»   » ನಿರ್ಮಾಪಕರಿಗೆ ಮಾನವೀಯತೆ ಮೆರೆದ ಯೋಗರಾಜ್ ಭಟ್

ನಿರ್ಮಾಪಕರಿಗೆ ಮಾನವೀಯತೆ ಮೆರೆದ ಯೋಗರಾಜ್ ಭಟ್

Posted By:
Subscribe to Filmibeat Kannada
Yograj Bhat to direct movie for N Kumar and Kari Subbu
ಅದು ಯೋಗರಾಜ್ ಭಟ್ ಸಿನಿಮಾ ವೃತ್ತಿ ಜೀವನದ ಆರಂಭದ ದಿನಗಳು. ಫುಲ್ ಟೈಮ್ ನಿರ್ದೇಶಕನಾಗಿ ತೆಗೆದ ಎರಡೂ ಚಿತ್ರಗಳೂ ಸೋತಿದ್ದವು. ಮಯೂರ್ ಪಟೇಲ್, ರಾಧಿಕಾ ನಟಿಸಿದ್ದ " ಮಣಿ " ಮತ್ತು ಕಿಚ್ಚ ಸುದೀಪ್, ರಮ್ಯಾ ಅಭಿನಯದ " ರಂಗ SSLC " ಎರಡೂ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿದ್ದವು.

ಎರಡೂ ಚಿತ್ರಗಳು ಉತ್ತಮ ಕಥೆ, ಚಿತ್ರಕಥೆ, ನಿರೂಪಣೆ ಹೊಂದಿದ್ದರೂ ಅದ್ಯಾಕೊ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಅದಾದ ನಂತರ ಇವರ ನಿರ್ದೇಶನದ ಮುಂಗಾರುಮಳೆ ಚಿತ್ರ ಹೊಸ ದಾಖಲೆ ಸೃಷ್ಟಿಸಿ ಯೋಗರಾಜ್ ಭಟ್ರು ಸ್ಯಾಂಡಲ್ ವುಡ್ಡಿನ ಸ್ಟಾರ್ ನಿರ್ದೇಶಕರ ಪಟ್ಟಿಗೆ ಸೇರಿದರು.

ತನ್ನ ವೃತ್ತಿ ಜೀವನದ ಆರಂಭದಲ್ಲಿ ತನ್ನನ್ನು ನಂಬಿ ಚಿತ್ರಕ್ಕೆ ಹಣ ಸುರಿದಿದ್ದ ಮಣಿ ಚಿತ್ರದ ನಿರ್ಮಾಪಕ ಕರಿಸುಬ್ಬು ಮತ್ತು ರಂಗ SSLC ಚಿತ್ರದ ನಿರ್ಮಾಪಕರಾದ ಎನ್ ಕುಮಾರ್ ಅವರಿಗಾಗಿ ಯೋಗರಾಜ್ ಭಟ್ರು ಚಿತ್ರ ನಿರ್ದೇಶಿಸಿ ಕೊಡಲು ಈಗ ಮುಂದಾಗಿದ್ದಾರೆ.

ಜಂಟಿಯಾಗಿ ಇಬ್ಬರು ಚಿತ್ರ ನಿರ್ಮಿಸಲು ತಯಾರಾಗಿದ್ದು ಯೋಗರಾಜ್ ಭಟ್ರ ಕಾಲ್ಸೀಟ್ ಕೂಡಾ ಇವರಿಗೆ ಲಭ್ಯವಾಗಿದೆ. ಚಿತ್ರಕ್ಕೆ ನಾಯಕ ಮತ್ತು ನಾಯಕಿಯರು ಯಾರಾಗ ಬೇಕೆಂದು ಅಂತಿಮಗೊಳಿಸಲು ಭಟ್ರು ಇಬ್ಬರೂ ನಿರ್ಮಾಪಕರಿಗೆ ಸೂಚಿಸಿದ್ದಾರೆ.

ನನ್ನ ಮೊದಲ ಎರಡು ಚಿತ್ರಗಳಿಂದ ಇಬ್ಬರು ನಿರ್ಮಾಪಕರಿಗೆ ನಷ್ಟವಾಗಿದೆ. ಹೀಗಾಗಿ ಅವರಿಬ್ಬರಿಗಾಗಿ ಚಿತ್ರವೊಂದು ನಿರ್ದೇಶಿಸಲಿದ್ದೇನೆ. ಕಥೆ ಮತ್ತು ಚಿತ್ರಕಥೆ ಹಣೆಯುವುದರಲ್ಲಿ ನಿರತನಾಗಿದ್ದೇನೆ. ಚಿತ್ರ ಯಾವತ್ತು ಸೆಟ್ಟೇರಲಿದೆ ಎನ್ನುವುದರ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಯೋಗರಾಜ್ ಭಟ್ ಸ್ಪಷ್ಟ ಪಡಿಸಿದ್ದಾರೆ.

English summary
Star director Yograj Bhat to direct movie for N Kumar and Kari Subbu. These two are earlier produced Mani and Ranga SSLC which was directed by Yograj Bhat.
Please Wait while comments are loading...