Union Budget-LPG Price: ಬಜೆಟ್‌ ದಿನವೇ ಎಲ್‌ಪಿಜಿ ಗ್ಯಾಸ್‌ ಬಳಕೆದಾರರಿಗೆ ಬಿಗ್‌ ಶಾಕ್‌! ಭಾರೀ ಬೆಲೆ ಹೆಚ್ಚಳ

By Prajwal B

ನವದೆಹಲಿ: ಇಂದು (ಫೆ.1) ಕೇಂದ್ರ ಸರ್ಕಾರದ ಭಾರೀ ನಿರೀಕ್ಷೆಯ ಬಜೆಟ್‌ ಮಂಡನೆಯಾಗಲಿದೆ (Union Budget). ಅತ್ತ ಹೂಡಿಕೆದಾರರಿಂದ ಹಿಡಿದು ಜನಸಾಮಾನ್ಯರವರೆಗೂ ಕೇಂದ್ರ ಬಜೆಟ್‌ ಮಂಡನೆ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಬಜೆಟ್‌ ದಿನವೇ ಎಲ್‌ಪಿಜಿ ಗ್ಯಾಸ್‌ (LPG Gas Price India) ಬಳಕೆದಾರರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಹಾಗಿದ್ರೆ ಇಂದು ಭಾರತದಲ್ಲಿ ಎಲ್‌ಪಿಜಿ ಗ್ಯಾಸ್‌ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

Union Budget 2026-LPG Gas Price Hike

ಎಷ್ಟಿದೆ ಗ್ಯಾಸ್‌ ಬೆಲೆ?
ಬಜೆಟ್‌ ಮಂಡನೆ ದಿನವೇ, ತೈಲ ಮಾರುಕಟ್ಟೆ ಕಂಪನಿಗಳು (OMC) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ₹49 ರಷ್ಟು ಹೆಚ್ಚಿಸಿದ್ದು, 2026ರ ಫೆಬ್ರವರಿ 1ರಿಂದ ಹೊಸ ದರ ಜಾರಿಗೆ ಬಂದಿದೆ. ಇದು ಕೇವಲ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ನಲ್ಲಾದ ಬದಲಾವಣೆಯಾಗಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವ ದಿನದಂದೇ, ಫೆಬ್ರವರಿ 1, 2026 ರಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಭಾರತದಲ್ಲಿ ₹50 ರವರೆಗೆ ಹೆಚ್ಚಳ ಮಾಡಿದೆ. ಚೆನ್ನೈನಲ್ಲಿ ಗರಿಷ್ಠ ಏರಿಕೆ ಕಂಡರೆ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ತಲಾ ₹49.5 ಹೆಚ್ಚಳವಾಗಿದೆ.

ಎಲ್ಲೆಲ್ಲಿ, ಎಷ್ಟಿದೆ ಎಲ್‌ಪಿಜಿ ಗ್ಯಾಸ್‌ ಬೆಲೆ?
ಇತ್ತೀಚಿನ ಏರಿಕೆಯ ನಂತರವೂ, ಪ್ರಮುಖ ಮೆಟ್ರೋ ನಗರಗಳಲ್ಲಿ ಮುಂಬೈನಲ್ಲಿ 19 ಕೆಜಿ ಎಲ್‌ಪಿಜಿ ಬೆಲೆ ಇನ್ನೂ ₹1,700 ಕ್ಕಿಂತ ಕಡಿಮೆ ಬೆಲೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳು ಸಿಗುತ್ತಿದೆ. ಆದರೆ ದೆಹಲಿಯಲ್ಲಿ ಎಲ್‌ಪಿಜಿ ₹1,700 ದಾಟಿದೆ. ಕೋಲ್ಕತ್ತಾದಲ್ಲಿ ಇದು ₹1,850 ರೂ.ನ ಸಮೀಪದಲ್ಲಿದೆ. ಚೆನ್ನೈನಲ್ಲಿ, ಎಲ್‌ಪಿಜಿ ಬೆಲೆ ₹1,900 ರೂ. ಆಗಲು ಕೇವಲ 5 ಪೈಸೆ ಮಾತ್ರ ಬಾಕಿ ಇದೆ.

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 19 ಕೆಜಿ ಎಲ್‌ಪಿಜಿ ಬೆಲೆ ₹49 ಏರಿಕೆಯಾಗಿ, ಫೆಬ್ರವರಿ 1, 2026 ರಿಂದ ₹1,740.5 ಕ್ಕೆ ತಲುಪಿದೆ. ಹಿಂದೆ ಇದರ ಬೆಲೆ ₹1,691.5 ಇತ್ತು.

ಕೋಲ್ಕತ್ತಾ: ಕೋಲ್ಕತ್ತಾದಲ್ಲೂ ಎಲ್‌ಪಿಜಿ ಗ್ಯಾಸ್‌ ಬೆಲೆ ₹49.5 ಏರಿಕೆಯಾಗಿದ್ದು, ನಂತರ ಬೆಲೆ ₹1,844.5 ರೂ.ಗೆ ತಲುಪಿದೆ. ಇದು ಜನವರಿ 2026 ರ ₹1,795 ರೂ.ಗೆ ಹೋಲಿಸಿದ್ರೆ ಹೆಚ್ಚಾಗಿದೆ.

ಮುಂಬೈ: ಇನ್ನು ಮಾಯಾನಗರಿ ಮುಂಬೈನಲ್ಲಿ, 19 ಕೆಜಿ ಎಲ್‌ಪಿಜಿ ಬೆಲೆ ₹49.5 ಹೆಚ್ಚಳ ಕಂಡಿದ್ದು, ಜನವರಿ 2026 ರ ₹1,642.5 ರಿಂದ ಫೆಬ್ರವರಿ ಆರಂಭದಲ್ಲಿ ₹1,692 ರೂ. ಆಗಿದೆ.

ಚೆನ್ನೈ: ಚೆನ್ನೈನಲ್ಲಿ, ಫೆಬ್ರವರಿ 1, 2026 ರಿಂದ ₹50 ರೂ. ಗರಿಷ್ಠ ಏರಿಕೆಯೊಂದಿಗೆ ಬೆಲೆ ₹1,899.5 ತಲುಪಿದೆ.

ಇನ್ನು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 14.2 ಕೆಜಿ ಗೃಹಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಏಪ್ರಿಲ್‌ 8, 2025ರಂದು ಬದಲಾಗಿದ್ದು. ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆಗಳಾಗಿಲ್ಲ. ಈ ಗ್ಯಾಸ್‌ ಬೆಲೆ ಬೆಂಗಳೂರಿನಲ್ಲಿ 855 ರೂ. ಇದೆ.

Credit: Goodreturns

More from Filmibeat

Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X