For Quick Alerts
  ALLOW NOTIFICATIONS  
  For Daily Alerts

  ಯಶ್ ಸಿನಿಮಾ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲಂಸ್

  |

  ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2'ಗಾಗಿ ಇಡೀ ವಿಶ್ವವೇ ಕಾದು ಕೂತಿದೆ. ಉತ್ತರದಿಂದ ದಕ್ಷಿಣದ ವರೆಗೂ ಸಿನಿಪ್ರಿಯರು ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ಎಲ್ಲಾ ಭಾಷೆಗಳನ್ನು ಮೀರಿ ಸಿನಿಮಾ ಪ್ರೇಮಿಗಳನ್ನು ರಂಜಿಸಿದಂತೆ 'ಕೆಜಿಎಫ್ 2' ಕೂಡ ಇಷ್ಟ ಆಗುತ್ತೆ ಅನ್ನುವ ನಂಬಿಕೆಯಲ್ಲಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೆ ಇನ್ನು ಒಂದೂವರೆ ತಿಂಗಳಿದ್ದರು ಚಿತ್ರತಂಡ ಮಾತ್ರ ಟ್ರೈಲರ್ ಬಗ್ಗೆ ತುಟಿಪಿಟಿಕ್ ಅಂದಿರಲಿಲ್ಲ. ಕಾದು ಕೂದು ಸುಸ್ತಾಗಿದ್ದ ಅಭಿಮಾನಿಗಳಿಗೆ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ.

  Recommended Video

  ವಿಶೇಷ ಪೋಸ್ಟರ್ ಗಳ ಮೂಲಕ ಪ್ರಮೋಷನ್ ಶುರು ಮಾಡಿಕೊಂಡ ಹೊಂಬಾಳೆ ಫಿಲ್ಮ್ಸ್

  'ಕೆಜಿಎಫ್ 2' ಟ್ರೈಲರ್ ಇದೇ ತಿಂಗಳ ಕೊನೆಯಲ್ಲಿ ರಿಲೀಸ್ ಆಗಲಿದೆ. ಮಾರ್ಚ್ 27ಕ್ಕೆ ಸರಿಯಾಗಿ 6.40ಕ್ಕೆ ಸಿನಿಮಾ ಟ್ರೈಲರ್ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಈ ಮೂಲಕ ಟ್ರೈಲರ್‌ಗಾಗಿ ಎದುರು ನೋಡುತ್ತಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಟ್ರೈಲರ್ ಅಭಿಮಾನಿಗಳ ಕೈ ಸೇರಲಿದೆ. ಇಲ್ಲಿವರೆಗೂ ಟ್ರೈಲರ್ ಯಾವಾಗ ಅನ್ನುವ ಟೆನ್ಸನ್ ಇತ್ತು. ಈಗ ಟ್ರೈಲರ್ ಹೇಗಿರುತ್ತೆ? ಅನ್ನುವ ಕುತೂಹಲದಲ್ಲಿ ಯಶ್ ಅಭಿಮಾನಿಗಳಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಸಿನಿಮಾ ಹೇಗಿರುತ್ತೆ ಅನ್ನುವುದಕ್ಕೆ ಈ ಟ್ರೈಲರ್ ಪೀಠಿಕೆ ಹಾಕಲಿದೆ. ಇದರೊಂದಿಗೆ ಈ ಟ್ರೈಲರ್‌ನಲ್ಲಿ ಯಾವ್ಯಾವ ಪಾತ್ರಗಳನ್ನು ರಿವೀಲ್ ಮಾಡುತ್ತಾರೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿದೆ.

  'ಕೆಜಿಎಫ್ 2' ಅಪ್‌ಡೇಟ್ಸ್ ಬೇಕೆ? ಬೇಗ ಮತ ಚಲಾಯಿಸಿ'ಕೆಜಿಎಫ್ 2' ಅಪ್‌ಡೇಟ್ಸ್ ಬೇಕೆ? ಬೇಗ ಮತ ಚಲಾಯಿಸಿ

  ಫ್ಯಾನ್ಸ್ ಕೋಪ ಟ್ರೈಲರ್ ಮದ್ದು

  'ಕೆಜಿಎಫ್ 2' ಟ್ರೈಲರ್‌ಗಾಗಿ ಫ್ಯಾನ್ಸ್ ಕಾದಿದ್ದು ಅದೆಷ್ಟು ದಿನ? ಮೂರು ವರ್ಷದ ಹಿಂದೆ ಈ ಸಿನಿಮಾ ಆರಂಭ ಆದಲ್ಲಿಂದ 'ಕೆಜಿಎಫ್ 2' ಟ್ರೈಲರ್ ನೋಡುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ನಿರ್ಮಾಣ ಸಂಸ್ಥೆ ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಮಾತಾಡಿರಲಿಲ್ಲ. ಕೊನೆಗೂ 'ಕೆಜಿಎಫ್ 2' ಟ್ರೈಲರ್ ಡೇಟ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಆತಂಕಕ್ಕೆ ಉತ್ತರ ನೀಡಿದೆ. ಮಾರ್ಚ್ 27ರಂದು ಯಾವ ಚಿತ್ರಕ್ಕೂ ತೊಂದರೆ ಆಗದಂತೆ ಸಿನಿಮಾ ಟ್ರೈಲರ್ ಅನ್ನು ಅಭಿಮಾನಿಗಳಿಗೆ ತೋರಿಸಲು ಕೊನೆಗೂ ಮನಸ್ಸು ಮಾಡಿದೆ. ಮಾರ್ಚ್ 27ಕ್ಕೆ ಟ್ರೈಲರ್ ರಿಲೀಸ್ ಯಾಕಾಗುತ್ತಿದೆ? ಇದು ಚಿತ್ರತಂಡದ ದಿಟ್ಟ ನಡೆ ಅಂತಿರೋದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  'KGF2' ಏಕಾಂಗಿ ಹೋರಾಟ

  'KGF2' ಏಕಾಂಗಿ ಹೋರಾಟ

  'ಕೆಜಿಎಫ್ 2' ಸಿನಿಮಾ ಟ್ರೈಲರ್ ಪ್ಯಾನ್ ಇಂಡಿಯಾ ಸಿನಿಮಾಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ರಾಜಮೌಳಿಯ RRR ಸಿನಿಮಾ ಬಿಡುಗಡೆಗೊಂಡ ದಿನವೇ 'KGF2' ಟ್ರೈಲರ್ ರಿಲೀಸ್ ಆಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ, ಯಾವ ಸಿನಿಮಾದ ಜೊತೆ ಒಡಂಬಡಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಸ್ಪಷ್ಪಪಡಿಸಿದೆ. ಈ ಮೂಲಕ ತನ್ನದೇನಿದ್ದರೂ ಏಕಾಂಗಿ ಹೋರಾಟವೆಂದು ಪರೋಕ್ಷವಾಗಿ ಚಿತ್ರರಂಗಕ್ಕೆ ಸಾರಿ ಹೇಳಿದೆ.

  ಬಿಗ್ ಸಿನಿಮಾಗಳಿಗೆ ದಾರಿ ಮಾಡಿಕೊಟ್ಟ 'KGF2'

  ಬಿಗ್ ಸಿನಿಮಾಗಳಿಗೆ ದಾರಿ ಮಾಡಿಕೊಟ್ಟ 'KGF2'

  ಯಾವುದೇ ದೊಡ್ಡ ಸಿನಿಮಾದೊಂದಿಗೆ ಕ್ಲ್ಯಾಶ್ ಆಗದಂತೆ 'ಕೆಜಿಎಫ್ 2' ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಮಾರ್ಚ್ 17ಕ್ಕೆ ಬಿಡುಗಡೆಯಾಗುತ್ತಿದೆ. ಹಾಗೇ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಅಭಿನಯದ RRR ಸಿನಿಮಾ ಮಾರ್ಚ್ 25ಕ್ಕೆ ಬಿಡುಗಡೆಯಾಗುತ್ತಿದೆ. ಈ ಎರಡೂ ಸಿನಿಮಾಗಳೂ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಬಹು ನಿರೀಕ್ಷೆಯ ಸಿನಿಮಾಗಳಾಗಿರುವುದರಿಂದ 'KGF2' ಟ್ರೈಲರ್ ಈ ಚಿತ್ರಗಳೊಂದಿಗೆ ಕ್ಲ್ಯಾಶ್ ಆಗದಂತೆ ನೋಡಿಕೊಂಡಿದೆ.

  IPL ಜೊತೆ 'KGF2' ಕ್ರೇಜ್

  IPL ಜೊತೆ 'KGF2' ಕ್ರೇಜ್

  'ಕೆಜಿಎಫ್ 2' ಪ್ರಚಾರಕ್ಕೆ ತನ್ನದೇ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇತ್ತೀಚೆಗಷ್ಟೇ ನಿರ್ಮಾಪಕ ವಿಜಯ್ ಕಿರಗಂದೂರ್ ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್‌ರನ್ನು ಭೇಟಿ ಮಾಡಿ, ಮಲಯಾಳಂ ವರ್ಷನ್ ಪ್ರಮೋಷನ್ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ಹಾಗೇ ಎಲ್ಲಾ ಭಾಷೆಯಲ್ಲೂ ಪ್ರಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಈ ಟ್ರೈಲರ್ ಬಿಡುಗಡೆ ವೇಳೆನೇ IPL ಪಂದ್ಯಗಳು ಆರಂಭ ಆಗಲಿವೆ. ಹೀಗಾಗಿ IPL ಪಂದ್ಯಾವಳಿಗಳಲ್ಲಿ 'ಕೆಜಿಎಫ್ 2' ಟ್ರೈಲರ್ ಪ್ರಚಾರಕ್ಕೆ ಸ್ಕೆಚ್ ಹಾಕಿದೆಯಾ ತಂಡ ಅನ್ನುವ ಅನುಮಾನ ಕೂಡ ಕಾಡುತ್ತಿದೆ.

  English summary
  Yash starrer KGF 2 trailer will be releasing on March 27th at 6.07pm. KGF 2 team has officialy announced.
  Thursday, March 3, 2022, 13:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X