್ದೇವೆ, ಆನಂದಿಸಿದ್ದೇವೆ. ನಿಜ ಜೀವನದಲ್ಲೂ ನಟನಟಿಯರು ಮಾನವೀಯತೆ ಮೆರೆದ ಉದಾಹರಣೆಗಳೂ ನಮ್ಮ ಮುಂದೆ ಸಾಕಷ್ಟಿವೆ. ಆ ಪಟ್ಟಿಗೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ.

ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿರುವ ಯಶ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ರಾಜಾಹುಲಿಯಂತೆ ಆರ್ಭಟಿಸುತ್ತಿರುವ ಸುದ್ದಿ ಹೊಸದೇನಲ್ಲ. ಸ್ಯಾಂಡಲ್ ವುಡ್ಡಿನ ಮೋಸ್ಟ್ ಬ್ಯೂಟಿಫುಲ್ ಪೇರ್ ಎಂದೇ ಹೇಳಲಾಗುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಮುಂದಿನ ಚಿತ್ರ ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ. (ಲೋ ರಾಮಾಚಾರಿ ಎಲ್ಲಿದ್ದೀಯೋ ಟೀಸರ್ ಸೂಪರ್)

ಈ ಚಿತ್ರದ ಶೂಟಿಂಗ್ ಕಳೆದ ಮೂರು ದಿನಗಳಿಂದ ಚಿತ್ರದುರ್ಗದ ಕೋಟೆಯಲ್ಲಿ ನಡೆಯುತ್ತಿತ್ತು. ರಾಧಿಕಾ ಮತ್ತು ಯಶ್ ಅಭಿನಯದ ಈ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ದುರ್ಗದ ಕೋಟೆಯಲ್ಲಿ ಭರ್ಜರಿಯಾಗಿ ಸಾಗುತ್ತಿತ್ತು.

ಚಿತ್ರೀಕರಣದ ಕೊನೆಯ ದಿನವಾದ ಗುರುವಾರ ಅಭಿಮಾನಿ ದೇವರುಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅದರಲ್ಲಿ ಯಶ್ ಮತ್ತು ರಾಧಿಕಾ ಅವರ ಕಟ್ಟಾ ಅಭಿಮಾನಿ, ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕೂಡಾ ಒಬ್ಬರು. ಮುಂದೆ ಓದಿ..

(ಮೂಲ ಮಾಹಿತಿ: ಸುವರ್ಣ ನ್ಯೂಸ್)

ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ

ಜಿಲ್ಲೆಯ ಪದವಿಪೂರ್ವ ಕಾಲೇಜಿನ ವಿಶಾಲಾಕ್ಷಿ ಎನ್ನುವ ವಿದ್ಯಾರ್ಥಿನಿ, ಕಾಲೇಜಿನ ಪ್ರಥಮ ಪಿಯು ಪರೀಕ್ಷೆಗೆ ಹಾಜರಾಗಿ ನಂತರ ಚಿತ್ರೀಕರಣ ನಡೆಯುತ್ತಿದ್ದ ಶೂಟಿಂಗ್ ಸ್ಪಾಟ್ ಬಳಿ ಓಡೋಡಿ ಬಂದಿದ್ದಾಳೆ. ಮೆಚ್ಚಿನ ನಾಯಕ ನಟ ಮತ್ತು ನಟಿಯನ್ನು ಕಣ್ಣಾರೆ ಕಂಡು ಕಣ್ತುಂಬಿಸಿಕೊಂಡಿದ್ದಾಳೆ.

ಕೋಟೆಯಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ

ಕೋಟೆಯ ಮೇಲೆ ಹತ್ತಿ ಚಿತ್ರೀಕರಣ ವೀಕ್ಷಿಸುತ್ತಿದ್ದ ಈ ವಿದ್ಯಾರ್ಥಿನಿ ಆಯತಪ್ಪಿ ಹನ್ನೆರಡು ಅಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ನೆರೆದಿದ್ದವರು ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿದ ಯಶ್, ರಾಧಿಕಾ

ವಿಷಯ ತಿಳಿದ ಯಶ್, ರಾಧಿಕಾ ಪಂಡಿತ್ ಚಿತ್ರೀಕರಣವನ್ನು ಅರ್ಧದಲ್ಲೇ ನಿಲ್ಲಿಸಿ, ಆಸ್ಪತ್ರೆಯತ್ತ ದೌಡಾಯಿಸಿದರು. ಆಕೆಯ ಆರೋಗ್ಯ ವಿಚಾರಿಸಿ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಅಷ್ಟೇ ಅಲ್ಲದೇ ಆಸ್ಪತ್ರೆಯ ಬಿಲ್ಲನ್ನು ತಾವೇ ಪಾವತಿಸುವುದಾಗಿ ಆಸ್ಪತ್ರೆಯ ಕಚೇರಿಗೆ ತಿಳಿಸಿದರು.

ಮಾನವೀಯತೆ ಮೆರೆದ ಇಬ್ಬರೂ

ತಮ್ಮ ಚಿತ್ರದ ಶೂಟಿಂಗ್ ವೇಳೆ ಅಪಘಾತಕ್ಕೀಡಾದ ಅಭಿಮಾನಿಯ ಸಂಕಷ್ಟಕ್ಕೆ ಶೂಟಿಂಗ್ ಡ್ರೆಸ್ಸಿನಲ್ಲೇ ಆಸ್ಪತ್ರೆಗೆ ಯಶ್ ಮತ್ತು ರಾಧಿಕಾ ಬಂದಿದ್ದು ಅಭಿಮಾನಿಗಳ 'ಅಭಿಮಾನ'ವನ್ನು ಇನ್ನಷ್ಟು ಹೆಚ್ಚಿಸಿತ್ತು. ಯಶ್ ಸಿಲ್ಕ್ ಪಂಚೆ, ಶರ್ಟಿನಲ್ಲಿ ಮತ್ತು ರಾಧಿಕಾ ಜರತಾರಿ ಸೀರೆಯಲ್ಲಿ, ಮೈತುಂಬ ಬಂಗಾರ ಹಾಕಿಕೊಂಡಿದ್ದ costume ನಲ್ಲೇ ಅಭಿಮಾನಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು.

ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ

ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿರುವ 'ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ' ಚಿತ್ರದಲ್ಲಿ, ಡ್ರಾಮಾ ಮತ್ತು ಮೊಗ್ಗಿನ ಮನಸು ಚಿತ್ರಗಳ ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂತೋಷ್ ಅವರು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದ್ದು, ಲೇ ರಾಮಾಚಾರಿ ಎಲ್ಲಿದ್ದೀಯೋ ಎನ್ನುವ ಚಿತ್ರದ ಟೀಸರ್ ಸೂಪರ್ ಹಿಟ್ ಆಗಿತ್ತು.

English summary
Yash and Radhika Pandit met their fan (Vishalakshi) in hospital in Chitradurga. Vishalakshi fell down while watching the Mr and Mrs Ramachari shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada