Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿಯ ಅಂಗಾಂಗ ಸ್ಪರ್ಶಿಸಿದ ಯುವಕ: ಹಳದಿ ಬಣ್ಣದ ಡ್ರೆಸ್ ಧರಿಸೋದನ್ನೇ ಬಿಟ್ಟಿದ್ದ ಐಶ್ವರ್ಯಾ!
ಭಾರತದಲ್ಲಿ ಮೀಟೂ ಅಭಿಯಾನ ಆರಂಭ ಆಗುತ್ತಿದ್ದಂತೆ ಅದೆಷ್ಟೋ ನಟಿಯರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು. ಅಲ್ಲಿಂದ ನಟಿಯರು ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತಾಡಲು ಆರಂಭಿಸಿದ್ದಾರೆ.
ಇತ್ತೀಚೆಗೆಷ್ಟೇ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯನ್ ಸೆಲ್ವನ್'ನಲ್ಲಿ ನಟಿಸಿದ್ದ ಐಶ್ವರ್ಯಾ ಲಕ್ಷ್ಮಿ. ಸದ್ಯ ಈ ನಾಯಕ ನಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಗೂ ಇಂತಹದ್ದೇ ಒಂದು ಅನುಭವ ಆಗಿತ್ತು. ಅದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಸೂರ್ಯ
ಮೇಲೆ
ಮುನಿಸಿಕೊಂಡ್ರಾ
ನಿರ್ದೇಶಕ
ಬಾಲ
?
'ವನಂಗಾನ್'
ಚಿತ್ರದಿಂದ
ಸೂರ್ಯ
ಕೈಬಿಟ್ಟ
ನಿರ್ದೇಶಕ
ಬಾಲ!
ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿರೋ ಐಶ್ವರ್ಯಾ ಲಕ್ಷ್ಮಿ ಖಾಸಗಿ ಅಂಗಾಂಗಗಳನ್ನು ಯುವಕನೊಬ್ಬ ಸ್ಪರ್ಶ ಮಾಡಿದ್ದ. ಅಂದು ನಡೆದ ಘಟನೆಯಿಂದ ಅವರ ಮನಸ್ಸಿನ ಮೇಲಾದ ಒತ್ತಡವನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ನಟಿ ಖಾಸಗಿ ಅಂಗ ಸ್ಪರ್ಶಿಸಿದ್ದ ಯುವಕ
ಐಶ್ವರ್ಯಾ ಲಕ್ಷ್ಮಿ ಸದ್ಯ ತಮ್ಮ ಹೊಸ ಸಿನಿಮಾ 'ಗಟ್ಟ ಕುಸ್ತಿ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 2ರಂದು ಈ ಸಿನಿಮಾ ಎಲ್ಲಾ ಕಡೆ ಬಿಡುಗಡೆಯಾಗಿದೆ. ಸದ್ಯ ಈ ಸಿನಿಮಾದಲ್ಲಿ ಪ್ರಚಾರದಲ್ಲಿರುವ ನಟಿ, ಸಂದರ್ಶನವೊಂದರಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಚಿಕ್ಕಳಿದ್ದಾಗ ಗುರುವಾಯೂರು ದೇವಸ್ಥಾನದಲ್ಲಿ ಯುವಕನೊಬ್ಬ ಆಕೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶ ಮಾಡಿದ್ದನು. ಆ ಘಟನೆಯ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದನ್ನು ವಿವರಿಸಿದ್ದಾರೆ.

ಐಶ್ವರ್ಯಾ ಪ್ರತಿಕ್ರಿಯೆ ಏನಾಗಿತ್ತು?
ದಕ್ಷಿಣ ಭಾರತದ ನಟಿ ಐಶ್ವರ್ಯಾ ಲಕ್ಷ್ಮಿ ಚಿಕ್ಕವಳಿದ್ದಾಗ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಅಂದು ಘಟನೆ ನಡೆದ ತಕ್ಷಣವೇ ಪ್ರತಿಕ್ರಿಯಿಸಿದ್ದೆ. ಆದರೆ, ಇನ್ನೂ ಚಿಕ್ಕವಳಾಗಿದ್ದಿದ್ದರಿಂದ ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿದಿರಲಿಲ್ಲ. ಆದರೆ, ಈಗ ಇಂತಹ ಘಟನೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ಗೊತ್ತಿದೆ. ಅಲ್ಲದೆ ಇತ್ತೀಚೆಗೆ ಇಂತಹ ಘಟನೆಗಳು ನಡೆದಿಲ್ಲ." ಎಂದು ಐಶ್ವರ್ಯಾ ಲಕ್ಷ್ಮಿ ಹೇಳಿದ್ದಾರೆ.

ಹಳದಿ ಬಣ್ಣದ ಬಟ್ಟೆ ಅಂದ್ರೆ ಭಯ
ಗುರುವಾಯೂರಿನ ದೇವಸ್ಥಾನದಲ್ಲಿ ನಡೆದ ಘಟನೆ ವೇಳೆ ಐಶ್ವರ್ಯಾ ಸ್ಟ್ರಾಬೆರಿ ಮುದ್ರಣವಿರುವ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಅಲ್ಲಿಂದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಕೇಡು ಸಂಭವಿಸುತ್ತೆ ಎಂದು ಭಾವಿಸಿದ್ದರಂತೆ. ಹೀಗಾಗಿ ಹಳದಿ ಬಣ್ಣದ ಬಟ್ಟೆ ಧರಿಸಲು ಭಯ ಪಡುತ್ತಿದ್ದಂತೆ. ಆದ್ರೀಗ ಹಾಗಿಲ್ಲ. ಕಾಲ ಬದಲಾಗಿದ್ದು, ಮೊದಲಿನಂತೆ ಹಳದಿ ಬಣ್ಣದ ಬಟ್ಟೆಯನ್ನು ಧರಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಸಿನಿಮಾಗಳಲ್ಲಿ ಫುಲ್ ಬ್ಯುಸಿ
ನಟಿ ಐಶ್ವರ್ಯಾ ಲಕ್ಷ್ಮಿ ಸದ್ಯ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈಗಾಗಲೇ ಸೂಪರ್ ಹಿಟ್ ಸಿನಿಮಾ 'ಪೊನ್ನಿಯನ್ ಸೆಲ್ವನ್' ರಿಲೀಸ್ ಆಗಿದೆ. ಹಾಗೇ 'ಪೊನ್ನಿಯನ್ ಸೆಲ್ವನ್ 2'ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 2 ರಂದು ವಿಷ್ಣು ವಿಶಾಲ್ ಜೊತೆ ನಟಿಸಿದ 'ಗಟ್ಟ ಕುಸ್ತಿ' ಸಿನಿಮಾ ರಿಲೀಸ್ ಆಗಿದೆ. 'ಕ್ರಿಸ್ಟೋಫರ್', 'ಕಿಂಗ್ ಆಫ್ ಕೋಬ್ರಾ' ಅಂತಹ ಸಿನಿಮಾಗಳು ಕೂಡ ನಿರ್ಮಾಣ ಹಂತದಲ್ಲಿವೆ.