For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಬಿಗ್ ಬಾಸ್ ಮನೆಯೊಳಗೆ ಮೂರನೇ ಲವ್‌ ಸ್ಟೋರಿ!

  |

  ಬಿಗ್ ಬಾಸ್ ಓಟಿಟಿ ಯಶಸ್ಸಿಯಾಗಿ ಒಂದು ವಾರ ಪೂರೈಸಿದೆ. ಈಗಾಗಲೇ ಒಬ್ಬರು ಸ್ಪರ್ಧಿ ಬಿಗ್ ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಮತ್ತೊಬ್ಬರು ಹೊರಗೆ ಹೋಗಿದ್ದಾರೆ. ಸದ್ಯ ಉಳಿದಿರೋ 14 ಮಂದಿಯೊಳಗೆ ಈಗಾಗಲೇ ಮೈಂಡ್ ಗೇಮ್ ಶುರುವಾಗಿದೆ. ಮನೆಯೊಳಗೆ ಉಳಿದುಕೊಳ್ಳೋಕೆ ಸ್ಪರ್ಧಿಗಳು ಒಳಗೊಳಗೆ ಸ್ಟ್ರಾಟಜಿ ಮಾಡುತ್ತಿದ್ದಾರೆ.

  ಎರಡನೇ ವಾರಕ್ಕೆಸ ಬಿಗ್ ಬಾಸ್ ಜರ್ನಿಯಲ್ಲಿ ಈಗಾಗಲೇ ನಾಮಿನೇಷನ್ ಆಗಿದೆ. ನಾಮಿನೇಟ್ ಆಗಿರುವ ಸ್ಪರ್ಧಿಗಳ ಪಟ್ಟಿ ದೊಡ್ಡದೇ ಇದೆ. ಆರ್ಯವರ್ಧನ್ ಸೇರಿದಂತೆ ಬಿಗ್ ಬಾಸ್ ಮನೆಯ ಬಹುತೇಕ ಮಂದಿ ಈ ವಾರಕ್ಕೆ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಮನೆಯೊಳಗೆ ಉಳಿದುಕೊಳ್ಳುವುದಕ್ಕೆ ಹೊಸ ಸ್ಟ್ರಾಟಜಿ ಮಾಡುತ್ತಿದ್ದಾರೆ.

  Bigg Boss OTT Kannada: ಟಾಸ್ಕ್‌ನಲ್ಲಿ ಗೆದ್ದ ನಂದು, ಸೋಮಣ್ಣಗೆ ಸೋಲುBigg Boss OTT Kannada: ಟಾಸ್ಕ್‌ನಲ್ಲಿ ಗೆದ್ದ ನಂದು, ಸೋಮಣ್ಣಗೆ ಸೋಲು

  ಎರಡನೇ ವಾರಕ್ಕೆ ಮೂರನೇ ಲವ್ ಸ್ಟೋರಿಗೆ ವೇದಿಕೆ ಸಿದ್ಧವಾಗಿದೆ. ಹೊಸ ಜೋಡಿಯನ್ನುಕಂಡು ಮನೆಯೊಳಗೆ ಗುಸುಗುಸು ಮಾತು ಆರಂಭ ಆಗಿದೆ. ಆದರೆ, ಇದು ನಿಜವಾದ ಲವ್ ಸ್ಟೋರಿನಾ? ಇಲ್ಲಾ ಸ್ಟ್ರಾಟಜಿನಾ? ಮನೆಯೊಳಗಿರುವ ಸ್ಪರ್ಧಿಗಳ ಅನುಮಾನ ಅನ್ನೋದನ್ನು ತಿಳಿಯಲು ಮುಂದೆ ಓದಿ..

  ಬಿಗ್ ಬಾಸ್ 'ಲವ್‌ ಸ್ಟೋರಿ'

  ಬಿಗ್ ಬಾಸ್ 'ಲವ್‌ ಸ್ಟೋರಿ'

  ಬಿಗ್ ಬಾಸ್ ಅಂದ್ರೆನೇ ಹಾಗೆ.. ಒಮ್ಮೆ ಮನೆಯೊಳಗೆ ಹೋದರೆ ಮುಗಿದೇ ಹೋಯ್ತು. ಅಲ್ಲಿ ಉಳಿದುಕೊಳ್ಳೋಕೆ ಏನಾದೂ ಸಾಹಸ ಮಾಡಲೇ ಬೇಕು. ಸದ್ಯ ಬಿಗ್ ಮನೆಯೊಳಗೆ ಮೂರು ಜೋಡಿಗಳಾಗಿವೆ. ರಾಕೇಶ್ ಮೊದಲಿನಿಂದಲೂ ಫ್ಲರ್ಟ್ ಮಾಡುತ್ತೇನೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೂ, ಇವರಿಗೆ ಇಬ್ಬರು ಪೈಪೋಟಿಗೆ ಇಳಿದಿದ್ದಾರೆ ಅನ್ನೋದನ್ನು ಮನೆಯೊಳಗಿನ ಸ್ಪರ್ಧಿಗಳೇ ಮಾತಾಡಿಕೊಳ್ಳುತ್ತಿದ್ದಾರೆ. ಇತ್ತ ಸ್ಫೂರ್ತಿ ಗೌಡ ಈಗಾಗಲೇ ಆರ್ಯವರ್ಧನ್‌ಗೆ ಇಬ್ಬರ ಜಾತಕ ಹೇಗಿದೆ ನೋಡುವಂತೆ ಕೇಳಿಕೊಂಡಿದ್ದರು. ಇತ್ತ ಸೋನು ಗೌಡ ನೇರವಾಗಿ ರಾಕೇಶ್‌ಗೆ ನಿಮ್ಮ ಮೇಲೆ ಫೀಲಿಂಗ್ ಇದೆ ಎಂದಿದ್ದರು. ರಾಕೇಶ್‌ಗೆ ಸ್ಪೂರ್ತಿ ಗೌಡ ಮೇಲೆ ಮನಸ್ಸಾಗಿದೆ ಅನ್ನೋದು ಗೊತ್ತಾಗಿದೆ.

  Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು?Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು?

  ರೂಪೇಶ್-ಸಾನ್ಯಾ ಕುಚಿಕು

  ರೂಪೇಶ್-ಸಾನ್ಯಾ ಕುಚಿಕು

  ಸದ್ಯ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಸದ್ದಿಲ್ಲದೆ ಲವ್‌ ಸ್ಟೋರಿಗಳು ನಿಧಾನವಾಗಿ ಆರಂಭ ಆಗಿದೆ. ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೀತಿದೆ ಅಂತ ಗುಸು ಗುಸು ಶುರುವಾಗಿದೆ. ಇಬ್ಬರೂ ತುಂಬಾ ಅನ್ಯೋನ್ಯವಾಗಿ ಓಡಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಮನೆಯೊಳಗೆ ಇವರಿಬ್ಬರ ಬಗ್ಗೆ ಅನುಮಾನವಿದೆ. ಆದರೆ, ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇಬ್ಬರೂ ಈಗಾಗಲೇ ನಾವು ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಆದರೂ, ಮನೆಯೊಳಗಿರುವವರಿಗೆ ಅನುಮಾನ ಮೂಡಿಲ್ಲ.

  ಉದಯ್ ಸೂರ್ಯ-ಅಕ್ಷತಾ ಕುಕ್ಕಿ

  ಉದಯ್ ಸೂರ್ಯ-ಅಕ್ಷತಾ ಕುಕ್ಕಿ

  ಈಗ ಬಿಗ್ ಬಾಸ್ ಮನೆಯೊಳಗೆ ಮೂರನೇ ಲವ್‌ ಸ್ಟೋರಿನೂ ಶುರುವಾಗಿದೆ. ಉದಯ್ ಸೂರ್ಯ ಹಾಗೂ ಅಕ್ಷತಾ ಕುಕ್ಕಿ ನಡುವೆ ಏನೋ ನಡೀತಿದೆ ಅಂತ ಚೈತ್ರ ಹಳ್ಳಿಕೇರಿಗೆ ಅನುಮಾನ. ಅದಕ್ಕೆ ಮನೆಯೊಳಗೆ ಚೈತ್ರಾ ಮಹಿಳಾ ಮಂಡಳಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಆ ಅನುಮಾನಕ್ಕೆ ಕಾರಣವೇನು ಅಂತಾನೂ ಹೇಳಿದ್ದಾರೆ. ಟಾಸ್ಕ್‌ನಲ್ಲಿ ಅಕ್ಷತಾ ಕುಕ್ಕಿಗೆ ಸಪೋರ್ಟ್ ಮಾಡಿದ್ದು ಇಷ್ಟಲ್ಲಾ ಅನುಮಾನಕ್ಕೆ ಕಾರಣವಾಗಿದೆ.

  Bigg Boss OTT Kannada: ಸೋನುಗೆ ಖಾರವಾಗೇ ಬುದ್ಧಿವಾದ ಹೇಳಿದ ಸುದೀಪ್Bigg Boss OTT Kannada: ಸೋನುಗೆ ಖಾರವಾಗೇ ಬುದ್ಧಿವಾದ ಹೇಳಿದ ಸುದೀಪ್

  ಓಟಿಟಿಯಿಂದ ಹೊರ ಬರೋರು ಯಾರು?

  ಓಟಿಟಿಯಿಂದ ಹೊರ ಬರೋರು ಯಾರು?

  ಬಿಗ್ ಬಾಸ್ ಮನೆಯೊಳಗೆ 14 ಸ್ಪರ್ಧಿಗಳಿದ್ದಾರೆ. ಒಬ್ಬರಿಗಿಂತ ಒಬ್ಬರಿಗೆ ಈ ಮನೆಯೊಳಗೆ ಉಳಿದುಕೊಳ್ಳುವುದಕ್ಕೆ ಏನು ಮಾಡಬೇಕು ಅನ್ನೋದು ಗೊತ್ತಿದೆ. ಅದಕ್ಕೆ ತಕ್ಕಂತೆ ಮೈಂಡ್ ಗೇಮ್ ಆರಂಭ ಆಗಿದೆ. ಗೇಮ್ಸ್‌, ಟಾಸ್ಕ್ ಏನೇ ಇದ್ದರೂ ಉತ್ಸಾಹದಿಂದ ಮಾಡುತ್ತಿದ್ದಾರೆ. ಹೀಗಾಗಿ ಲವ್ ಸ್ಟೋರಿಗಳು ಈ ಮೂರು ಜೋಡಿಯನ್ನು ಈ ವಾರ ಮನೆಯೊಳಗೆ ಉಳಿಸುತ್ತಾ? ಮುಂದಿನ ವಾರ ಯಾರು ಸೇವ್ ಆಗುತ್ತಾರೆ? ಅನ್ನೋ ಪ್ರಶ್ನೆ ಎದ್ದಿರೋದಂತೂ ಸುಳ್ಳಲ್ಲ.

  English summary
  Bigg Boss Kannada OTT: Uday Surya Akshata Rakesh Adiga Spoorty Gowda Love Story, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X