twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ಸಿನಿಮಾ ತೆರೆಕಂಡು 50 ದಿನ ಆದ್ಮೇಲೆ OTTಯಲ್ಲಿ ರಿಲೀಸ್: ಸ್ಯಾಂಡಲ್‌ವುಡ್ ನಿಲುವು ಏನು?

    |

    ಭಾರತದಲ್ಲಿ ಕೊರೊನಾ ಎಂಟ್ರಿ ಕೊಟ್ಟ ಬಳಿಕ ಒಟಿಟಿ ಕ್ರೇಜ್ ಹೆಚ್ಚಾಗಿತ್ತು. ಕೋವಿಡ್ ಎಂಟ್ರಿ ಕೊಡ್ತು. ಭಾರತದ ಲಾಕ್‌ಡೌನ್ ಘೋಷಣೆ ಮಾಡಿತ್ತು. ಥಿಯೇಟರ್‌ಗಳು ಮುಚ್ಚಿದವು. ಬಿಡುಗಡೆಗೆ ರೆಡಿಯಾಗಿದ್ದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿಯೇ ಕೊಳೆಯುವಂತೆ ಆಗಿತ್ತು. ಈ ಹೊತ್ತಲ್ಲಿ ಚಿತ್ರರಂಗನೂ ಬದಲಾಯಿತು.

    ಕೊರೊನಾ ಬಳಿಕ ಮುಂದೇನು ಎಂದು ಗೊತ್ತಾಗದ ಹೊತ್ತಲೇ ನಿರ್ಮಾಪಕರ ಕಣ್ಣಿಗೆ ಕಾಣಿಸಿದ್ದೇ ಒಟಿಟಿ. ಬಿಡುಗಡೆಗೆ ರೆಡಿಯಾಗಿದ್ದ ಸಿನಿಮಾಗಳು ಒಂದೊಂದಾಗಿಯೇ ಒಟಿಟಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿತ್ತು. ಈ ಬೆನ್ನಲ್ಲೇ ಒಟಿಟಿ ಮಾರ್ಕೇಟ್ ಕೂಡ ಹೆಚ್ಚಾಗಿತ್ತು.

    ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ, ಕಾದಿವೆ ಹಿಟ್ ಸಿನಿಮಾಗಳುಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ, ಕಾದಿವೆ ಹಿಟ್ ಸಿನಿಮಾಗಳು

    ಅದ್ಯಾಕೆ ನಿರ್ಮಾಪಕರಿಗೆ ಒಟಿಟಿ ಒಂದೇ ಗತಿ ಎಂದು ಮನವರಿಕೆ ಆಯಿತೋ ಅಲ್ಲಿಂದ ಥಿಯೇಟರ್‌ಗೆ ಪರ್ಯಾಯವಾಗಿ ಒಟಿಟಿ ಕಾಣಿಸುವುದಕ್ಕೆ ಶುರುವಾಗಿತ್ತು. ಆದ್ರೀಗ ಥಿಯೇಟರ್‌ ಸಂಸ್ಕೃತಿ ನಶಿಸಿ ಹೋಗಲು ಇದೇ ಒಟಿಟಿ ಕಾರಣ ಅನ್ನುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಆ ಕಾರಣಕ್ಕೆ ಟಾಲಿವುಡ್ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಯಾವುದೇ ಥಿಯೇಟರ್‌ನಲ್ಲಿ ರಿಲೀಸ್ ಆದ 50 ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಬೇಕೆಂಬ ಹೊಸ ರೂಲ್ಸ್ ತಂದಿದೆ.

    ಟಾಲಿವುಡ್‌ನಲ್ಲಿ ಜುಲೈ 1ರಿಂದ ಹೊಸ ರೂಲ್ಸ್

    ಟಾಲಿವುಡ್‌ನಲ್ಲಿ ಜುಲೈ 1ರಿಂದ ಹೊಸ ರೂಲ್ಸ್

    ತೆಲುಗು ಸಿನಿಮಾ ನಿರ್ಮಾಪಕರ ಕೌನ್ಸಿಲ್ ಒಂದು ತೀರ್ಮಾನಕ್ಕೆ ಬಂದಿದೆ. ಇದರ ಪ್ರಕಾರ, ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಸಿನಿಮಾವೂ ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಥಿಯೇಟರ್‌ನಲ್ಲಿ ತೆರೆ ಕಂಡ 50 ದಿನಗಳ ಬಳಿಕಷ್ಟೇ ಒಟಿಟಿಯಲ್ಲಿ ರಿಲೀಸ್ ಆಗಬೇಕು ಎಂದು ಹೇಳಿದೆ. ಜುಲೈ 01ರಿಂದ ಈ ನಿಯಮ ಜಾರಿಯಲ್ಲಿರುತ್ತೆ. ಈ ಮೂಲಕ ಥಿಯೇಟರ್ ಮಾಲೀಕರಿಗೆ ಆಗುವ ನಷ್ಟವನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಸ್ಯಾಂಡಲ್‌ವುಡ್ ಸ್ಟ್ಯಾಂಡ್ ಏನು?

    ಸ್ಯಾಂಡಲ್‌ವುಡ್ ಸ್ಟ್ಯಾಂಡ್ ಏನು?

    ಟಾಲಿವುಡ್‌ ಕಡೆಗೆ ಒಟಿಟಿಗೆ ಮುಖ ಮಾಡುತ್ತಿವೆ. ಹೀಗಾಗಿ ತೆಲುಗು ಚಿತ್ರರಂಗ ಎಚ್ಚೆತ್ತುಕೊಂಡಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ಕೂಡ ಇಂತಹದ್ದೊಂದು ನಿರ್ಧಾರಕ್ಕೆ ಮುಂದಾಗಬಹುದು. " ಈಗಾಗಲೇ ಕನ್ನಡದ ಪ್ರದರ್ಶಕರು ಹಾಗೂ ವಿತರಕರು ಕೂಡ ನಮಗೆ ದೂರು ನೀಡಿದ್ದಾರೆ. ಕರ್ನಾಟಕದಲ್ಲಿಯೂ ಥಿಯೇಟರ್ ಸಂಸ್ಕೃತಿಯನ್ನು ಉಳಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಪ್ರದರ್ಶಕರು ಹಾಗೂ ವಿತರಕರಿಗೆ ಅನುಕೂಲ ಮಾಡುಕೊಳ್ಳಲಾಗುವುದು." ಎಂದು ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಭಾ ಮಾ ಹರೀಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

    ಜುಲೈ ಕೊನೆಯಲ್ಲಿ ಮೀಟಿಂಗ್

    ಜುಲೈ ಕೊನೆಯಲ್ಲಿ ಮೀಟಿಂಗ್

    ಕರ್ನಾಟಕದಲ್ಲಿಯೂ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಸೂಕ್ತ ನಿಯಮವನ್ನು ತರುವ ಅವಶ್ಯಕತೆಯಿದೆ. ಈಗ ಕನ್ನಡ ಚಿತ್ರರಂಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಬೆನ್ನಲ್ಲೇ ಒಟಿಟಿ ರಿಲೀಸ್ ಬಗ್ಗೆನೂ ಸೂಕ್ತ ಕ್ರಮ ಕೈಗೊಳ್ಳಲಿ ಜುಲೈ ಕೊನೆಯ ವಾರದಲ್ಲಿ ಮೀಟಿಂಗ್ ಕರೆಯುತ್ತಿದ್ದೇವೆ. ಆ ಮೀಟಿಂಗ್‌ನಲ್ಲಿ ಏನು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದು ಭಾ ಮಾ ಹರೀಶ್ ಹೇಳಿದ್ದಾರೆ.

    ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಬೇಡಿಕೆ ಇದ್ಯಾ?

    ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಬೇಡಿಕೆ ಇದ್ಯಾ?

    ಒಟಿಟಿಯಲ್ಲಿ ಬಾಲಿವುಡ್‌ ಸಿನಿಮಾ ಮೊದಲ ಬೇಡಿಕೆ. ಬಳಿಕ ಟಾಲಿವುಡ್, ಕಾಲಿವುಡ್‌ ಸಿನಿಮಾಗಳಿಗೆ ಬೇಡಿಕೆ ಇದೆ. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಒಟಿಟಿ ವೇದಿಕೆಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ತೆಲುಗು ಚಿತ್ರರಂಗದಂತೆ ಸ್ಯಾಂಡಲ್‌ವುಡ್‌ನಲ್ಲೂ ತೀರ್ಮಾನಗಳನ್ನು ತೆಗೆದುಕೊಂಡರೆ, ಒಟಿಟಿಯಲ್ಲೂ ಬೇಡಿಕೆ ಕಳೆದುಕೊಳ್ಳಬಹುದಾ? ಇಲ್ಲಾ ದೊಡ್ಡ ದೊಡ್ಡ ಸಿನಿಮಾಗಳಿಗೆ ಮಾತ್ರ ಈ ಶರತ್ತು ವಿಧಿಸಬೇಕಾ? ಇಂತಹ ಒಂದಿಷ್ಟು ಪ್ರಶ್ನೆಗಳಂತೆ ಸದ್ಯಕ್ಕೆ ಎದ್ದಿದೆ.

    English summary
    What is Sandalwood Stand on Movies should not enter OTT before 50 days of their theatrical run, Know More.
    Thursday, June 30, 2022, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X