»   » ಪುನೀತ್ ಅಭಿನಯದ ನಿನ್ನಿಂದಲೇ ಟ್ವೀಟ್ ವಿಮರ್ಶೆ

ಪುನೀತ್ ಅಭಿನಯದ ನಿನ್ನಿಂದಲೇ ಟ್ವೀಟ್ ವಿಮರ್ಶೆ

Posted By:
Subscribe to Filmibeat Kannada

ಸುಮಾರು ಒಂದು ವರ್ಷದ ನಂತರ ಬಿಡುಗಡೆಯಾಗುತ್ತಿರುವ ಪುನೀತ್ ಚಿತ್ರಕ್ಕೆ ಎಲ್ಲಡೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೇನ್ ಥಿಯೇಟರ್ ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಮುಂದೆ ಜನಸಾಗರವೇ ಜಮಾಯಿಸಿದ್ದು, ಕೆ ಜಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಇದೇ ಮೊದಲ ಬಾರಿಗೆ ಎನ್ನುವಂತೆ ರಾಜ್ಯದ ಮಲ್ಟಿಪ್ಲೆಕ್ಸ್ ಗಳು ಪುನೀತ್ ರಾಜಕುಮಾರ್ ಅಭಿನಯದ ನಿನ್ನಿಂದಲೇ ಚಿತ್ರಕ್ಕೆ ಭರ್ಜರಿಯಾಗಿ ಮಣೆಹಾಕಿವೆ. ಕೆಲವೊಂದು ಮಲ್ಟಿಪ್ಲೆಕ್ಸ್ ಗಳಲ್ಲಿ ಗುರುವಾರ (ಜ 16) ಎಂಟರಿಂದ ಹದಿನೈದು ಪ್ರದರ್ಶನ ಕಾಣಲಿದೆ.

ಮಲ್ಟಿಪ್ಲೆಕ್ಸ್ ಇತಿಹಾಸದಲ್ಲಿ ತೀರಾ ಅಪರೂಪ ಎನ್ನುವಂತೆ ಮೊದಲ ಪ್ರದರ್ಶನ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿದೆ. ಹೊಸಪೇಟೆಯಲ್ಲಿ ಮೊದಲ ಪ್ರದರ್ಶನ ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾಗಿದೆ. ಬೆಂಗಳೂರಿನ 21 ಮಲ್ಟಿಪ್ಲೆಕ್ಸ್ ಗಳಲ್ಲಿ ಇಂದು ನಿನ್ನಿಂದಲೇ ಚಿತ್ರ ಒಟ್ಟು 103 ಪ್ರದರ್ಶನ ಕಾಣಲಿದೆ.

ಚಿತ್ರ ವೀಕ್ಷಿಸುತ್ತಿರುವ ಅಭಿಮಾನಿಗಳು ಚಿತ್ರದ ಕಥೆ, ಮೇಕಿಂಗ್, ಸಾಹಸ ದೃಶ್ಯಗಳು, ನಟನೆಯ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಟ್ವೀಟ್ ಮೂಲಕ ಹರಿಸುತ್ತಿದ್ದಾರೆ.

ಟ್ವಿಟ್ಟಿಗರು ಏನಂತಾರೆ? ಸ್ಲೈಡ್ ನೋಡಿ..

ಐದಕ್ಕೆ ನಾಲ್ಕು ಮಾರ್ಕ್

ಗುಡ್ ಸ್ಕ್ರಿಪ್ಟ್, ನವಿರಾದ ಪ್ರೇಮ ಕಥೆ, ಅಪ್ಪು ವಿನ್ನರ್ ಎಂದು ಗಂಧದಗುಡಿ ಐದಕ್ಕೆ ನಾಲ್ಕು ಮಾರ್ಕ್ ನೀಡಿದೆ.

ಪಾಸಿಟಿವ್ ರಿವಿವ್

ಎಲ್ಲಾ ಕಡೆಯಿಂದ ಚಿತ್ರದ ಬಗ್ಗೆ ಪಾಸಿಟಿವ್ ರಿವಿವ್ ಬರುತ್ತಿದೆ ಎಂದು ಗಾಂಧಿನಗರ ಟ್ವೀಟ್ ಮಾಡಿದೆ.

ಮೊದಲಾರ್ಧ ತುಂಬಾ ಚೆನ್ನಾಗಿದೆ

ಚಿತ್ರದ ಮೊದಲಾರ್ಧ ಎಲ್ಲೂ ಬೋರ್ ಹೊಡೆಸದೆ ಚೆನ್ನಾಗಿ ಮೂಡಿ ಬಂದಿದೆ.

ಸಿಂಪಲ್ ಲವ್ ಸ್ಟೋರಿ

ಚಿತ್ರದ ಕಥೆ ಸಿಂಪಲ್ ಲವ್ ಸ್ಟೋರಿ. ಹಾಡು, ಸಾಹಸ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಚಂದನವನ ಟ್ವೀಟ್ ಮಾಡಿದೆ.

ಮೈಂಡ್ ಬ್ಲೋಯಿಂಗ್ ಟ್ವಿಸ್ಟ್

ಗುಡ್ ಸ್ಕ್ರಿಪ್ಟ್, ಇಂಟರ್ವಲ್ ನಲ್ಲಿ ಚಿತ್ರ ಉತ್ತಮ ಟ್ವಿಸ್ಟ್ ಪಡೆಯುತ್ತೆ ಎಂದು ಗಂಧದ ಗುಡಿ ಟ್ವೀಟ್ ಮಾಡಿದೆ.

ಫೈನಲ್ ರಿಪೋರ್ಟ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಎರಿಕಾ ಫೆರ್ನಾಂಡಿಸ್ ನಟನೆ ಚೆನ್ನಾಗಿದೆ ಎಂದು ಸಿನಿಲೋಕ ಟ್ವೀಟ್ ಮಾಡಿದೆ.

ಚಿತ್ರದಲ್ಲಿ ಎಲ್ಲಾ ಇದೆ

ನಿನ್ನಿಂದಲೇ ಚಿತ್ರದಲ್ಲಿ ಎಲ್ಲಾ ಇದೆ. ಉತ್ತಮ ಕಥೆ, ಸಂಭಾಷಣೆ, ಹಾಸ್ಯ, ಸ್ಟಂಟ್ ಸನ್ನಿವೇಶಗಳು ಚೆನ್ನಾಗಿದೆ ಎಂದು ಕಾರ್ನರ್ ಸೀಟ್ ಟ್ವೀಟ್ ಮಾಡಿದೆ.

ಪ್ರಿಯಾಮಣಿ ವಿಶ್ ಮಾಡಿದ್ರು

ನನ್ನ ಆಪ್ತ ಸ್ನೇಹಿತ ಪುನೀತ್ ರಾಜಕುಮಾರ್ ಅವರಿಗೆ ನಿನ್ನಿಂದಲೇ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಪ್ರಿಯಾಮಣಿ ವಿಶ್ ಮಾಡಿದ್ದಾರೆ.

ಉತ್ತಮ ಚಿತ್ರ ಡೋಂಟ್ ಮಿಸ್ ಇಟ್

ಉತ್ತಮ ಚಿತ್ರ ಇದನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ದೇವ್ ಆನಂದ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅಪ್ಪು ಈಸ್ ಎ ವಿನ್ನರ್

ಉತ್ತಮ ಚಿತ್ರಕಥೆಯನ್ನು ನಿನ್ನಿಂದಲೇ ಚಿತ್ರ ಹೊಂದಿದೆ. ಅಪ್ಪು ಈಸ್ ಎ ವಿನ್ನರ್ ಎಂದು ಶ್ರೀವಾಣಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Puneeth Rajkumar starer Ninindale movie Tweet review.
Please Wait while comments are loading...