ಕಳಪೆ ಗುಣಮಟ್ಟದ ಕಾರುಗಳು ಖರೀದಿಸಬೇಡಿ: ಯಾವುದೀ ಕಾರು? 5-ಸ್ಟಾರ್ ಸೇಫ್ಟಿ ರೇಟಿಂಗ್ ಮುಖ್ಯ!

By Arun Teja P

ಈ ಹಿಂದೆ ಮಾರುತಿ ಸುಜುಕಿ ಗುಣಮಟ್ಟದ ಕಾರುಗಳನ್ನು ನೀಡುವಲ್ಲಿ ಟೀಕೆಗಳನ್ನು ಎದುರಿಸುತ್ತಿತ್ತು, ಸರಿಯಾದ ನಿರ್ಮಾಣ ಗುಣಮಟ್ಟವಿಲ್ಲದೆ ಅಪಘಾತವಾದಾಗ ಪ್ರಯಾಣಿಕರ ಜೀವಹಾನಿಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ. ನೀವು ನೋಡಿರುವ ಫೋಟೋ ಕೂಡ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನದ್ದಾಗಿದೆ. ಇಷ್ಟು ಕಳಪೆ ಗುಣಮಟ್ಟದ ಕಾರುಗಳನ್ನು ನೀಡುತ್ತದೆ ಎಂದು ಹಲವು ಟೀಕೆಗಳಿದ್ದರೂ, ಮಾರಾಟದಲ್ಲಿ ಇಂದಿಗೂ ಮಾರುತಿ ಸುಜುಕಿ ಕಾರುಗಳದ್ದೇ ನಂ.1 ಸ್ಥಾನ. ಇದಕ್ಕೆ ಕಾರಣ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್, ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರಾಟ ಮಾಡುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಸರ್ವಿಸ್‌ ನೆಟ್‌ವರ್ಕ್ ಹೊಂದಿದೆ.

ಇದೆಲ್ಲದರ ಜೊತೆಗೆ ಈಗ ಗುಣಮಟ್ಟದಲ್ಲೂ ರಾಜಿಯಾಗದೇ ಅತ್ಯುತ್ತಮ ಕಾರುಗಳನ್ನು ನೀಡಲು ಮುಂದಾಗಿದೆ. ಫೋಟೋದಲ್ಲಿ ನೋಡಿದ ಹಳೆಯ ಸ್ವಿಫ್ಟ್ ಡಿಜೈರ್ ಕೇವಲ 2-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡರೆ, ಇತ್ತೀಚಿನ ಹೊಸ ತಲೆಮಾರಿನ ಸ್ವಿಫ್ಟ್ ಡಿಜೈರ್ ಬರೋಬ್ಬರಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಮಾರುತಿ ಕಾರುಗಳು ಹಿನ್ನಡೆ ಅನುಭವಿಸುತ್ತಿದ್ದ ವಿಭಾಗದಲ್ಲೂ ಮುನ್ನಡೆಗೆ ಬಂದಿವೆ.


maruti-suzuki-swift-dzire-old-vs-new-safety-comparison

2024 ರ ಮಾರುತಿ ಡಿಜೈರ್ ತನ್ನ ಇತ್ತೀಚಿನ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಪ್ರಭಾವಶಾಲಿ 5-ಸ್ಟಾರ್ ರೇಟಿಂಗ್ ಗಳಿಸುವ ಮೂಲಕ ಸಂಪೂರ್ಣ 5-ಸ್ಟಾರ್ ರೇಟಿಂಗ್ ಸಾಧಿಸಿದ ಮೊದಲ ಮಾರುತಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಹಳೆಯ ಮೂರನೇ ತಲೆಮಾರಿನ ಮಾರುತಿ ಡಿಜೈರ್ ಗ್ಲೋಬಲ್ NCAP ಪರೀಕ್ಷೆಯಲ್ಲಿ ವಯಸ್ಕರ ಹಾಗೂ ಮಕ್ಕಳ ರಕ್ಷಣೆ ಎರಡರಲ್ಲೂ ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿತ್ತು.

ಈ ಕಳೆಪೆ ಅಂಕಗಳಿಂದಾಗಿ ಈ ಕಾರು ಅಪಘಾತವಾದಾಗ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ, ಕಾರು ನಜ್ಜುಗುಜ್ಜಾಗಿ ಸಂಪೂರ್ಣ ಗುರುತು ಸಿಗದಂತಾಗಿರುವ ಉದಾಹರಣೆಗಳಿವೆ. ಹಲವು ವರ್ಷಗಳಿಂದ ಕಂಪನಿಯು ಟೀಕೆಗಳನ್ನು ಎದುರಿಸುತ್ತಾ ಬಂದಿದೆ, ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾದಂತಹ ಬ್ರಾಂಡ್‌ಗಳು ಗುಣಮಟ್ಟದ ಕಾರುಗಳನ್ನು ನೀಡುತ್ತಾ ಪೈಪೋಟಿಯನ್ನು ಹೆಚ್ಚಿಸಿವೆ.


maruti-suzuki-swift-dzire-old-vs-new-safety-comparison

ಈಗ ಪ್ರತಿಯೊಬ್ಬರು ಸುರಕ್ಷಿತ ಕಾರುಗಳ ಕಡೆಗೆ ಮುಖ ಮಾಡುತ್ತಿದ್ದಾರೆ, ಇದರಿಂದಾಗಿ ಮಾರುತಿ ಸುಜುಕಿ ಕೂಡ ತನ್ನ ಮಾಡಲ್‌ಗಳ ನಿರ್ಮಾಣ ಗುಣಮಟ್ಟವನ್ನು ಹೆಚ್ಚಿಸಿದೆ. ಡಿಜೈರ್, ಬ್ರೆಝಾ, ವಿಕ್ಟೋರಿಸ್ ನಂತಹ ಮಾರುತಿ ಕಾರುಗಳು ಈಗ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಕಾರುಗಳಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.

ಸ್ವಿಫ್ಟ್ ಡಿಜೈರ್ ಸೇಫ್ಟಿ ಫೀಚರ್ಸ್ ಹೋಲಿಕೆ

ಹಳೆಯ ಡಿಜೈರ್‌ನ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್‌ಗಳಂತಹ ಪ್ರಮಾಣಿತ ವೈಶಿಷ್ಟ್ಯಗಳಿವೆ. ಟಾಪ್ ವೇರಿಯೆಂಟ್‌ಗಳು ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಡಿಫಾಗರ್ ಪಡೆಯುತ್ತವೆ.


maruti-suzuki-swift-dzire-old-vs-new-safety-comparison

2024 ರ ಹೊಸ ತಲೆಮಾರಿನ ಮಾರುತಿ ಡಿಜೈರ್ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡುವ ಮೂಲಕ ಸುರಕ್ಷತಾ ಸೂಟ್ ಅನ್ನು ಒಂದು ಹಂತಕ್ಕೆ ಹೆಚ್ಚಿಸಲಾಗಿದೆ. ಇದು ಹಿಂಭಾಗದ ಡಿಫಾಗರ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದ್ದು, ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಹೊಂದಿದೆ.

ಹೊಸ ಮಾರುತಿ ಡಿಜೈರ್ ಬೆಲೆಗಳು ರೂ. 6.79 ಲಕ್ಷದಿಂದ ಪ್ರಾರಂಭವಾಗಿ ರೂ. 10.14 ಲಕ್ಷದವರೆಗೆ (ಎಕ್ಸ್-ಶೋರೂಂ) ಇವೆ. ಇದು ಸಬ್-4 ಮೀಟರ್ ಸೆಡಾನ್ ವಿಭಾಗದಲ್ಲಿ ಹುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಇತರ ‌ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಡಿಜೈರ್ ಹಾಗೂ ಹಳೇ ಡಿಜೈರ್ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಹೆಚ್ಚಿನ ಆಟೋಮೋಟಿವ್ ಸುದ್ದಿಗಳಿಗಾಗಿ ನಮ್ಮ ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್ ಫಾಲೋ ಮಾಡಿ.

Credit: Drivespark

More from Filmibeat

English summary
Maruti suzuki swift dzire old vs new safety comparison
Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X