Gold Rate India: ಬಜೆಟ್‌ ಮರುದಿನವೇ ಚಿನ್ನದ ಬೆಲೆ ಭಾರೀ ಇಳಿಕೆ! ಬರೋಬ್ಬರಿ 7,240 ರೂ. ಕುಸಿತ

By Prajwal B

ಕೇಂದ್ರ ಬಜೆಟ್‌ ಮಂಡನೆಯಾದ (Union Budget 2026) ಮರುದಿನವೇ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಕುಸಿತ ಕಂಡಿದೆ. ಚಿನ್ನದ ಬೆಲೆ ಬಗ್ಗೆ ಭಾರೀ ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ಭರ್ಜರಿ ಸುದ್ದಿ ಸಿಕ್ಕಿದೆ. ಹೌದು, ಚಿನ್ನದ ಬೆಲೆ ಇಂದು ಭಾರೀ ಇಳಿಕೆ ಕಂಡಿದ್ದು (Gold Rate Down), ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Gold Rate India

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ₹15,153 ರೂ. ಆಗಿದ್ದು, ನಿನ್ನೆ ₹16,058 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ ₹905 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,21,224 ರೂ. ಆಗಿದ್ದು, ನಿನ್ನೆ ₹1,28,464 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹7,240 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,51,530 ರೂ. ಆಗಿದ್ದು, ನಿನ್ನೆ ₹1,60,580 ರೂ. ಇತ್ತು. ನಿನ್ನೆಗಿಂತ ಇಂದು 10 ಗ್ರಾಂ ಚಿನ್ನದಲ್ಲಿ ದಿಢೀರ್‌ 9,050 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,15,300 ರೂ. ಆಗಿದ್ದು, ನಿನ್ನೆ 16,05,800 ರೂ. ಇತ್ತು. ಒಟ್ಟು 90,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ₹13,890 ರೂ. ಆಗಿದ್ದು, ನಿನ್ನೆ ₹14,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹830 ರೂ. ಕುಸಿತವಾಗಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು 1,11,120 ರೂ. ಆಗಿದ್ದು, ನಿನ್ನೆ 1,17,760 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹6,640 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,38,900 ರೂ. ಆಗಿದ್ದು, ನಿನ್ನೆ ₹1,47,200 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ 8,300 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹13,89,000 ರೂ. ಆಗಿದ್ದು, ನಿನ್ನೆ ₹14,72,000 ರೂ. ಇತ್ತು.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,365 ರೂ. ಆಗಿದ್ದು, ನಿನ್ನೆ ₹12,044 ರೂ. ಇತ್ತು. ನಿನ್ನೆಗಿಂತ ಇಂದು 679 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹90,920 ರೂ. ಆಗಿದ್ದು, ನಿನ್ನೆ 96,352 ರೂ. ಇತ್ತು. ನಿನ್ನೆಗಿಂತ ಇಂದು 5,432 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,13,650 ರೂ. ಆಗಿದ್ದು, ನಿನ್ನೆ 1,20,440 ರೂ. ಇತ್ತು. ಒಟ್ಟು 6,790 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,36,500 ರೂ. ಆಗಿದ್ದು, ನಿನ್ನೆ 12,04,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 67,900 ರೂ. ಕಡಿಮೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,218, 22K ರೂ. 13,950, 18K ರೂ. 12,000
ಮುಂಬೈ: 24K ರೂ. 15,153, 22K ರೂ. 13,890, 18K ರೂ. 11,365
ದೆಹಲಿ: 24K ರೂ. 15,168, 22K ರೂ. 13,905, 18K ರೂ. 11,380
ಕೋಲ್ಕತ್ತಾ: 24K ರೂ. 15,153, 22K ರೂ. 13,890, 18K ರೂ. 11,365
ಬೆಂಗಳೂರು: 24K ರೂ. 15,153, 22K ರೂ. 13,890, 18K ರೂ. 11,365
ಹೈದರಾಬಾದ್: 24K ರೂ. 15,153, 22K ರೂ. 13,890, 18K ರೂ. 11,365
ಕೇರಳ: 24K ರೂ. 15,153, 22K ರೂ. 13,890, 18K ರೂ. 11,365
ಪುಣೆ: 24K ರೂ. 15,153, 22K ರೂ. 13,890, 18K ರೂ. 11,365
ವಡೋದರಾ: 24K ರೂ. 15,158, 22K ರೂ. 13,895, 18K ರೂ. 11,370
ಅಹಮದಾಬಾದ್: 24K ರೂ. 15,158, 22K ರೂ. 13,895, 18K ರೂ. 11,370

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಭಾರತದಲ್ಲಿ ಚಿನ್ನದಂತೆ ಇಂದು ಬೆಳ್ಳಿ ದರ ಕೂಡಾ ಭಾರೀ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹300 ರೂ. ಆಗಿದ್ದು, ನಿನ್ನೆ ₹350 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹50 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,400 ರೂ. ಆಗಿದ್ದು, ನಿನ್ನೆ ₹2,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ ₹400 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,000 ರೂ., 100 ಗ್ರಾಂ ಬೆಳ್ಳಿ ಬೆಲೆ 30,000 ರೂ., 1000 ಗ್ರಾಂ ಬೆಳ್ಳಿ ದರ 3,00,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಫೆಬ್ರವರಿ 2, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಸೋಮವಾರವೂ ಚಿನ್ನ ತನ್ನ ಕುಸಿತದ ಹಾದಿಯಲ್ಲಿದೆ. 0259 GMT ವೇಳೆಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 3.3% ರಷ್ಟು ಕುಸಿತ ಕಂಡು, $4,703.27 ಕ್ಕೆ ತಲುಪಿದೆ.

Credit: Goodreturns

More from Filmibeat

Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X