"ನಾನು ಕೂಡ 'ಕೆಜಿಎಫ್' ನಿರ್ಮಾಪಕ.. ಸ್ಟಾರ್ ಆಗುವುದಕ್ಕೆ ಮೊದಲೇ ನಾನು ಸೂಪರ್‌ಸ್ಟಾರ್"-ಯಶ್

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ಈ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಮೊದಲ ಸ್ಥಾನದಲ್ಲಿದೆ. ಆದರೆ, ಸಿನಿಮಾ ರಿಲೀಸ್ ಆಗಿ ಏಳೆಂಟು ತಿಂಗಳುಗಳೇ ಆದರೂ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.

'ಕೆಜಿಎಫ್ 2' ಸಕ್ಸಸ್ ಕಂಡ ಬಳಿಕ ಯಶ್ ಹೆಚ್ಚು ಸಂದರ್ಶನಗಳನ್ನೂ ನೀಡಿಲ್ಲ. ಹೊಸ ಸಿನಿಮಾ ಬಗ್ಗೆ ಹೇಳಿಯೂ ಇಲ್ಲ. ಇನ್ನೇನು 2022 ಮುಗಿಯುತ್ತಿರುವ ವೇಳೆ ಯಶ್ ಸಂದರ್ಶನ ನೀಡಿದ್ದಾರೆ. ಫಿಲ್ಮ್ ಕಂಪಾನಿಯನ್‌ಗೆ ಜೊತೆ ಕೆಲವು ಗುಟ್ಟುಗಳನ್ನು ಬಿಚ್ಚಿದ್ದಾರೆ.

ಈ ಸಂದರ್ಶನದಲ್ಲಿ ಯಶ್ 'ಕೆಜಿಎಫ್ 2' ಸಿನಿಮಾ ಬಗ್ಗೆ, ಮುಂದಿನ ಪ್ರಾಜೆಕ್ಟ್ ಬಗ್ಗೆ, ಚಿತ್ರರಂಗದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಹೆಜ್ಜೆ ಏನು? 'ಕೆಜಿಎಫ್ 2' ಬಗ್ಗೆ ಇದೇ ಮೊದಲ ಬಾರಿಗೆ ಗುಟ್ಟು ಬಿಚ್ಚಿಟ್ಟಿದ್ದಾರೆ.

ನಾನು 'ಕೆಜಿಎಫ್' ನಿರ್ಮಾಪಕ ಕೂಡ ಹೌದು

ನಾನು 'ಕೆಜಿಎಫ್' ನಿರ್ಮಾಪಕ ಕೂಡ ಹೌದು

'ಕೆಜಿಎಫ್ 2' ಸಿನಿಮಾ ಬಗ್ಗೆ ಯಶ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ "ನಾನು ಕೂಡ ಕೆಜಿಎಫ್ ಸಿನಿಮಾದ ನಿರ್ಮಾಪಕ" ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಯಾವತ್ತೂ ಹಣಕ್ಕಾಗಿ ಕೆಲಸ ಮಾಡಿಲ್ಲ. ಆದರೆ ನಾನು ಹಣಕ್ಕೆ ಬೆಲೆ ಕೊಡುತ್ತೇನೆ. ನಾನು ಕೆಜಿಎಫ್ ಸಿನಿಮಾ ನಿರ್ಮಾಪಕ ಕೂಡ ಹೌದು. ಕೇವಲ ನಟ ಅಷ್ಟೇ ಅಲ್ಲ. ಹೀಗಾಗಿ ನನಗೆ ಹಣದ ಬೆಲೆ ಏನು ಅಂತ ಗೊತ್ತು. ಆದರೆ ಹಣ ನನ್ನನ್ನು ಖುಷಿ ಪಡಿಸುವುದಿಲ್ಲ. ಮುಂದಿನಿ ನಿಲ್ದಾಣಕ್ಕೆ ಹೋಗುವುದಕ್ಕೆ ಹಣ ಅನ್ನೋದು ಒಂದು ಪವರ್ ಇದ್ದಂತೆ." ಎಂದಿದ್ದಾರೆ.

ನಾನು 'ಕೆಜಿಎಫ್‌'ನಲ್ಲೇ ಮುಳುಗಿಲ್ಲ

ನಾನು 'ಕೆಜಿಎಫ್‌'ನಲ್ಲೇ ಮುಳುಗಿಲ್ಲ

"ನೀವು ಕೇವಲ ನಿಮ್ಮ ಭೂತಕಾಲದ ಬಗ್ಗೆ ಮಾತಾಡಬೇಡಿ. ಅದು ಮುಗಿದ ಅಧ್ಯಾಯ. ನನಗೆ ಹಿಂದಿನದನ್ನು ಮಾತಾಡುವುದಕ್ಕೆ ಇಷ್ಟವಿಲ್ಲ. 2014ರಲ್ಲಿ ನಾನು ಕೆಜಿಎಫ್ ಬಗ್ಗೆ ಕನಸುಕಂಡಿದ್ದೆ. ಆ ಬಳಿಕ ಕಾರ್ಯರೂಪ ತರುವುದಾಗಿತ್ತು. ಜೊತೆ ಅದನ್ನು ನಂಬುವ ಜನರನ್ನು ಸೇರಿಸುವುದಾಗಿತ್ತು. ನಾನು ಕೆಜಿಎಫ್‌ನಲ್ಲೇ ಮುಳುಗಿಲ್ಲ. ನಾನು ಬೇರೆ ಏನನ್ನೋ ಯೋಚನೆ ಮಾಡುತ್ತಿದ್ದೇನೆ. ಮುಂದೆ ಏನು ಮಾಡಬೇಕು? ಇಂತಹದ್ದೇ ಒಂದಿಷ್ಟು ಆಲೋಚನೆಗಳಿವೆ." ಎಂದು ಯಶ್ ಹೇಳಿದ್ದಾರೆ.

'ಹೆಚ್ಚು ಸಿನಿಮಾ ಮಾಡು ಅಂತ ಸಲಹೆ ಕೊಡ್ತಾರೆ'

'ಹೆಚ್ಚು ಸಿನಿಮಾ ಮಾಡು ಅಂತ ಸಲಹೆ ಕೊಡ್ತಾರೆ'

"ನನಗೆ ಸುಮಾರು ಜನರು ಹೇಳುತ್ತಿದ್ದಾರೆ. ಏನು ಮಾಡುತ್ತಿದ್ದೀಯಾ? ಇದೇ ಟೈಂ. ನೀನು ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು. ನಾನು ನನ್ನ ಲೈಫ್‌ನಲ್ಲಿ ಅಂತಹದ್ದು ಏನನ್ನೂ ಮಾಡಿಲ್ಲ. ಆರಂಭದ ದಿನಗಳಲ್ಲಿ ಒಂದರ ಹಿಂದೊಂದು ಸಿನಿಮಾ ಮಾಡಿದ್ದೆ. ಉತ್ತರ ಕರ್ನಾಟಕದ ಸಿನಿಮಾ, ನಿರ್ದೇಶಕರ ಸಿನಿಮಾ, ನಿರ್ಮಾಪಕರ ಸಿನಿಮಾ ಅಂತ ಮಾಡಿದ್ದೆ. ಆದರೆ, ಒಮ್ಮೆ ನೀವು ಇವೆಲ್ಲವನ್ನು ದಾಟಿ ಬಂದ ಮೇಲೆ ಒಬ್ಬ ನಟನಾಗಿ ಘನತೆಯನ್ನು ಕಾಪಾಡಿಕೊಳ್ಳಬೇಕು."

'ಸ್ಟಾರ್ ಆಗುವುದಕ್ಕೆ ಮೊದಲ ಸೂಪರ್‌ಸ್ಟಾರ್ ಆಗಿದ್ದೆ'

'ಸ್ಟಾರ್ ಆಗುವುದಕ್ಕೆ ಮೊದಲ ಸೂಪರ್‌ಸ್ಟಾರ್ ಆಗಿದ್ದೆ'

"ನೀನು ಸ್ಟಾರ್ ಆಗಿದ್ದೀಯ ಹೇಗೆ ಅನಿಸುತ್ತಿದೆ ಅಂತ ಕೆಲವರು ಕೇಳುತ್ತಾರೆ. ಅವರಿಗೆ ನಾನು ಮೊದಲೇ ಸೂಪರ್‌ಸ್ಟಾರ್ ಆಗಿದ್ದೆ. ಜನರು ಅದನ್ನು ಒಪ್ಪಿಕೊಳ್ಳಲು ಸಮಯ ತೆಗೆದುಕೊಂಡರು ಎಂದು ಹೇಳುತ್ತಿದೆ. ಸಿನಿಮಾ ಕೂಡ ನಂಬಿಕೆ. ನಾನು ಹೆಚ್ಚೇನು ಯೋಚನೆ ಮಾಡುವುದಿಲ್ಲ. ನಾನು ಜನರನ್ನು ರೋಚಕ ರೈಡ್‌ಗೆ ಕರೆದುಕೊಂಡು ಹೋಗುತ್ತೇನೆ. ಆಮೇಲೆ ಕರೆದುಕೊಂಡು ಬಿಡುತ್ತೇನೆ ಅಷ್ಟೇ."

'ಕೆಜಿಎಫ್ ಮಾಡಿದ್ದು ಚಿತ್ರರಂಗಗೋಸ್ಕರ '

'ಕೆಜಿಎಫ್ ಮಾಡಿದ್ದು ಚಿತ್ರರಂಗಗೋಸ್ಕರ '

"ಒಂದು ಕೆಜಿಎಫ್ ಕನ್ನಡ ಚಿತ್ರರಂಗವನ್ನು ಬದಲಿಸಲು ಸಾಧ್ಯವಿಲ್ಲ. ನಾವು ಯಾಕೆ ಕೆಜಿಎಫ್ ಸಿನಿಮಾ ಮಾಡಿದ್ವಿ. ಬೇರೆಯವರ ಬಗ್ಗೆ ಗೊತ್ತಿಲ್ಲ. ನನ್ನ ಚಿತ್ರರಂಗಗೋಸ್ಕರ ನಾನು ಈ ಸಿನಿಮಾವನ್ನು ಮಾಡಿದ್ದೇನೆ. ಕಾಂತಾರ ಸಿನಿಮಾ ಗೆದ್ದಾಗ ನಾನು ತುಂಬಾನೇ ಖುಷಿ ಪಟ್ಟಿದ್ದೆ. ರಿಷಬ್‌ ಶೆಟ್ಟಿಗೆ ಈ ಯಶಸ್ಸು ದಕ್ಕಲೇಬೇಕು. ನೀವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡ್ಬೇಕು. ಅದ್ಭುತ ಸಿನಿಮಾ. ಇವತ್ತು ಆ ಸಿನಿಮಾವನ್ನು ರಿಲೀಸ್ ಮಾಡಿದ್ದರೆ, ದೊಡ್ಡ ಮಟ್ಟಕ್ಕೆ ರೀಚ್ ಆಗುತ್ತಿತ್ತು." ಎಂದು ಯಶ್ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Rocking Star Yash Says He is Not Only Actor But Also Producer Of KGF, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X