For Quick Alerts
  ALLOW NOTIFICATIONS  
  For Daily Alerts

  ತಮಿಳಲ್ಲಿ ಮಾತಾಡಿ ಎಂದು ಮೋದಿಯನ್ನು ಟೀಕಿಸಿದ ಖುಷ್ಬೂ ಒಬ್ಬ 'ಜೋಕರ್' ಎಂದ ನಟಿ

  |

  ನಟಿ ಖುಷ್ಬೂ ಸುಂದರ್ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಮ್ಮ ಸಿದ್ಧಾಂತ, ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಕಿಡಿಕಾರುತ್ತಿರುತ್ತಾರೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ನೀತಿಗಳನ್ನು ಅವರು ಟೀಕಿಸುತ್ತಿರುತ್ತಾರೆ.

  Roberrt Cinema On Prime?ರಾಬರ್ಟ್ ಸಿನಿಮಾಗೆ ಕೋಟಿ ಕೋಟಿ ಆಫರ್ ಕೊಟ್ರು ಬೇಡ ಎಂದ ನಿರ್ಮಾಪಕ! | Robert | Darshan

  ನಟಿಯಾಗಿ ಅಪಾರ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಸಂಪಾದಿಸಿರುವ ಖುಷ್ಬೂ, ತಮ್ಮ ರಾಜಕೀಯ ನಿಲುವಿನ ಕಾರಣಕ್ಕೆ ವಿರೋಧಿಗಳನ್ನೂ ಗಳಿಸಿದ್ದಾರೆ. ಖುಷ್ಬೂ ಅವರ ಹೇಳಿಕೆಗಳಿಗೆ ಅವರ ರಾಜಕೀಯ ವಿರೋಧಿಗಳು ಪ್ರತಿ ವಾಗ್ದಾಳಿ ನಡೆಸುವುದು ಸಹ ಸಾಮಾನ್ಯ. ಚಿತ್ರರಂಗದಲ್ಲಿಯೂ ಖುಷ್ಬೂ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವವರಿದ್ದಾರೆ. ಹೀಗೆ ವಿಭಿನ್ನ ರಾಜಕೀಯ ಧೋರಣೆ ಹೊಂದಿರುವ ನಟಿಯರ ನಡುವಿನ ತಿಕ್ಕಾಟ ಜಗಜ್ಜಾಹೀರಾಗಿದೆ. ಮುಂದೆ ಓದಿ...

  ಅಡುಗೆ ಮಾಡಿಕೊಂಡು ತಿನ್ನಿ, ಆದರೆ ಅದನ್ನು ಪ್ರದರ್ಶಿಸಬೇಡಿ: ನೆಟ್ಟಿಗರ ಮೇಲೆ ಖುಷ್ಬೂ ಕಿಡಿ

  ಮುಂದೆ ಕಾದಿದೆ ತೆರಿಗೆ ಹೊರೆ

  ಮುಂದೆ ಕಾದಿದೆ ತೆರಿಗೆ ಹೊರೆ

  ಪ್ರಧಾನಿ ನರೇಂದ್ರ ಮೋದಿ ಮೇ 12ರಂದು ಮಾಡಿದ ಭಾಷಣವನ್ನು ಟೀಕಿಸಿದ್ದ ಖುಷ್ಬೂ, 'ಅಬ್ಬಾ, ಕೊನೆಗೂ ಒಂದು ಪ್ಯಾಕೇಜ್. ಜಿಡಿಪಿಯ ಶೇ 10ರಷ್ಟು... ತೆರಿಗೆಗಳು, ತೆರಿಗೆಗಳು ಹಾಗೂ ಮತ್ತಷ್ಟು ತೆರಿಗೆಗಳನ್ನು ಎದುರಿಸುವ ಸುದೀರ್ಘ ಹಾದಿಗೆ ಸಿದ್ಧರಾಗಿ. ಭವಿಷ್ಯದಲ್ಲಿ ಇನ್ನಷ್ಟು ಇದೆ ಕಾದು ನೋಡಿ' ಎಂದು 20 ಲಕ್ಷ ಕೋಟಿ ಕೋವಿಡ್ ಪರಿಹಾರ ಪ್ಯಾಕೇಜ್‌ಅನ್ನು ಲೇವಡಿ ಮಾಡಿದ್ದರು.

  ಇಳಯದಳಪತಿ ವಿಜಯ್ ಸಂಭಾವನೆ ರಿವೀಲ್ ಮಾಡಿದ ನಟಿ ಖುಷ್ಬೂ

  ತಮಿಳಿನಲ್ಲೇ ಮಾತಾಡಲಿ

  ತಮಿಳಿನಲ್ಲೇ ಮಾತಾಡಲಿ

  'ಮತ್ತೆ ಒಂದೇ ಒಂದು ಅನುಮಾನವಿದೆ. ನಾನು ತಮಿಳಿನಲ್ಲಿ ಏಕೆ ಬರೆಯುವುದಿಲ್ಲ ಎಂದು ಕೇಳುವವರಿಗಾಗಿ, ವಿದೂಷಕರರೇ, ಟ್ವಿಟ್ಟರ್ ಒಂದು ಅಂತಾರಾಷ್ಟ್ರೀಯ ಸಾಮಾಜಿಕ ವೇದಿಕೆ. ನಾನು ತಮಿಳಿನಲ್ಲಿಯೇ ಅದನ್ನು ಟೈಪ್ ಮಾಡಬೇಕು ಎಂದಾದರೆ ಪ್ರಧಾನಿ ಕೂಡ ತಮಿಳಿನಲ್ಲಿ ಮಾತ್ರವೇ ಮಾತಾಡಬೇಕು. ಏಕೆಂದರೆ ಅದು ಅತ್ಯಂತ ಹಳೆಯ ಭಾಷೆ. ಹಿಂದಿ ಏಕೆ?' ಎಂದು ಪ್ರಶ್ನಿಸಿದ್ದರು.

  ಖುಷ್ಬೂ ಒಬ್ಬ ಜೋಕರ್

  ಖುಷ್ಬೂ ಒಬ್ಬ ಜೋಕರ್

  ಖುಷ್ಬೂ ಅವರನ್ನು 'ಜೋಕರ್' ಎಂದು ನಟಿ, ಬಿಗ್ ಬಾಸ್ ಸ್ಪರ್ಧಿ ಗಾಯತ್ರಿ ರಘುರಾಮ್ ಲೇವಡಿ ಮಾಡಿದ್ದಾರೆ. 'ಜೋಕರ್. ನೀವು ತಮಿಳಿಗಿಂತ ಹೆಚ್ಚಾಗಿ ತಂಗ್ಲಿಷ್‌ನಲ್ಲಿಯೇ ಟೈಪ್ ಮಾಡುತ್ತೀರಿ. ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ತಂಗ್ಲಿಷ್ ಅಂತಾರಾಷ್ಟ್ರೀಯ ವೇದಿಕೆಯಲ್ಲ. ಪಪ್ಪು ಹೇಗೋ ಹಾಗೆಯೇ ಬೂ ಬೂ. ಪ್ರಧಾನಿ ಭಾಷಣ ಮಾಡಿದ್ದು ಇಡೀ ದೇಶಕ್ಕೆ, ತಮಿಳುನಾಡಿಗೆ ಮಾತ್ರವಲ್ಲ' ಎಂದು ಟೀಕಿಸಿದ್ದಾರೆ.

  ನಕಾರಾತ್ಮಕ ಟೀಕೆಗಳಿಂದ ಬೇಸತ್ತು ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ ಖ್ಯಾತ ನಟಿ

  ಕನ್ನಡದಲ್ಲಿ ನಟಿಸಿದ್ದ ಗಾಯತ್ರಿ

  ಕನ್ನಡದಲ್ಲಿ ನಟಿಸಿದ್ದ ಗಾಯತ್ರಿ

  ಗಾಯತ್ರಿ ರಘುರಾಮ್ ಕನ್ನಡದ 'ಮನಸೆಲ್ಲಾ ನೀನೇ' ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಜತೆ ನಾಯಕಿಯಾಗಿ ನಟಿಸಿದ್ದರು. ತಮಿಳಿನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅವರು 2018ರಲ್ಲಿ ತಮಿಳು ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಗಾಯತ್ರಿ ಮತ್ತು ಖುಷ್ಬೂ ನಡುವೆ ಉತ್ತಮ ಗೆಳೆತನವಿತ್ತು. ಆದರೆ ಗಾಯತ್ರಿ ಬಿಜೆಪಿ ಸೇರ್ಪಡೆಯಾದ ಬಳಿಕ ಇಬ್ಬರೂ ರಾಜಕೀಯ ವಿರೋಧಿಗಳಾಗಿ ಬದಲಾಗಿದ್ದಾರೆ.

  English summary
  Actress Gayathri Raghuram slams actress turned politician Khushbu Sundar for criticising PM Narendra Modi's COVID Package and called her Joker.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X