twitter
    For Quick Alerts
    ALLOW NOTIFICATIONS  
    For Daily Alerts

    ಅಲ್ಲು ಅರ್ಜುನ್ ಹಾದಿ ಹಿಡಿದ ಮಹೇಶ್ ಬಾಬು: ಹೊಸ ಸಾಹಸಕ್ಕೆ ಕೈ ಹಾಕಿದ ಸೂಪರ್ ಸ್ಟಾರ್

    |

    ಸಿನಿಮಾ ನಿರ್ಮಾಣ ಮತ್ತು ಜವಳಿ ಉದ್ಯಮದಂತಹ ಚಟುವಟಿಕೆಗಳಿಗೆ ಬಂಡವಾಳ ಹೂಡುವ ಮೂಲಕ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವ ನಟ ಮಹೇಶ್ ಬಾಬು ಮತ್ತೊಂದು ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ವೀಕ್ಷಕರಿಗೆ ಕುಳಿತಲ್ಲಿಯೇ ಸಿನಿಮಾ, ಧಾರಾವಾಹಿ, ವೆಬ್ ಸೀರೀಸ್‌ಗಳನ್ನು ಒದಗಿಸುವ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಮುಂತಾದ ಓಟಿಟಿ ವೇದಿಕೆಯಂತೆ ತಮ್ಮದೇ ಸ್ವಂತ ಓಟಿಟಿ ವೇದಿಕೆಯನ್ನು ಆರಂಭಿಸಲು ಅವರು ಸಿದ್ಧತೆ ನಡೆಸಿದ್ದಾರೆ.

    ಈ ಹಿಂದೆ ಮಹೇಶ್ ಬಾಬು, ಪ್ರಸ್ತುತ ಚಾಲ್ತಿಯಲ್ಲಿರುವ ಓಟಿಟಿ ವೇದಿಕೆಗಳೊಂದಿಗೆ ಮಾತುಕತೆ ನಡೆಸಿದ್ದರು. ಅವುಗಳಿಗೆ ಸೀರೀಸ್‌ಗಳನ್ನು ನಿರ್ಮಿಸಿಕೊಡುವ ಕುರಿತು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಮಹೇಶ್ ಬಾಬು ಈಗ ಮನಸು ಬದಲಿಸಿದ್ದಾರೆ. ಬೇರೆ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದುವ ಬದಲು ತಮ್ಮದೇ ಓಟಿಟಿ ಪ್ಲಾಟ್ ಫಾರ್ಮ್ ಹೊಂದಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

    ನಟ ಮಹೇಶ್ ಬಾಬು ಪಾತ್ರದ ಹೆಸರನ್ನೇ ಮಗನಿಗೆ ಇರಿಸಿದ ಖ್ಯಾತ ನಿರ್ದೇಶಕನಟ ಮಹೇಶ್ ಬಾಬು ಪಾತ್ರದ ಹೆಸರನ್ನೇ ಮಗನಿಗೆ ಇರಿಸಿದ ಖ್ಯಾತ ನಿರ್ದೇಶಕ

    ಮೀಡಿಯಾ ಕಂಪೆನಿಗಳ ಜತೆ ಮಾತುಕತೆ

    ಮೀಡಿಯಾ ಕಂಪೆನಿಗಳ ಜತೆ ಮಾತುಕತೆ

    ತಮ್ಮದೇ ನಿರ್ಮಾಣ ಸಂಸ್ಥೆ ಮತ್ತು ಹೈದರಾಬಾದ್‌ನಲ್ಲಿನ ಮಲ್ಟಿಪ್ಲೆಕ್ಸ್‌ನಿಂದ ಲಾಭ ಗಳಿಸುತ್ತಿರುವ ಮಹೇಶ್ ಬಾಬು ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಬಾಲಿವುಡ್‌ನ ವಿವಿಧ ಕಾರ್ಪೊರೇಟ್ ಮೀಡಿಯಾ ಕಂಪೆನಿಗಳ ಜತೆಗೆ ಮಹೇಶ್ ಬಾಬು ಮಾತುಕತೆ ನಡೆಸುತ್ತಿದ್ದಾರೆ.

    ಮೊದಲ ಸಿನಿಮಾಕ್ಕೆ ಸಿದ್ಧತೆ

    ಮೊದಲ ಸಿನಿಮಾಕ್ಕೆ ಸಿದ್ಧತೆ

    ಅಂದುಕೊಂಡಂತೆ ನಡೆದರೆ ಮಹೇಶ್ ಬಾಬು ಅವರ ಹೊಸ ಓಟಿಟಿ ಪ್ಲಾಟ್‌ಫಾರ್ಮ್ ಮೂಲಕ ಎವರು, ಗೂಢಚಾರಿ, ಕ್ಷಣಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ನಟ ಆದ್ವಿ ಶೇಷ್ ಅಭಿನಯದ ಸಿನಿಮಾವೊಂದು ಮೊದಲ ಪ್ರಾಜೆಕ್ಟ್ ಆಗಿ ಆರಂಭವಾಗಲಿದೆ.

    ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್

    ಅನೇಕ ಸ್ಕ್ರಿಪ್ಟ್‌ಗಳು ಅಂತಿಮ

    ಅನೇಕ ಸ್ಕ್ರಿಪ್ಟ್‌ಗಳು ಅಂತಿಮ

    ಈಗಾಗಲೇ ಮಹೇಶ್ ಬಾಬು ಅವರ ಎಲ್ಲ ಉದ್ಯಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅವರ ಪತ್ನಿ ನಮ್ರತಾ, ಓಟಿಟಿ ಸಂಬಂಧಿತ ಚಟುವಟಿಕೆಗಳ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಓಟಿಟಿಯನ್ನು ಆರಂಭಿಸಲು ನಮ್ರತಾ ಕೆಲವು ಸ್ಕ್ರಿಪ್ಟ್‌ಗಳನ್ನು ಅಂತಿಮಗೊಳಿಸಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಶೀಘ್ರದಲ್ಲಿಯೇ ಕೆಲಸಗಳು ಆರಂಭವಾಗಲಿವೆ.

    ಅಲ್ಲು ಅರ್ಜುನ್ ಓಟಿಟಿ

    ಅಲ್ಲು ಅರ್ಜುನ್ ಓಟಿಟಿ

    ತೆಲುಗಿನಲ್ಲಿ ಸ್ಟಾರ್ ನಟರೊಬ್ಬರು ಓಟಿಟಿ ಆರಂಭಿಸುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ನಟ ಅಲ್ಲು ಅರ್ಜುನ್ ಅವರ ಗೀತಾ ಆರ್ಟ್‌ ಬ್ಯಾನರ್ ಮೂಲಕ 'ಆಹಾ' ಎಂಬ ಓಟಿಟಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅಲ್ಲು ಅರವಿಂದ್ ನಿರ್ಮಿಸುವ ಸಿನಿಮಾಗಳು ಅವರ ಓಟಿಟಿಯಲ್ಲಿಯೇ ಪ್ರಸಾರವಾಗಲಿವೆ. ಜತೆಗೆ ವಿಭಿನ್ನ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದ್ದಾರೆ.

    ಕನ್ನಡದಲ್ಲಿಯೂ ಬೇಕಿದೆ ಇಂತಹ ಪ್ರಯತ್ನ

    ಕನ್ನಡದಲ್ಲಿಯೂ ಬೇಕಿದೆ ಇಂತಹ ಪ್ರಯತ್ನ

    ತೆಲುಗು ಮತ್ತು ತಮಿಳು ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ತೀರಾ ಚಿಕ್ಕದು. ಆದರೆ ತಯಾರಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚು. ಇವುಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ. ಹಾಗೆಯೇ ವೆಬ್ ಸೀರೀಸ್‌ಗಳನ್ನು ನಿರ್ಮಿಸುವ ಪ್ರಯತ್ನಗಳೂ ನಡೆದಿವೆ. ಕನ್ನಡದ್ದೇ ಆದ ಓಟಿಟಿ ಪ್ಲಾಟ್ ಫಾರ್ಮ್ ಇದ್ದರೆ ಇವುಗಳನ್ನು ಜನರಿಗೆ ತಲುಪಿಸಲು ಅವಕಾಶ ಸಿಗಲಿದೆ. ಮುಂದಿನ ದಿನಗಳಲ್ಲಿ ಓಟಿಟಿ ಮನರಂಜನಾ ಉದ್ಯಮವನ್ನು ನಿಯಂತ್ರಿಸಲಿದೆ. ಆದರೆ ಇದಕ್ಕೆ ಹೆಚ್ಚಿನ ಸಿದ್ಧತೆ ಮತ್ತು ಬಂಡವಾಳದ ಅಗತ್ಯವಿದೆ. ಹೀಗಾಗಿ ತೆಲುಗಿನಲ್ಲಿ ಸಾಧ್ಯವಾದಂತೆ ನಟರು ಓಟಿಟಿ ಆರಂಭಿಸುವುದು ಸುಲಭವಲ್ಲ. ಚಿತ್ರರಂಗ ಒಂದಾಗಿ ತಮ್ಮದೇ ಓಟಿಟಿ ಆರಂಭಿಸುವ ಪ್ರಯತ್ನ ನಡೆಸಿದರೆ ಚಿತ್ರರಂಗಕ್ಕೆ ಅನುಕೂಲವಾಗಲಿದೆ.

    English summary
    Tollywood star Mahesh Babu to launch his own OTT platform as his new venture after Allu Arjun lanched his Aha OTT platform.
    Monday, May 18, 2020, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X