twitter
    For Quick Alerts
    ALLOW NOTIFICATIONS  
    For Daily Alerts

    ಥಿಯೇಟರ್ ಮಾಲೀಕರ ಜೊತೆ ಮಾತುಕಥೆ ವಿಫಲ: 100 ಕೋಟಿ ಮರಕ್ಕರ್ ಓಟಿಟಿಯಲ್ಲಿ ರಿಲೀಸ್

    |

    ಮಲಯಾಳಂ ಚಿತ್ರರಂಗದ ಅತಿ ದುಬಾರಿ ಸಿನಿಮಾ ಮರಕ್ಕರ್. ಮಲಯಾಳಂ ಸೂಪರ್ ಸ್ಟಾರ್ ಮೋಹಲ್ ಲಾಲ್, ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ, ಮಂಜು ವಾರಿಯರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿರೋ ಈ ಸಿನಿಮಾ ಥಿಯೇಟರ್‌ಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಹರಸಾಹಸ ಮಾಡುತ್ತಿದೆ. ಕಳೆದ ವರ್ಷವೇ ತೆರೆಕಾಣಬೇಕಿದ್ದ ಸಿನಿಮಾ ಕೊರೊನಾ ಹಾವಳಿಯಿಂದ ರಿಲೀಸ್ ಡೇಟ್ ಮುಂದಾಕುತ್ತಲೇ ಬಂದಿದೆ.

    ಮರಕ್ಕರ್ ಸಿನಿಮಾ ಮೋಹನ್ ವೃತ್ತಿ ಬದುಕಿನ ದುಬಾರಿ ಚಿತ್ರ. 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಥಿಯೇಟರ್‌ಗಳಲ್ಲೇ ಬಿಡುಗಡೆ ಮಾಡಬೇಕು ಅಂತ ಕೇರಳದ ಥಿಯೇಟರ್ ಮಾಲೀಕರು ಪಟ್ಟು ಹಿಡಿದು ಕೂತಿದ್ದರು. ಕೊರೊನಾದಿಂದಾಗಿ ಕೇರಳದ ಚಿತ್ರಮಂದಿರಗಳಿಗೆ ನಷ್ಟ ಆಗಿದೆ. ಹೀಗಾಗಿ ಮೋಹನ್ ಲಾಲ್ ನಟಿಸಿದ ಮರಕ್ಕರ್ ಸಿನಿಮಾ ಚಿತ್ರಮಂದಿರದಲ್ಲೇ ರಿಲೀಸ್ ಆಗಬೇಕು ಅಂತ ಪಟ್ಟು ಹಿಡಿದಿದ್ದರು. ಇದರ ಹೊರತಾಗಿಯೂ ಮರಕ್ಕರ್ ಚಿತ್ರದ ನಿರ್ಮಾಪಕ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹಾಗಿದ್ದರೆ, ಥಿಯೇಟರ್ ಮಾಲೀಕರು ಹಾಗೂ ನಿರ್ಮಾಪಕರ ನಡುವಿನ ಮಾತುಕಥೆ ವಿಫಲ ಆಗಿದ್ದು ಏಕೆ? ಪರಸ್ಪರ ಆರೋಪಗಳೇನು ? ಅನ್ನುವುದನ್ನು ಮುಂದೆ ಓದಿ.

    ಕೇರಳ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ನಡುವಿನ ಚರ್ಚೆ ವಿಫಲ
    2019ರಲ್ಲಿ ಮರಕ್ಕರ್ ಸಿನಿಮಾ ಸೆಟ್ಟೇರಿತ್ತು. 100 ಕೋಟಿ ವೆಚ್ಚದ ಈ ದುಬಾರಿ ಸಿನಿಮಾವನ್ನು ನಿರ್ದೇಶಕ ಪ್ರಿಯದರ್ಶನ್ 2020ರಲ್ಲಿ ಮುಗಿಸಿಕೊಟ್ಟಿದ್ದರು. 2020ರ ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ರಿಲೀಸ್ ಮಾಡಲು ಸಾಧ್ಯ ಆಗಿರಲಿಲ್ಲ. ಇದೇ ವೇಳೆ ಥಿಯೇಟರ್ ಮಾಲೀಕರು ಮರಕ್ಕರ್ ಓಟಿಟಿಯಲ್ಲಿ ರಿಲೀಸ್ ಮಾಡಬಾರದು. ಚಿತ್ರಮಂದಿರಲದಲೇ ರಿಲೀಸ್ ಮಾಡಬೇಕು. ಓಟಿಟಿಯಲ್ಲಿ ರಿಲೀಸ್ ಮಾಡಿದರೆ ಚಿತ್ರಮಂದಿರದ ಮಾಲೀಕರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದಿದ್ದರು. ಈ ವೇಳೆ ಮರಕ್ಕರ್ ನಿರ್ಮಾಪಕ ಆಂತೋನಿ ಪೆರುಂಬವೂರ್ ಥಿಯೇಟರ್ ಮಾಲೀಕರಿಗೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಆದರೆ, ಆ ಬೇಡಿಕೆಗಳು ಈಡೇರದ ಹಿನ್ನೆಲೆ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.

    Mohanlal 100 crore Malayalam film Marakkar will release in OTT after theatres talks fail

    500 ಚಿತ್ರಮಂದಿರದಲ್ಲಿ 21 ದಿನ ಪ್ರದರ್ಶನದ ಬೇಡಿಕೆ ಈಡೇರಲಿಲ್ಲ
    "ಮರಕ್ಕರ್ ಮಲಯಾಳಂನ ದುಬಾರಿ ಸಿನಿಮಾ ಆಗಿದ್ದರಿಂದ 500 ಚಿತ್ರಮಂದಿರಗಳು ಬೇಕು. ಅಲ್ಲದೆ 21 ದಿನಗಳ ಕಾಲ ಮರಕ್ಕರ್ ಸಿನಿಮಾ ಪ್ರದರ್ಶನ ಕಾಣಬೇಕು ಎಂದು ಒಡಂಬಡಿಕೆ ಆಗಿದೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಚಿತ್ರಮಂದಿರಗಳಿಂದ ಅನುಮತಿ ಕೊಡಿಸುವಂತೆ ಪ್ರದರ್ಶಕರ ಸಂಘಕ್ಕೆ ತಿಳಿಸಿದ್ದೆ. ಆದರೆ, ಕೇವಲ 89 ಚಿತ್ರಮಂದಿರದ ಮಾಲೀಕರ ಮಾತ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿ ಬೇರೆ ವಿಧಿಯಿಲ್ಲದೆ ಓಟಿಟಿ ಮೊರೆ ಹೋಗಬೇಕಾಗಿದೆ" ಎಂದು ನಿರ್ಮಾಪಕ ಆಂತೋನಿ ಪೆರುಂಬವೂರ್ ತಿಳಿಸಿದ್ದಾರೆ.

    Mohanlal 100 crore Malayalam film Marakkar will release in OTT after theatres talks fail

    "ನಮ್ಮ ಕಡೆಯಿಂದ 500 ಚಿತ್ರಮಂದಿರ ಹಾಗೂ 15 ಕೋಟಿ ರೂಪಾಯಿ ಗ್ಯಾರಂಟಿ ಕೊಡಲಾಗಿತ್ತು. ಆದರೂ, ನಿರ್ಮಾಪಕರು ಈ ಒಪ್ಪಂದದಿಂದ ಹಿಂದೆ ಸರಿದರು. ಬಹುಶಃ ಓಟಿಟಿ ವೇದಿಕೆಯೊಂದಿಗೆ ನಿರ್ಮಾಪಕರು ಬಹುದೊಡ್ಡ ಒಡಂಬಡಿಕೆ ಮಾಡಿಕೊಂಡಿರಬೇಕು" ಎಂದು ಕೇರಳದ ಪ್ರದರ್ಶಕರ ವಲಯದ ಅಧ್ಯಕ್ಷ ಆಂಚಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.

    Mohanlal 100 crore Malayalam film Marakkar will release in OTT after theatres talks fail

    2020ರಲ್ಲಿ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಮರಕ್ಕರ್
    2020ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗೆ ಮೂರು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ವಿಜ್ಯುವಲ್ ಎಫೆಕ್ಟ್ಸ್, ಅತ್ಯುತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಇಷ್ಟೆಲ್ಲಾ ಸದ್ದು ಮಾಡಿದ್ದ ಸಿನಿಮಾ ಥಿಯೇಟರ್‌ನಲ್ಲೇ ಬಿಡುಗಡೆಯಾಗಬೇಕು ಎಂದು ನಿರ್ಮಾಪಕರು ಹಾಗೂ ವಿತರಕರು ಬಯಸಿದ್ದರು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಆಗದ ಹಿನ್ನೆಲೆ ಸಿನಿಮಾವನ್ನು ಅಮೆಜಾನ್ ಓಟಿಟಿ ವೇದಿಕೆಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    English summary
    Mohanlal's most expensive movie Marakkar will going to premiere in amozon prime ott platform. A series of discussions with the producer for a theater oweners was conducted but failed.
    Saturday, November 6, 2021, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X