twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಗುಡ್‌ ಬೈ ಹೇಳಿ ನ್ಯೂಜಿಲ್ಯಾಂಡ್‌ನಲ್ಲಿ ಬಾತ್‌ ರೂಮ್ ಕ್ಲೀನ್ ಮಾಡ್ತಿದ್ರು ಅಬ್ಬಾಸ್

    |

    ದಕ್ಷಿಣ ಭಾರತದ ಸುಂದರ ನಟ ಅಬ್ಬಾಸ್. 'ಕಾದಲ್ ದೇಸಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟನಿಗೆ ಮೊದಲ ಸಿನಿಮಾದಲ್ಲಿ ಭರ್ಜರಿ ಸಕ್ಸಸ್ ಸಿಕ್ಕಿತ್ತು. ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಟನಾಗಿ ಹೊರಹೊಮ್ಮಿದ್ದರು.

    ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಸುಮಾರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1996ರಲ್ಲಿ ಸಿನಿ ಜರ್ನಿ ಆರಂಭಿಸಿದ್ದ ಅಬ್ಬಾಸ್ ಕನ್ನಡದಲ್ಲಿ 'ಶಾಂತಿ ಶಾಂತಿ ಶಾಂತಿ', 'ಹೆಲೋ', 'ಅಪ್ಪು ಅಂಡ್ ಪಪ್ಪು' ಹಾಗೂ 'ಸವಾರಿ 2' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

    "ಯಾರ್ ಮಗ ಅವ್ರು, ನಟನೆ ಬಗ್ಗೆ ದೂಸ್ರಾ ಮಾತಿಲ್ಲ, KGF, ಕಾಂತಾರ ನಂತರ ವೇದ": ತಮಿಳು ಪ್ರೇಕ್ಷಕರು ಹೇಳಿದಿಷ್ಟು!

    2015ರಲ್ಲಿ 'ಪಚಕ್ಕಲಂ' ಅನ್ನೋ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದೆ ಕೊನೆ. ಆ ಸಿನಿಮಾ ಬಳಿಕ ಚಿತ್ರರಂಗದಿಂದ ಗಾಯಬ್ ಆಗಿದ್ದರು. ಅಬ್ಬಾಸ್ ಎಲ್ಲಿ ಹೋದರು? ಏನು ಮಾಡುತ್ತಿದ್ದಾರೆ ಅನ್ನೋ ಸುಳಿವು ಇರಲಿಲ್ಲ. ಸದ್ಯ ಅಬ್ಬಾಸ್ ಸಿನಿಮಾಗೆ ಗುಡ್‌ ಬೈ ಹೇಳಿ ನ್ಯೂಜಿಲ್ಯಾಂಡ್‌ನ ಆಕ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಏನೆಲ್ಲಾ ಕೆಲಸ ಮಾಡಿದ್ರು ಅನ್ನೋದನ್ನು ದ ಫೆಡರಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

    'ಸಾಮಾನ್ಯ ಜೀವನ ನಡೆಸಲು ಪ್ರಯತ್ನ ಪಟ್ಟೆ'

    'ಸಾಮಾನ್ಯ ಜೀವನ ನಡೆಸಲು ಪ್ರಯತ್ನ ಪಟ್ಟೆ'

    "ನಾನು ಸಾಮಾನ್ಯ ಜೀವನ ನಡೆಸಲು ಪ್ರಯತ್ನ ಪಡುತ್ತಿದ್ದೆ. ಸಾಮಾನ್ಯ ಜೀವನ ಹೇಗಿದೆ ಅಂತ ಹೇಳಲು ಬಯಸಿದ್ದೆ. ಬೇರೆ ದಾರಿಯಲ್ಲಿ ನನ್ನ ಮಕ್ಕಳು ಬೆಳೆಯಬೇಕಿತ್ತು. ನಾನೀಗ ನ್ಯೂಜಿಲಾಂಡ್‌ನ ಅಕ್‌ಲ್ಯಾಂಡ್‌ನಲ್ಲಿ ಇದ್ದೇನೆ . ಬೇರೆ ದೇಶಗಳಿಗೆ ಹೋಲಿಸಿದರೆ, ಇಲ್ಲಿ ತುಂಬಾ ಜನ ಭಾರತೀಯರು ಇದ್ದಾರೆ. ಆದರೆ ಅಷ್ಟೊಂದು ಇಲ್ಲ. ನನ್ನ ಆಹಂ ಹಾಗೂ ಆಕ್ರೋಶಗಳನ್ನು ಕಡಿಮೆ ಮಾಡಿಕೊಂಡು ಹಂಬಲ್ ಮನುಷ್ಯನಾಗಲು ಸಹಕಾರಿಯಾಗಿದೆ." ಎಂದು ಅಬ್ಬಾಸ್ ಹೇಳಿದ್ದಾರೆ.

    'ಈ ಊರು ನನಗೆ ತುಂಬಾನೇ ಇಷ್ಟ ಆಗಿತ್ತು'

    'ಈ ಊರು ನನಗೆ ತುಂಬಾನೇ ಇಷ್ಟ ಆಗಿತ್ತು'

    "ನಾನು ನನ್ನ ಸಂಬಂಧಿಯ ಮದುವೆಗೆ ನ್ಯೂಜಿಲ್ಯಾಂಡ್‌ಗೆ ಬಂದಿದ್ದೆ. ಇದು ನನಗೆ ಬೆಂಗಳೂರನ್ನು ನೆನಪಿಸಿತ್ತು. ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳಿಲ್ಲ. ಭಾರತದಲ್ಲಿ ಇರುವಂತೆ ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಇಲ್ಲದೆ ಇರುವುದರಿಂದ ನನ್ನ ಬೈಕ್ ರಸ್ತೆಗೆ ತರಬಹುದು ಎಂದುಕೊಂಡೆ. ಹೀಗಾಗಿ 2014ರಲ್ಲಿ ನಾನು ಇಲ್ಲಿಗೆ ಬಂದು ಬಿಟ್ಟೆ. ಚೆನ್ನೈನಲ್ಲಿ ನನ್ನ ಬ್ಯುಸಿನೆಸ್‌ ಅನ್ನು ಮುಚ್ಚಿ, ನನ್ನ ಆಸ್ತಿಯನ್ನೆಲ್ಲಾ ಮಾರಿ ಇಲ್ಲಿಗೆ ಬಂದೆ. ನನಗೆ ಈ ಊರು ತುಂಬಾನೇ ಇಷ್ಟ ಆಗಿಬಿಡ್ತು."

    'ಇಲ್ಲಿ ನಾನು ಬಾತ್‌ರೂಮ್ ಕ್ಲೀನ್ ಮಾಡಿದ್ದೆ'

    'ಇಲ್ಲಿ ನಾನು ಬಾತ್‌ರೂಮ್ ಕ್ಲೀನ್ ಮಾಡಿದ್ದೆ'

    "ನಾನು ಇಲ್ಲಿಗೆ ಬಂದಾಗ ಏನು ಮಾಡಬೇಕು ಅಂತಾನೇ ಗೊತ್ತಿರಲಿಲ್ಲ. ನಾನು ಇಲ್ಲಿ ಬ್ಯುಸಿನೆಸ್‌ ಅನ್ನು ಶುರು ಮಾಡಿದ್ದೆ. ಆದರೆ ನನ್ನ ಪತ್ನಿಗೆ ಅವರ ಡಿಸೈನರ್ ಬ್ಯುಸಿನೆಸ್‌ ಅನ್ನು ಮುಂದುವರೆಸಲು ಇಷ್ಟವಿರಲಿಲ್ಲ. ಹೀಗಾಗಿ ನಾವು ಇದೂವರೆಗೂ ಮಾಡೋಕೆ ಸಾಧ್ಯ ಆಗದೇ ಇರೋದನ್ನು ಮಾಡೋಣ ಎಂದುಕೊಂಡೆ. ನಾನು ಪ್ರೆಟ್ರೋಲ್ ಬಂಕ್‌ನಲ್ಲಿ 10 ದಿನ ಕೆಲಸ ಮಾಡಿದೆ. ಅದು ನನಗೆ ಇಷ್ಟ ಆಗಲಿಲ್ಲ. ಅದೇ ಪೆಟ್ರೋಲ್‌ ಬಂಕ್‌ನಲ್ಲಿ ನಾನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದೆ. ಅಲ್ಲೇ ಬಾತ್‌ರೂಮ್‌ ಕ್ಲೀನ್ ಮಾಡಿದೆ. ಆದರೆ, ಅದ್ಯಾವುದೂ ನನಗೆ ಇಷ್ಟ ಆಗಿಲ್ಲ. ಹಾಗಂತ ನಾನು ಆ ಕೆಲಸಕ್ಕೆ ಅಗೌರವ ಕೊಟ್ಟಿಲ್ಲ. ಆದರೆ, ನಾನು ಎಂಜಾಯ್ ಮಾಡಿಲ್ಲ ಅಷ್ಟೇ."

    ಕೋಚಿಂಗ್ ನೀಡುತ್ತಿದ್ದಾರೆ ಅಬ್ಬಾಸ್

    ಕೋಚಿಂಗ್ ನೀಡುತ್ತಿದ್ದಾರೆ ಅಬ್ಬಾಸ್

    "ಇಲ್ಲಿ ಮರದ ಮನೆಗಳನ್ನು ಕಟ್ಟುತ್ತಾರೆ. ಈ ವೇಳೆ ಇನ್ಸುಲೇಷನ್ ಹಾಕುತ್ತಾರೆ. ಆ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿದೆ. ಅಲ್ಲಿವರೆಗೂ ನಾನು ಆ ಕೆಲಸವನ್ನು ಮಾಡಿರಲಿಲ್ಲ. ಅದು ನನಗೆ ಹೊಸ ಕೆಲಸ ಆಗಿತ್ತು. ಆ ಮೇಲೆ ನಾನು ಮೋಟರ್ ಸೈಕಲ್ ಮ್ಯಾಕಾನಿಕ್ ಆಗಿದ್ದೆ. ಆ ಬಳಿಕ ಕಾಲ್‌ ಸೆಂಟರ್‌ನಲ್ಲಿ ಕಸ್ಟಮರ್ ಸೇಲ್ಸ್ ಏಜೆಂಟ್ ಆಗಿ ಕೆಲಸ ಮಾಡಿದೆ. ಈಗ ಅದೇ ಕಂಪನಿಯಲ್ಲಿ ಅನಲಿಸ್ಟ್ ಆಗಿ ಕಸ್ಟಮರ್ ಜೊತೆ ಹೇಗೆ ಕೆಲಸ ಮಾಡಬೇಕು ಅಂತ ಕೋಚಿಂಗ್ ಕೊಡುತ್ತಿದ್ದೇನೆ."

    English summary
    Abbas, a Tamil actor, had cleaned bathrooms in New Zealand, Know More.
    Sunday, December 25, 2022, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X