Don't Miss!
- News
ಮುಖ್ಯಮಂತ್ರಿ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಬಿಜೆಪಿ; ಡಿಕೆಶಿ
- Technology
ಭಾರತದಲ್ಲಿ ಟೆಕ್ನೋ ಕ್ಯಾಮನ್ 19 ಪ್ರೊ 5G ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
- Sports
ಏಷ್ಯಾ ಕಪ್ 2022: ಈ ಸ್ಟಾರ್ ಆಟಗಾರನ ಅಭ್ಯಾಸದ ಕೊರತೆ ಭಾರತಕ್ಕೆ ಕಳವಳಕಾರಿ; ಜಯವರ್ಧನೆ
- Automobiles
ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರ್ ಓಡಿಸುತ್ತಾ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದೇವರು
- Finance
ಓಪನ್ಸಿಗ್ನಲ್ನ ಪ್ರಕಾರ ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಯಾವುದು?
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
Vikrant Rona Twitter Review: ವಿಕ್ರಾಂತ್ ರೋಣ ನೋಡಿ ಪರಭಾಷಿಗರು ಕನ್ನಡಿಗರು ಟ್ವಿಟರ್‌ನಲ್ಲಿ ಏನಂತಿದ್ದಾರೆ?
ಇಂದಿನಿಂದ ( ಜುಲೈ 28) 'ವಿಕ್ರಾಂತ್ ರೋಣ'ನ ಆರ್ಭಟ ಆರಂಭ ಆಗಿದೆ. ಕಳೆದ ಮೂರು ವರ್ಷಗಳಿಂದ ಕಿಚ್ಚ ಸುದೀಪ್ ಸಿನಿಮಾ ಪ್ರೇಕ್ಷಕರನ್ನು ಕಾಡುತ್ತಲೇ ಇತ್ತು. ಕೊನೆಗೂ ಆ ಬಹು ನಿರೀಕ್ಷೆಯ ಸಿನಿಮಾ ಬಿಡುಗಡೆಯಾಗಿದೆ. ಸಿನಿಪ್ರಿಯರು ಕುತೂಹಲದಿಂದ ನೋಡುತ್ತಿದ್ದ ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನವೇ ಕೆಲವೆಡೆ ಪ್ರೀಮಿಯರ್ ಕಂಡಿದೆ. ಭಾರತದ ಹಲವು ರಾಜ್ಯಗಳಲ್ಲಿ ಈ ಸಿನಿಮಾ ಮೊದಲೇ ರಿಲೀಸ್ ಆಗಿತ್ತು. ವಿದೇಶದ ಹಲವೆಡೆ ಕೂಡ ಈ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಕನ್ನಡಿಗರಿಗಿಂತ ಮೊದಲೇ ಬೇರೆ ಭಾಷೆಯ ಪ್ರೇಕ್ಷಕರು ಈ ಸಿನಿಮಾ ವೀಕ್ಷಿಸಿದ್ದರು.
Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?
ಕಳೆದೊಂದು ತಿಂಗಳಿಂದ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಮಾಡಿತ್ತು. ಹೀಗಾಗಿ ಮೊದಲು ಸಿನಿಮಾ ನೋಡಿದವರು ಏನಂತಾರೆ? ಎಂಬ ಕುತೂಹಲವಂತೂ ಇತ್ತು. ಅದರಂತೆ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ನೋಡಿದವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
|
3ಡಿ ಸಿನಿಮಾ ಅದ್ಭುತ!
ಬೇರೆ ಬೇರೆ ಭಾಷೆಯಲ್ಲಿ 'ವಿಕ್ರಾಂತ್ ರೋಣ' ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಸಿನಿಮಾ ನೋಡಿದ ಬಳಿಕ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. " ಎಂತಹ ಅದ್ಭುತ 3D ಸಿನಿಮಾ.. ಕಿಚ್ಚ ಸುದೀಪ್ ಕಡೆಯಿಂದ ರಿಲೀಸ್ ಆಗುತ್ತಿರುವ ಫೆಂಟಾಸ್ಟಿಕ್ ಸಿನಿಮಾ. ನಿಮ್ಮ ಅಭಿನಯ ಅದ್ಭುತವಾಗಿದೆ. ಹಾಗೇ ಥಿಯೇಟರ್‌ನಲ್ಲಿಯೂ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. " ಎಂದು ಮೊಹಮ್ಮದ್ ರಿಪೈ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ 'ವಿಕ್ರಾಂತ್ ರೋಣ' 1st ಡೇ, 1st ಶೋ ಎಲ್ಲಿ, ಎಷ್ಟು ಹೊತ್ತಿಗೆ?
|
ರಾಮರಾವ್ ಸ್ವಲ್ಪ ಹಿಂದೆ ಮುಂದೆ ಆದ್ರೆ ಅಷ್ಟೇ!
ಈಗ ತಾನೇ 'ವಿಕ್ರಾಂತ್ ರೋಣ' ಸಿನಿಮಾ ಪ್ರೀಮಿಯರ್ ಶೋ ನೋಡಿದೆ. ತುಂಬಾನೇ ಅದ್ಭುತವಾಗಿದೆ. ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ರವಿತೇಜಾ ಅಭಿನಯದ 'ರಾಮ ರಾವ್ ಆನ್ ಡ್ಯೂಟಿ' ಸಿನಿಮಾ ಸ್ವಲ್ಪ ಆಕಡೆ ಈಕಡೆ ಆದರೂ ಅಷ್ಟೇ ಕಥೆ. ಕೆಜಿಎಫ್ ಬಳಿಕ ಈ ಕಾನ್ಸೆಪ್ಟ್ ಅನ್ನು ಅದ್ಭುತ ತೆಗೆದಿದ್ದಾರೆ. ಈ ಸಿನಿಮಾದ ಕಾನ್ಸೆಪ್ಟ್ ರಿವೀಲ್ ಮಾಡಿದರೆ ಚೆನ್ನಾಗಿರಲ್ಲ. ಸಿನಿಮಾ ಮಾತ್ರ ಅತ್ಯದ್ಭುತವಾಗಿದೆ. 3ಡಿ ಎಫೆಕ್ಟ್‌ನಲ್ಲಿ ನೋಡಿ ಇನ್ನೂ ಸಖತ್ ಆಗಿರುತ್ತೆ." ಎಂದು ತೆಲುಗು ಪ್ರೇಕ್ಷಕರ ಅಭಿಪ್ರಾಯ ಪಟ್ಟಿದ್ದಾನೆ.
|
ಸುದೀಪ್ ಸಿನಿಮಾ ನೋಡಿ ಖುಷಿ ಆಯ್ತು!
"ವಿಕ್ರಾಂತ್ ರೋಣ ತುಂಬಾ ಒಳ್ಳೆಯ ಸಿನಿಮಾ. ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ನಟನೆ ನೋಡಿ ತುಂಬಾ ಖುಷಿಯಾಯಿತು. ಚಿತ್ರದಲ್ಲಿನ ಸಸ್ಪೆನ್ಸ್ ನೋಡುವುದೇ ಮಜವಾಗಿತ್ತು. ಬಹಳ ದಿನಗಳ ನಂತರ ಕಿಚ್ಚ ಸುದೀಪ್ ಅವರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ ಖುಷಿಯಾಯಿತು." ಎಂದು ಕಿಚ್ಚನ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
|
ಪಕ್ಕಾ ಟೈಂ ಪಾಸ್ ಸಿನಿಮಾ
" ವಿಕ್ರಾಂತ್ ರೋಣ ಸಿನಿಮಾವನ್ನು ಬೇಗನೇ ನೋಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದೆ. ಸಿನಿಮಾದ ಫಸ್ಟ್ ಹಾಫ್ ಡಿಸೆಂಟ್ ಆಗಿದೆ. ಸೆಕೆಂಡ್ ಹಾಫ್ ಅತ್ಯದ್ಬುತವಾಗಿದೆ. ಇದು ಟಿಪಿಕಲ್ ದಕ್ಷಿಣ ಭಾರತದ ಸಿನಿಮಾ ಎನ್ನಬಹುದು. ಆದರೆ ಉತ್ತರ ಭಾರತದಲ್ಲಿ ಸಿನಿಮಾದ ಬಜ್ ಸ್ವಲ್ಪ ಕಡಿಮೆ ಇದೆ." ಎಂದು ಸಿನಿಮಾ ನೋಡಿದ ಉತ್ತರ ಭಾರತದವರು ಟ್ವೀಟ್ ಮಾಡಿದ್ದಾರೆ.
|
ತೆಲುಗರಿಗೆ 'ವಿಕ್ರಾಂತ್ ರೋಣ' ಕಿಕ್
ತೆಲುಗು ಆಡಿಯನ್ಸ್‌ಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಸಿನಿಮಾ ನೋಡಿದವರಿಗೆ ಕಥೆ, ಗ್ರಾಫಿಕ್ಸ್ ಎಲ್ಲವೂ ಇಷ್ಟ ಆಗಿದೆ. ಬಾಹುಬಲಿ ರೇಂಜ್‌ನಲ್ಲಿಯೇ ಈ ಸಿನಿಮಾ ಇದೆ. ರಾ ರಾ ರಕ್ಕಮ್ಮ ಸಾಂಗ್ ಇದೆ ಅದು ಸೂಪರ್ ಆಗಿದೆ. ಸಿನಿಮಾ ಹಿಟ್ ಆಗೇ ಆಗುತ್ತೆ ಡೌಟೇ ಇಲ್ಲ. ಸಿನಿಮಾ ಅದ್ಭುತವಾಗಿದೆ ಎಂದು ತೆಲುಗು ಮಂದಿ ಭವಿಷ್ಯ ನುಡಿದಿದ್ದಾರೆ.