Gold Price: ಚಿನ್ನದ ಬೆಲೆ 2ನೇ ದಿನವೂ ದಾಖಲೆಯ ಕುಸಿತ: ಹೂಡಿಕೆದಾರರಿಗೆ ಆಘಾತ, ಗ್ರಾಹಕರಿಗೆ ಹರ್ಷ, ಇಂದಿನ ದರಪಟ್ಟಿ

By Shankrappa Parangi

ಬೆಂಗಳೂರು: ಹಲವಾರು ಕಾರಣಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನ -ಬೆಳ್ಳಿ ದರದಲ್ಲಿ ಸತತ ಎರಡನೇ ದಿನ ಶನಿವಾರವೂ ದಾಖಲೆಯ ಇಳಿಕೆ ಕಂಡು ಬಂದಿದೆ. ಈ ದರ ಇಳಿಕೆಯು ಹೂಡಿಕೆದಾರರಿಗೆ ಆಘಾತ ನೀಡಿವೆ. ಮತ್ತೊಂದೆಡೆ ಚಿನ್ನಾಭರಣ ಗ್ರಾಹಕರಿಗೆ ಖರೀದಿಗೆ ಅವಕಾಶ ನೀಡಿದಂತಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. 2026ರ ಮೊದಲ ತಿಂಗಳ ಕೊನೆಯ ದಿನ ಇಂದು ಶನಿವಾರ (ಜನವರಿ 31)ರಂದು ಚಿನ್ನದ ದರ ಪಟ್ಟಿ ಹಾಗೂ ನಗರವಾರು ಮಾಹಿತಿ ಇಲ್ಲಿದೆ.

ಆರ್ಥಿಕ ತಜ್ಞರ ಮುನ್ಸೂಚನೆಗಳು ಮತ್ತು ಭವಿಷ್ಯ ನಿಜವಾಗಿದೆ. ನಿರಂತರವಾಗಿ ಏರುವ ಚಿನ್ನ, ಬೆಳ್ಳಿ ಮರಳಿ ಮೊದಲಿನ ಸ್ಥಿತಿ ತಲುಪುತ್ತವೆ. ಈ ಏರಿಕೆ ತಾತ್ಕಾಲಿಕ ಎಂದಿದ್ದರು. ಅದರಂತೆ ಯುಎಸ್ ಸುಂಕ ನೀತಿಗಳು, ಡಾಲರ್ ಮೌಲ್ಯ ಕುಸಿತ, ರಾಜತಾಂತ್ರಿಕ ಕಾರಣಗಳು, ಯುದ್ಧಗಳು ಹಾಗೂ ಈ ಲೋಹಗಳ ಕೈಗಾರಿಕೆ ಬಳಕೆ ಹೆಚ್ಚಳ ಮತ್ತು ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳು ಖರೀದಿ ಹೆಚ್ಚಳದಿಂದ ಚಿನ್ನ-ಬೆಳ್ಳಿ ಬೆಲೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿ ಸಾರ್ವಕಾಲಿಕ ದಾಖಲೆ ಬರೆದವು. ಅವುಗಳ ದರವು ಇದೀಗ ಮೊದಲಿನಂತೆ ಇಳಿಕೆಯತ್ತ ಸಾಗಿದೆ.


Gold Prices Crash for Second Day Reach lowest Rate Check Latest Rates in Bengaluru as of Jan 31

ಈಗಾಗಲೇ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿ ಲಾಭ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಕಳೆದ ಎರಡು ದಿನಗಳಿಂದ ಚಿನ್ನ-ಬೆಳ್ಳಿ ದರ ಇಳಿಕೆ ಆಘಾತ ನೀಡಿದೆ. ನಿರಂತರ ಏರಿಕೆ ಆಗಿದ್ದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಶುಕ್ರವಾರಕ್ಕೆ 885 ರೂ. ಹಾಗೂ ಶನಿವಾರ ಮತ್ತು 790 ರೂಪಾಯಿ ಇಳಿಕೆ ಆಗಿ 14,790 ರೂಪಾಯಿಗೆ ತಲುಪಿತು.

Gold Price: ಚಿನ್ನದ ಬೆಲೆ 2026ರಲ್ಲಿ ಇನ್ನಷ್ಟು ಏರಿಕೆ ಆಗುತ್ತಾ? ಹೂಡಿಕೆದಾರರ ಕುತೂಹಲ ಕೆರಳಿಸಿದ ಬಾಬಾ ವಂಗಾ ಭವಿಷ್ಯ

ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರಕ್ಕೆ 965 ರೂಪಾಯಿಗೆ ಕುಸಿಯಿತು, ಇಂದು ಶನಿವಾರ ಮತ್ತೆ ಎರಡನೇ ದಿನವು ದಾಖಲೆಯ 862 ರೂಪಾಯಿ ಇಳಿಕೆ ಕಂಡು 16,058 ರೂಪಾಯಿಗೆ ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ಅಂಕಿ ಸಂಖ್ಯೆ ನೀಡಿವೆ. ಈ ಸತತ ಎರಡು ದಿನಗಳ ಇಳಿಕೆಯು ಹೂಡಿಕೆದಾರರ ನಿದ್ದೆಗೆಡಿಸಿದೆ. ಅಧಿಕ ಲಾಭದ ಆಸೆಯಲ್ಲಿದ್ದ ಆರಂಭಿಕ ಚಿನ್ನ ಹೂಡಿಕೆದಾರರಿಗೆ ನಿರಾಸೆಯಾಗಿದೆ.

ಬಂಗಾರ ಕೈಗೆಟುಕುವ ಮೊದಲಿನ ದರ ತಲುಪುತ್ತಾ?

ಕಳೆದ ಕೆಲವು ವಾರಗಳಿಂದ ಚಿನ್ನವು ನಿರಂತರ ಏರುಗತಿಯಲ್ಲಿಯೇ ಸಾಗಿತ್ತು. ಜನವರಿ 23ರಂದು 10 ಗ್ರಾಂ 24ಕ್ಯಾರಟ್ ಚಿನ್ನದ ಬೆಲೆ 1,57,150 ರೂಪಾಯಿ ಇತ್ತು. ಅಲ್ಲಿಂದ ನಿರಂತರವಾಗಿ ಏರಿಕೆ ಮಾತ್ರವನ್ನೇ ಕಂಡಿದ್ದ ಬಂಗಾರವು ಶುಕ್ರವಾರ ಮತ್ತು ಶನಿವಾರದ ಎರಡು ಬಾರಿಯ ಕುಸಿತದಿಂದ ಮತ್ತೆ ಇಂದು (ಜ.31) 1,60,580 ರೂ.ಗೆ ತಲುಪಿದೆ. ಈ ಮೂಲಕ ಬಂಗಾರದ ಬೆಲೆಯ ಸ್ಥಿತಿ ಮೊದಲಿನಂತಾಗುವ ಲಕ್ಷಣಗಳು ಕಂಡು ಬಂದಿವೆ.

ಇನ್ನೂ 22 ಕ್ಯಾರಟ್ 10 ಗ್ರಾಂ ಬಂಗಾರವು ಜನವರಿ 23ರಂದು 1,44,050 ರೂಪಾಯಿ ಇತ್ತು. ಎರಡು ಬಾರಿಯ ದಾಖಲೆಯ ಇಳಿಕೆಯಿಂದಾಗಿ ಇದರ ಬೆಲೆಯು ಶನಿವಾರ 1,47,200 ರೂಪಾಯಿಗೆ ಬಂದು ನಿಂತಿದೆ. ಈ ಏರಿಕೆ ಹಾಗೂ ಇಳಿಕೆ ಮಧ್ಯ ಚಿನ್ನವು ಸಾರ್ವಜನಿಕ ದಾಖಲೆಯ ಹೆಚ್ಚಳ ಕಂಡಿತ್ತು. ಈ ಇಳಿಕೆಗೆ ಬೇಡಿಕೆ ಕುಸಿತ, ರಾಜಕೀಯ ಹಾಗೂ ಆರ್ಥಿಕ ಸೇರಿದಂತೆ ಒಂದಷ್ಟು ಜಾಗತಿಕ ಕಾರಣಗಳು ಇವೆ ಎಂದು ತಿಳಿದು ಬಂದಿದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ

22k 10 ಗ್ರಾಂ ಚಿನ್ನದ ದರ: 1,47,200

24k 10 ಗ್ರಾಂ ಬಂಗಾರದ ಬೆಲೆ:

ಬೆಳ್ಳಿ 100 ಗ್ರಾಂ ದರ: 35,000 ರೂಪಾಯಿ

ಬೆಳ್ಳಿ 1kg ದರ: 3,50,000 ರೂಪಾಯಿ ಇದೆ.

Gold: ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿತ; ಆಭರಣ ಖರೀದಿದಾರರಿಗೆ ನೆಮ್ಮದಿ ತಂದ ಹೊಸ ದರ

ನಗರವಾರು ಚಿನ್ನದ 1 ಗ್ರಾಂ ದರಪಟ್ಟಿ (24k ಮತ್ತು 22k) ಇಲ್ಲಿದೆ

ಚೆನ್ನೈ: 16,255 ಮತ್ತು 14,900 ರೂಪಾಯಿ

ಮುಂಬೈ: 16,058 ಮತ್ತು 14,720 ರೂಪಾಯಿ

ದೆಹಲಿ: 16,073 ಮತ್ತು 14,735 ರೂಪಾಯಿ

ಕೊಲ್ಕತ್ತಾ: 16,05 ಮತ್ತು 14,720 ರೂಪಾಯಿ

ಹೈದರಾಬಾದ್: 16,058 ಮತ್ತು 14,720 ರೂಪಾಯಿ

ಕೇರಳ: 16,058 ಮತ್ತು 14,720 ರೂಪಾಯಿ

ಪುಣೆ: 16,058 ಮತ್ತು 14,720 ರೂಪಾಯಿ

ಅಹಮದಾಬಾದ್: 16,063 ಮತ್ತು 14,725 ರೂಪಾಯಿ

Credit: Oneindia

More from Filmibeat

Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X