ಅತ್ಯಂತ ಅಗ್ಗದ ಎರಡು 7-ಸೀಟರ್ ಕಾರುಗಳ ನಡುವೆ ಸರಿಯಾದ ಪೈಪೋಟಿ: ಯಾವುದು ಬೆಸ್ಟ್?

By Arun Teja P

ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ (Renault), ಕಳೆದ ವರ್ಷ ಭಾರತದ ಅತ್ಯಂತ ಅಗ್ಗದ ನವೀಕೃತ 7-ಸೀಟರ್ ರೆನಾಲ್ಟ್ ಟ್ರೈಬರ್ (Renault Triber) ಕಾರನ್ನು ಬಿಡುಗಡೆ ಮಾಡಿತ್ತು. ಇದು ಫ್ಯಾಮಿಲಿ ಕಾರಾಗಿದ್ದು, ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಹೊಸ ಕಾರಾಗಿದೆ. ಹಾಗೆಯೇ ನಿಸ್ಸಾನ್ ಕಂಪನಿ ಕೂಡ ಕೆಲ ದಿನಗಳ ಹಿಂದೆಯಷ್ಟೆ ತನ್ನ ಹೊಚ್ಚ ಹೊಸ 7-ಸೀಟರ್ ಗ್ರಾವೈಟ್ (Nissan GRAVITE) ಎಂಪಿವಿಯನ್ನು ಬಿಡುಗಡೆ ಮಾಡಿದೆ. ಇದು ಕೂಡ ಅತ್ಯಂತ ಅಗ್ಗದ ಬೆಲೆಯ 7-ಸೀಟರ್ ಆಗಿದೆ. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್ ನೋಡೋಣ.

ಬೆಲೆ: ಹೊಸ ಟ್ರೈಬರ್ ಈಗ ಅಥೆಂಟಿಕ್, ಎವಲ್ಯೂಷನ್, ಟೆಕ್ನೋ ಮತ್ತು ಎಮೋಷನ್ ಎಂಬ ನಾಲ್ಕು ಹೊಸ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೇಸ್‌ ವೇರಿಯೆಂಟ್ ಬೆಲೆಯು ರೂ. 5,76,300 (ಎಕ್ಸ್ - ಶೋರೂಮ್) ದಿಂದ ಪ್ರಾರಂಭವಾಗುತ್ತದೆ. ನಿಸ್ಸಾನ್ ಗ್ರಾವೈಟ್ ವಿಷಯಕ್ಕೆ ಬಂದರೆ ಒಟ್ಟು ಆರು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಬೇಸ್ ವೇರಿಯೆಂಟ್ ಬೆಲೆಯು ರೂ. 5,65,000 (ಎಕ್ಸ್ - ಶೋರೂಮ್) ದಿಂದ ಪ್ರಾರಂಭವಾಗುತ್ತದೆ.


renault-triber-vs-nissan-gravite-price-features-engine-comparison

ಫೀಚರ್ಸ್: ರೆನಾಲ್ಟ್ ಟ್ರೈಬರ್ ಇಂಟೀರಿಯರ್‌ನಲ್ಲಿ ಸ್ಟೈಲಿಶ್ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ ನವೀಕರಿಸಲಾಗಿದೆ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ 8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಹೊಂದಿದೆ. ನವೀಕರಿಸಿದ ಒಳಾಂಗಣವು ಹೊಸ ಸೀಟ್ ಅಪ್ಹೋಲ್ಸ್ಟರಿ, ಆಧುನಿಕ LED ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಕ್ಯಾಬಿನ್ ಲೈಟಿಂಗ್ ಮತ್ತು ಪ್ರೀಮಿಯಂ ಬ್ಲಾಕ್-ಔಟ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.

ನಿಸ್ಸಾನ್ ಗ್ರಾವೈಟ್‌ನಲ್ಲಿ ಫ್ಲೋಟಿಂಗ್ 8 ಇಂಚಿನ ಇನ್ಫೋಟೈನ್‌ಮೆಂಟ್, ಫುಲ್ಲಿ ಡಿಜಿಟಲ್ ಡ್ರೈವರ್ ಡಿಸ್ಪ್ಲೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ಪ್ಲೇ ಸಂಪರ್ಕ, ವಾಕ್ ಅವೇ ಲಾಕ್ (WAL) ಮತ್ತು ಅಪ್ರೋಚ್ ಅನ್‌ಲಾಕ್ (AUL), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ವೈರ್‌ಲೆಸ್ ಚಾರ್ಜರ್, ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಆಟೋ ಎಲ್ಇಡಿ ಹೆಡ್‌ಲ್ಯಾಂಪ್ ಒದಗಿಸಲಾಗಿದೆ.


renault-triber-vs-nissan-gravite-price-features-engine-comparison

ಸೇಫ್ಟಿ ಫೀಚರ್ಸ್: ಕಾರು ಕಡಿಮೆ ಬೆಲೆಯದ್ದಾಗಿದ್ದರೂ ಸುರಕ್ಷತೆಯ ವಿಷಯದಲ್ಲಿ ರಾಜಿಯಾಗದೆ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಲ್ - ಸ್ಟಾರ್ಟ್ ಅಸಿಸ್ಟ್ (HSA), ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ.

ಹೊಸ ರೆನಾಲ್ಟ್ ಟ್ರೈಬರ್ ಕೂಡ ತನ್ನ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡುತ್ತದೆ. ಇಎಸ್‌ಪಿ, ಟಿಪಿಎಂಎಸ್, ಬ್ರೇಕ್ ಅಸಿಸ್ಟ್‌ನೊಂದಿಗೆ ಇಬಿಡಿ ಸೇರಿದಂತೆ 21 ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸುರಕ್ಷತಾ ವೈಶಿಷ್ಟ್ಯಗಳ ಜೊತೆಗೆ ಫ್ರಂಟ್ ಪಾರ್ಕಿಂಗ್ ಸೆನ್ಸರ್ ಕೂಡ ಲಭ್ಯವಿದ್ದು, ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ.


renault-triber-vs-nissan-gravite-price-features-engine-comparison

ಎಂಜಿನ್: ಹೊಸ ಟ್ರೈಬರ್ 6250 rpm ನಲ್ಲಿ 72 PS ಗರಿಷ್ಠ ಪವರ್ ಔಟ್‌ಪುಟ್ ಮತ್ತು 3500 rpm ನಲ್ಲಿ 96 Nm ಗರಿಷ್ಠ ಟಾರ್ಕ್ ನೀಡುತ್ತದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಲಭ್ಯವಿದೆ. ಟಾಪ್-ಎಂಡ್ ಎಮೋಷನ್ ವೇರಿಯೆಂಟ್ ಸುಧಾರಿತ Easy - R AMTಯನ್ನು ಸಹ ಹೊಂದಿದೆ, ಇದು ಚಾಲನಾ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ.

ಹೊಸ ನಿಸ್ಸಾನ್ ಗ್ರಾವೈಟ್ ಕಾರಿನಲ್ಲಿ 6250rpm ನಲ್ಲಿ 72PS ಪವರ್ ಹಾಗೂ 3400-3600rpm ನಲ್ಲಿ 96Nm ಪೀಕ್ ಟಾರ್ಕ್ ಹೊರಹಾಕುವ 1.0 ಲೀಟರ್ 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ EZ-ಶಿಫ್ಟ್ (AMT) ಗೇರ್‌ ಬಾಕ್ಸ್‌ ಆಯ್ಕೆಗಳನ್ನು ನೀಡಲಾಗಿದೆ.

Credit: Drivespark

More from Filmibeat

English summary
Renault triber vs nissan gravite price features engine comparison
Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X