For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ ಮುಂದೆ ಇದೆ ಭಾರಿ ಬದಲಾವಣೆ: ರಾಜಮೌಳಿ ಕೊಟ್ಟ ಸುಳಿವು

  |

  ಅದ್ಧೂರಿ ಸಿನಿಮಾಗಳಿಗೆ ಹೆಸರಾದ ಎಸ್ ಎಸ್ ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ಆರ್ ಆರ್ ಆರ್' ಚಿತ್ರೀಕರಣ ಲಾಕ್ ಡೌನ್ ಕಾರಣದಿಂದ ಅರ್ಧದಲ್ಲಿಯೇ ನಿಂತಿದೆ. ಅಜಯ್ ದೇವಗನ್, ಅಲಿಯಾ ಭಟ್ ಇನ್ನೂ ಈ ಚಿತ್ರದಲ್ಲಿ ಭಾಗವಹಿಸಬೇಕಿದೆ. ಲಾಕ್‌ಡೌನ್‌ನಲ್ಲಿ ಕಾಲಕಳೆಯುತ್ತಿರುವ ರಾಜಮೌಳಿ ಚಿತ್ರೀಕರಣದ ಸೆಟ್‌ಗೆ ಮರಳುವ ಸಮಯಕ್ಕೆ ಕಾಯುತ್ತಿದ್ದಾರೆ.

  'ಈ' ಸಿನಿಮಾ ಮಾಡಿ ಎಂದು ರಾಜಮೌಳಿಗೆ ಅಭಿಮಾನಿಗಳ ಒತ್ತಾಯ 'ಈ' ಸಿನಿಮಾ ಮಾಡಿ ಎಂದು ರಾಜಮೌಳಿಗೆ ಅಭಿಮಾನಿಗಳ ಒತ್ತಾಯ

  ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಶಾಂತ್ ನೀಲ್ | Prashanth Neel | Prabhas | Vijay

  ಇತ್ತೀಚೆಗೆ ಆನ್‌ಲೈನ್ ಮಾಧ್ಯಮವೊಂದರಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದ ರಾಜಮೌಳಿ, ಸಿನಿಮಾ ರಂಗದ ಭವಿಷ್ಯದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗಳ ಮೇಲೆ ಕೊರೊನಾ ವೈರಸ್ ಬೀರುವ ಪರಿಣಾಮ ಹಾಗೂ ಒಟಿಟಿ ವೇದಿಕೆಗಳು ಮನುಷ್ಯ ಜೀವನದಲ್ಲಿ ಹೇಗೆ ಮಹತ್ವದ ಸ್ಥಾನ ಪಡೆದುಕೊಳ್ಳುತ್ತಿವೆ ಎಂಬುದರ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ನಿರ್ದೇಶಕರು ಸಿನಿಮಾ ವಸ್ತುಗಳ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಅವರು ಹೇಳಿದ ಕೆಲವು ವಿಚಾರಗಳು ಇಲ್ಲಿವೆ. ಮುಂದೆ ಓದಿ...

  ಉತ್ತಮ ಕಂಟೆಂಟ್ ನಿರೀಕ್ಷಿಸುತ್ತಾರೆ

  ಉತ್ತಮ ಕಂಟೆಂಟ್ ನಿರೀಕ್ಷಿಸುತ್ತಾರೆ

  ಈ ಲಾಕ್ ಡೌನ್ ಅವಧಿಯಲ್ಲಿ ಜನರು ಆನ್‌ಲೈನ್‌ನಲ್ಲಿ ವಿವಿಧ ಸಿನಿಮಾ ಮತ್ತು ವೆಬ್ ಸೀರೀಸ್‌ಗಳನ್ನು ನೋಡಲು ಒಗ್ಗಿಕೊಂಡಿದ್ದಾರೆ. ಸಹಜವಾಗಿಯೇ ಅವರು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಕಂಟೆಂಟ್‌ಗಳಿಗಿಂತಲೂ ಉತ್ತಮವಾದ ಕಂಟೆಂಟ್‌ಗಳನ್ನು ಅವರು ನಿರೀಕ್ಷಿಸುತ್ತಾರೆ.

  ನಾನು ಅಪ್‌ಗ್ರೇಡ್ ಆಗುತ್ತೇನೆ

  ನಾನು ಅಪ್‌ಗ್ರೇಡ್ ಆಗುತ್ತೇನೆ

  ನಿರ್ದೇಶಕರು ಹೆಚ್ಚೆಚ್ಚು ಗುಣಮಟ್ಟದ ಮತ್ತು ಗಟ್ಟಿಯಾದ ಕಂಟೆಂಟ್‌ಗಳನ್ನು ಒದಗಿಸುವ ಬಗ್ಗೆ ಯೋಚಿಸಬೇಕಿದೆ. ಇಲ್ಲದೆಇದ್ದರೆ ಜನರು ಅವರ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ. ನಾನು ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ನನ್ನನ್ನು ನಾನು ಅಪ್‌ಗ್ರೇಡ್ ಮಾಡಿಕೊಳ್ಳುತ್ತೇನೆ.

  ಜಗತ್ತೇ ಮೆಚ್ಚಿದ ಸಿನಿಮಾ ರಾಜಮೌಳಿಗೆ ಬೋರ್ ಹೊಡೆಸಿತಂತೆ! ಯಾವುದಾ ಸಿನಿಮಾ?ಜಗತ್ತೇ ಮೆಚ್ಚಿದ ಸಿನಿಮಾ ರಾಜಮೌಳಿಗೆ ಬೋರ್ ಹೊಡೆಸಿತಂತೆ! ಯಾವುದಾ ಸಿನಿಮಾ?

  ಚಿತ್ರಮಂದಿರಕ್ಕೆ ಬರುವಂತೆ ಮಾಡಬೇಕು

  ಚಿತ್ರಮಂದಿರಕ್ಕೆ ಬರುವಂತೆ ಮಾಡಬೇಕು

  ಮನೆಯಲ್ಲಿ ಕುಳಿತು ಅಥವಾ ಮೊಬೈಲ್‌ನಲ್ಲಿ ಸಿನಿಮಾ ನೋಡುವ ಅನುಭವಕ್ಕಿಂತ ಚಿತ್ರಮಂದಿರದಲ್ಲಿ ಸಿಗುವ ಅನುಭವ ವಿಭಿನ್ನ. ನಾವು ಚಿತ್ರಮಂದಿರದಲ್ಲಿ ಮಾತ್ರವೇ ಕುಳಿತು ಎಂಜಾಯ್ ಮಾಡುವಂತಹ ಸಿನಿಮಾಗಳನ್ನೇ ನೀಡಬೇಕಿದೆ. ಹೀಗಿದ್ದಾಗ ಮಾತ್ರವೇ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ.

  ದುಂದು ವೆಚ್ಚಕ್ಕೆ ಕಡಿತ

  ದುಂದು ವೆಚ್ಚಕ್ಕೆ ಕಡಿತ

  ಸ್ಟಾರ್ ಕಲಾವಿದರಿಗೆ ನೀಡಲಾಗುವ ಸಂಭಾವನೆಗಳಲ್ಲಿ ಕಡಿತ ಮಾಡುವುದರ ಕುರಿತು ಚರ್ಚೆಗಳು ನಡೆಯುತ್ತಿವೆ. ನಾನು ಏನು ಹೇಳಲು ಬಯಸುವುದೇನೆಂದರೆ ನಾವು ಮೊದಲು ಐಷಾರಾಮಿತನವನ್ನು ಕಡಿಮೆ ಮಾಡಬೇಕು. ಅದನ್ನು ಮಾಡಿದರೆ ಉಳಿದದ್ದು ಅದರ ಹಿಂದೆ ಬರುತ್ತವೆ.

  ನಿರ್ಮಾಣ ಪ್ರಕ್ರಿಯೆ ಬದಲಾಗಲಿದೆ

  ನಿರ್ಮಾಣ ಪ್ರಕ್ರಿಯೆ ಬದಲಾಗಲಿದೆ

  ಕಥೆಗಳು ಬದಲಾಗದೆಯೇ ಇರಬಹುದು, ಆದರೆ ಸಿನಿಮಾ ನಿರ್ಮಾಣ ಪ್ರಕ್ರಿಯೆ ಬದಲಾಗುತ್ತವೆ. ಭವಿಷ್ಯದಲ್ಲಿ ಬೃಹತ್ ತಂಡ ಹಾಗೂ ಸಿಬ್ಬಂದಿಯೊಂದಿಗೆ ಸಿನಿಮಾ ಮಾಡುವುದು ಆರ್ಥಿಕ ಹೊರೆಯಾಗಬಹುದು. ಬಹುಶಃ ಸೆಟ್‌ಗಳಲ್ಲಿ ಇರುವ ಕೆಲಸಗಾರರ ಸಂಖ್ಯೆಯನ್ನು ಸೀಮಿತಗೊಳಿಸಬಹುದು ಎಂದು ರಾಜಮೌಳಿ ತಿಳಿಸಿದ್ದಾರೆ.

  English summary
  Director SS Rajamouli speaks about film industry after coronavirus lockdown. People will expect better content from filmmakers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X