For Quick Alerts
  ALLOW NOTIFICATIONS  
  For Daily Alerts

  9 ವರ್ಷಗಳ ಬಳಿಕ ಬಾಲಿವುಡ್‌ಗೆ 'ಗೂಗ್ಲಿ': ಏನಂದ್ರು ಪವನ್ ಒಡೆಯರ್?

  |

  ಯಶ್ ಈಗ ಸ್ಯಾಂಡಲ್‌ವುಡ್ ಸ್ಟಾರ್ ಅಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ಯಶ್ ಸಿನಿಮಾಗಳ ಮೇಲೆ ಎಲ್ಲರ ಕಣ್ಣುಬಿದ್ದಿದೆ. ರಾಕಿ ಭಾಯ್ ಸಿನಿಮಾವನ್ನು ರಿಮೇಕ್ ಮಾಡಲು ಮುಂದಾಗುತ್ತಿದ್ದಾರೆ.

  2013ರಲ್ಲಿ ಪವನ್ ಒಡೆಯರ್ ನಿರ್ದೇಶನ 'ಗೂಗ್ಲಿ' ಸಿನಿಮಾ ರಿಮೇಕ್ ಆಗುತ್ತಿದೆ. ಈಗಾಗಲೇ ನಿರ್ಮಾಪಕ ಜಯಣ್ಣರಿಂದ 'ಗೂಗ್ಲಿ' ಸಿನಿಮಾದ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಲಾಗಿದೆ. ಈಗ ಇದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  ಪ್ಯಾನ್‌ ಇಂಡಿಯಾ ಸ್ಟಾರ್ ಯಶ್ 14 ವರ್ಷಗಳ ಸಿನಿಜರ್ನಿಯಲ್ಲಿ ಸಿಕ್ಕ ಟರ್ನಿಂಗ್ ಪಾಯಿಂಟ್ ಎಷ್ಟು?ಪ್ಯಾನ್‌ ಇಂಡಿಯಾ ಸ್ಟಾರ್ ಯಶ್ 14 ವರ್ಷಗಳ ಸಿನಿಜರ್ನಿಯಲ್ಲಿ ಸಿಕ್ಕ ಟರ್ನಿಂಗ್ ಪಾಯಿಂಟ್ ಎಷ್ಟು?

  ಅಷ್ಟಕ್ಕೂ 'ಗೂಗ್ಲಿ' ಸಿನಿಮಾ ರಿಮೇಕ್ ಮಾಡಲು ಹೊರಟಿದ್ದು ಯಾರು? ಸಿನಿಮಾ ಯಾವಾಗ ಸೆಟ್ಟೇರುತ್ತೆ? ಈ ಸಿನಿಮಾ ನಿರ್ದೇಶನ ಮಾಡಿದ ಪವನ್ ಒಡೆಯರ್ ರಿಮೇಕ್ ಮಾಡುತ್ತಿರುವ ಬಗ್ಗೆ ಏನಂತಾರೆ? ಅನ್ನೂ ಕುತೂಹಲವಂತೂ ಇದ್ದೇ ಇದೆ. ಈ ಬಗ್ಗೆ ಪವನ್ ಒಡೆಯರ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು? Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?

  'ಗೂಗ್ಲಿ' ರಿಮೇಕ್ ಹಕ್ಕು ಯಾರಿಗೆ?

  'ಗೂಗ್ಲಿ' ರಿಮೇಕ್ ಹಕ್ಕು ಯಾರಿಗೆ?

  2013ರ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ 'ಗೂಗ್ಲಿ'. ಇದು ಯಶ್ ಕರಿಯರ್‌ನಲ್ಲಿ ಸಕ್ಸಸ್ ಕಂಡ ಸಿನಿಮಾಗಳಲ್ಲಿ ಇದೂ ಒಂದು. ಅಲ್ಲದೆ ಸ್ಯಾಂಡಲ್‌ವುಡ್‌ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಪವನ್ ಒಡೆಯರ್ ನಿರ್ದೇಶಿಸಿದ ಈ ಸಿನಿಮಾದ ಹಕ್ಕುಗಳನ್ನು ಮಹೇಶ್ ದಾನಣ್ಣವರ್ ಎಂಬುವವರು ಪಡೆದುಕೊಂಡಿದ್ದಾರೆ. ಉತ್ತರ ಭಾರತದ ಭಾಷೆಗಳಲ್ಲಿ ರಿಮೇಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹಿಂದಿ, ಗುಜರಾತಿ, ಮರಾಠಿ, ಪಂಜಾಬಿ ಸೇರಿದಂತೆ ಹಲವು ಭಾಷೆಗಳ ರಿಮೇಕ್ ರೈಟ್ಸ್ ಅನ್ನು ಮಹೇಶ್ ಪಾಲಾಗಿದೆ.

  ಏನಂತಾರೆ ಪವನ್ ಒಡೆಯರ್ ?

  ಏನಂತಾರೆ ಪವನ್ ಒಡೆಯರ್ ?

  ಪವನ್ ಒಡೆಯರ್ ಕನ್ನಡದಲ್ಲಿ 'ಗೂಗ್ಲಿ' ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ ಅದೇ ಸಿನಿಮಾ 9 ವರ್ಷಗಳ ಬಳಿಕ ರಿಮೇಕ್ ಆಗುತ್ತಿದೆ. " ನನಗೂ ಗೂಗ್ಲಿ ರಿಮೇಕ್ ಆಗುತ್ತಿರುವ ಬಗ್ಗೆ ಗೊತ್ತಿರಲಿಲ್ಲ. ನಾನಗೂ ಸೋಶಿಯಲ್ ಮೀಡಿಯಾದಿಂದಲೇ ಈ ವಿಷಯ ಗೊತ್ತಾಗಿತ್ತು. ಇದು ಜಯಣ್ಣ ಹಾಗೂ ಮಹೇಶ್ ಎಂಬುವವರ ನಡುವೆ ನಡೆದಿರೋ ಒಡಂಬಡಿಕೆ. ರಿಮೇಕ್ ಆಗುತ್ತಿರುವ ಬಗ್ಗೆ ಜಯಣ್ಣ ಅವರೊಂದಿಗೆ ಮಾತಾಡಿಲ್ಲ." ಎಂದು ಪವನ್ ಒಡೆಯರ್ ಹೇಳಿದ್ದಾರೆ.

  'ಗೂಗ್ಲಿ' ಬಿಟ್ಟು 9 ವರ್ಷ

  'ಗೂಗ್ಲಿ' ಬಿಟ್ಟು 9 ವರ್ಷ

  2013 ಜುಲೈ 19ಕ್ಕೆ ಯಶ್ ಹಾಗೂ ಪವನ್ ಒಡೆಯರ್ ಇಬ್ಬರೂ ಸೇರಿ 'ಗೂಗ್ಲಿ' ಬಿಟ್ಟಿದ್ದರು. ಇಂದು 'ಗೂಗ್ಲಿ' ಸಿನಿಮಾ 9 ವರ್ಷಗಳ ಸಂಭ್ರಮದಲ್ಲಿದೆ. " ಗೂಗ್ಲಿ ಬಿಡುಗಡೆಯಾಗಿ 9 ವರ್ಷ ಆಗಿದ್ದು ನೆನೆದರೆ ಖುಷಿ ಆಗುತ್ತೆ. ಇಷ್ಟು ವರ್ಷ ಆದರೂ ಇನ್ನೂ ಗುರುತು ಇಟ್ಟುಕೊಂಡಿರೋದು ಖುಷಿ ಕೊಡುತ್ತೆ. ಇದೇ ದಿನ ರಿಮೇಕ್ ಬಗ್ಗೆ ಸುದ್ದಿ ಬಂದಿದ್ದು ಮತ್ತಷ್ಟು ಖುಷಿ." ಎನ್ನುತ್ತಾರೆ ಪವನ್ ಒಡೆಯರ್. ಇದೇ ವೇಳೆ ಯಶ್ ಅಭಿಮಾನಿಗಳಿಗೆ ಉತ್ತರ ಭಾರತದ ಭಾಷೆಗಳಿಗೆ ರಿಮೇಕ್ ಆಗುತ್ತಿರುವ ಬಗ್ಗೆ ಸಿಹಿ ಸುದ್ದಿನೂ ಸಿಕ್ಕಿದೆ. ಯಶ್, ಕೃತಿ ಕರಬಂಧ, ಅನಂತ್ ನಾಗ್ ಹಾಗೂ ಸಾಧುಕೋಕಿಲಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ, ಹಿಂದಿ ಸೇರಿದಂತೆ ಬೇರೆ ಭಾಷೆಯಲ್ಲಿ ಯಶ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲವಂತೂ ಇದೆ.

  ರಿಮೇಕ್ ಹಕ್ಕು ಪಡೆದವರು ಹೇಳಿದ್ದೇನು?

  ರಿಮೇಕ್ ಹಕ್ಕು ಪಡೆದವರು ಹೇಳಿದ್ದೇನು?

  'ಗೂಗ್ಲಿ' ಹಕ್ಕುಗಳನ್ನು ಪಡೆದ ಮಹೇಶ್ ದಾನಣ್ಣವರ್ ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕನ್ನಡ ಚಿತ್ರರಂಗದ ಜೊತೆ ತೀರ ಹತ್ತಿರದ ಒಡನಾಟವಿದೆ. ಯಶ್ ಸಿನಿಜರ್ನಿಯನ್ನು ನೋಡುತ್ತಾ ಬಂದಿದ್ದೇನೆ. ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. 'ಕೆಜಿಎಫ್' ಬಳಿಕವಂತೂ ಅದ್ಭುತ ಸಕ್ಸಸ್ ಸಿಕ್ಕಿದೆ. ಕನ್ನಡ ಅವತರಣಿಕೆಯನ್ನು ಯಾರು ನೋಡಿಲ್ಲವೋ ಅವರಿಗೆ ಈ ಸಿನಿಮಾ ಇಷ್ಟ ಆಗಲಿದೆ." ಮಹೇಶ್ ಎಂದಿದ್ದಾರೆ.

  English summary
  Yash Starrer Googly Kannada Movie Remake in Hindi, Gujarati, Marathi, Punjabi, Pawan Wadeyar Reaction, Know More.
  Wednesday, July 20, 2022, 10:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X