For Quick Alerts
  ALLOW NOTIFICATIONS  
  For Daily Alerts

  ಆರಂಭಿಕ ಗೆಲುವು ತನ್ನದಾಗಿಸಿಕೊಂಡ 'ಯೆಲ್ಲೋ ಗ್ಯಾಂಗ್ಸ್': ಟ್ರೈಲರ್ ನೋಡಿದವರು ಏನಂದ್ರು?

  |

  'ಯೆಲ್ಲೋ ಗ್ಯಾಂಗ್ಸ್' ಗಾಂಧಿನಗರದ ಮಂದಿಯ ಗಮನ ಸೆಳೆದು, ಪ್ರೇಕ್ಷಕರಲ್ಲಿಯೂ ಕುತೂಹಲ ಮೂಡಿಸಿರುವ ಸಿನಿಮಾ. ಆರಂಭದಿಂದಲೂ ಪ್ರಚಾರಕ್ಕೆ ಹಾತೊರೆಯದೆ, ಕಂಟೆಂಟಿನ ಸುಳಿವಿನ ಮೂಲಕವೇ ಸದ್ದು ಮಾಡಿರೋ ಚಿತ್ರ 'ಯೆಲ್ಲೋ ಗ್ಯಾಂಗ್ಸ್'. ಅದರಿಂದಾಗಿಯೇ ಈ ಚಿತ್ರವೀಗ ಗೆಲುವಿನ ಹಾದಿಯನ್ನು ಹಿಡಿದಿದೆ. ಅದು ಟ್ರೈಲರ್ ನೋಡಿದ ಎಲ್ಲರಿಗೂ ಸ್ಪಷ್ಟವಾಗಿದೆ. ಈ ಸಿನಿಮಾದಲ್ಲಿ ಅದ್ಭುತ ಕಂಟೆಂಟಿದೆ ಎಂಬುದು ಈ ಮೂಲಕವೇ ಸಾಬೀತಾಗಿದೆ. ಮುಂದಿನ ತಿಂಗಳು ಅಂದರೆ ನವೆಂಬರ್ 11 ರಂದು ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿದೆ.

  'ಯೆಲ್ಲೋ ಗ್ಯಾಂಗ್ಸ್' ಹಲವು ವಿಚಾರಗಳಿಂದ ಕುತೂಹಲವನ್ನು ಹುಟ್ಟು ಹಾಕಿತ್ತು. ಟ್ರೈಲರ್ ಹೇಗಿರಬಹುದು ಎಂಬ ಕಾಯುವಿಕೆಯನ್ನು ಹಿಡಿದಿಟ್ಟಿತ್ತು. ಈಗ ಆ ಕಾಯುವಿಕೆಗೆ ಎಲ್ಲಿಯೂ ನಿರಾಸೆಯಾಗದಷ್ಟು ಖುಷಿಯನ್ನು ಕೊಟ್ಟಿದೆ 'ಯೆಲ್ಲೋ ಗ್ಯಾಂಗ್ಸ್'. ಸದ್ಯ 'ಯೆಲ್ಲೋ ಗ್ಯಾಂಗ್ಸ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರ ಕಾತುರ ಸಾರ್ಥಕಗೊಂಡಂತಾಗಿದೆ.

  Exclusive: 'ಕಾಂತಾರ' ಎಫೆಕ್ಟ್.. ಶೀಘ್ರದಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಸಿನಿಮಾ ರಿಲೀಸ್: ಅಣಜಿ ನಾಗರಾಜ್Exclusive: 'ಕಾಂತಾರ' ಎಫೆಕ್ಟ್.. ಶೀಘ್ರದಲ್ಲೇ ರಿಷಬ್ ಶೆಟ್ಟಿ ನಟನೆಯ 'ಅಟ್ಯಾಕ್' ಸಿನಿಮಾ ರಿಲೀಸ್: ಅಣಜಿ ನಾಗರಾಜ್

  ಟ್ರೈಲರ್ ರೂಪಿಸೋದು ಸುಲಭದ ಮಾತಲ್ಲ. ಯಾಕೆಂದ್ರೆ ಟ್ರೈಲರ್ ನೋಡಿಯೇ ಸಿನಿಮಾ ನೋಡುವುದಕ್ಕೆ ಥಿಯೇಟರ್ ಬಾಗಿಲಿಗೆ ಜನ ಬರುವುದು. ಹೀಗಾಗಿ ಸಿನಿಮಾ ಮಾಡಿದ್ದಷ್ಟೇ ಸಮಾಧಾನದಿಂದ ಟ್ರೈಲರ್ ಕಟ್ ಮಾಡುವುದು ಮುಖ್ಯವಾಗುತ್ತದೆ. ಆ ಕೆಲಸವನ್ನು ನಿರ್ದೇಶಕ ರವಿಂದ್ರ ಪರಮೇಶ್ವರಪ್ಪ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.

  'ಯೆಲ್ಲೋ ಗ್ಯಾಂಗ್ಸ್' ಹೇಳಿ ಕೇಳಿ ಡ್ರಗ್ಸ್ ದಂಧೆಯನ್ನು ಕುರಿತಾದ ಚಿತ್ರ. ಡ್ರಗ್ಸ್ ದಂಧೆ ಹಾಗೂ ಕಾಳಧನದ ಕರಾಳ ಮುಖವನ್ನು ಬಯಲು ಮಾಡಿದೆ. ಅದರಿಂದಾಚೆಗೂ ಡ್ರಗ್ಸ್ ದಂಧೆ ಹೇಗೆಲ್ಲಾ ತೆರೆದುಕೊಳ್ಳುತ್ತದೆ ಎಂಬುದನ್ನು ಟ್ರೈಲರ್ ಅನಾವರಣ ಮಾಡಿದೆ. ನಿರ್ದೇಶನದ ಜೊತೆಗೆ ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಅವರು ಬರೆದಿರೋ ಡೈಲಾಗುಗಳು ಎಲ್ಲರ ಗಮನ ಸೆಳೆಯುತ್ತಿವೆ.

  'ಯಾರದು? ಏನು ಮಾಡ್ತಿದ್ದಾರೆ?' ನಟ ಚೇತನ್‌ ಹೇಳಿಕೆಗೆ ರಿಷಬ್ ಶೆಟ್ಟಿ ಟಾಂಗ್:'ಯಾರದು? ಏನು ಮಾಡ್ತಿದ್ದಾರೆ?' ನಟ ಚೇತನ್‌ ಹೇಳಿಕೆಗೆ ರಿಷಬ್ ಶೆಟ್ಟಿ ಟಾಂಗ್:

  ದೇವ್ ದೇವಯ್ಯ, ಬಲ ರಾಜ್ವಾಡಿ, ಅರ್ಚನಾ ಕೊಟ್ಟಿಗೆ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯರಂಗ, ವಿಠಲ್ ಪರೀಟ, ಸತ್ಯ ಉಮ್ಮತ್ತಾಲ್, ಮಲ್ಲಿಖಾರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  English summary
  'Yellow Gangs' Kannada Movie Trailer Gets Huge Response, Know More.
  Thursday, October 20, 2022, 15:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X