»   » ಗಣೇಶ್-ಭಟ್ಟರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ !

ಗಣೇಶ್-ಭಟ್ಟರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ !

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಜುಗಲ್ ಬಂದಿಯಲ್ಲಿ ಮೂಡಲಿರುವ ಮೂರನೇ ಚಿತ್ರದ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸ್ಕ್ರಿಪ್ಟ್ ಅಂತಿಮ ಮಾಡಿರುವ ಚಿತ್ರತಂಡ, ಚಿತ್ರದ ಟೈಟಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿತ್ತು. ಈಗ ಗಣೀ ಹಾಗೂ ಭಟ್ಟರು ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ.[ಗಣೇಶ್ ಮತ್ತು ಯೋಗರಾಜ್ ಭಟ್ ಅಡ್ಡದಿಂದ ಇದೀಗ ಬಂದ ಸುದ್ದಿ]

Yogaraj Bhat And Ganesh Combination Movie Titled As 'Mugulunage'

ಹೌದು, ಸ್ಟಾರ್ ಜೋಡಿಯ ಹೊಸ ಚಿತ್ರಕ್ಕೆ 'ಮುಗುಳು ನಗೆ' ಎಂಬ ಶೀರ್ಷಿಕೆಯನ್ನ ಅಂತಿಮ ಮಾಡಲಾಗಿದೆ. ಈ ಹಿಂದೆ ಈ ಚಿತ್ರಕ್ಕೆ 'ಜಾಮೂನು' ಎಂಬ ಟೈಟಲ್ ಇಡಲಾಗಿದೆ ಎಂಬ ಮಾತುಗಳು ಕೇಳಿಬಂದಿತ್ತಾದರೂ, ಈಗ ಸ್ವತಃ ಗಣೇಶ್ ಅವರೇ, 'ಮುಗುಳು ನಗೆ' ಎಂಬ ಟೈಟಲ್ ಇಟ್ಟಿರುವುದಾಗಿ ಟ್ವಿಟ್ಟರ್ ಮೂಲಕ ಸ್ವಷ್ಟಪಡಿಸಿದ್ದಾರೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

Yogaraj Bhat And Ganesh Combination Movie Titled As 'Mugulunage'

'ಮುಂಗಾರು ಮಳೆ', 'ಗಾಳಿಪಟ' ಚಿತ್ರದ ನಂತರ ಗಣೇಶ್ ಹಾಗೂ ಯೋಗರಾಜ್ ಭಟ್ ಒಂದಾಗಿದ್ದು, ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. 'ಮುಗುಳು ನಗೆ' ಚಿತ್ರದಲ್ಲಿ ಗಣೇಶ್ ಜತೆ ನಾಲ್ವರು ನಾಯಕಿಯರ ರೊಮ್ಯಾನ್ಸ್ ಮಾಡಲಿದ್ದು, ಸ್ಯಾಂಡಲ್ ವುಡ್ ನ ಟಾಪ್ ನಟಿಯರ ಜೊತೆ ಹೊಸ ಪ್ರತಿಭೆಗಳಿಗೂ ಅವಕಾಶ ದೊರೆಯಲಿದೆಯಂತೆ.[ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?]

Yogaraj Bhat And Ganesh Combination Movie Titled As 'Mugulunage'

ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಯೋಗರಾಜ್ ಮೂವೀಸ್‌ ಮತ್ತು ಗೋಲ್ಡನ್‌ ಮೂವೀಸ್‌ ಬ್ಯಾನರ್‌ನಡಿ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆಯಲಿದ್ದಾರೆ. ಸದ್ಯ, ಚಿತ್ರದ ಪ್ರೀ-ಪ್ರೊಡಕ್ಷನ್ ಮುಗಿಸಿರುವ ಚಿತ್ರತಂಡ, ಇದೇ ತಿಂಗಳಲ್ಲಿ ಸೆಟ್ಟೇರಲಿದೆ.

English summary
According to the sources, Director Yogaraj Bhat and Kannada Actor Ganesh's Hattrick Combination Movie is titled as 'Mugulunage'. The movie will be launched in the month of December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada