For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈ-ತ್ರಿಶಾಗೆ 'ನೀವು ಸ್ನೇಹಿತರಾಗಲು ಸಾಧ್ಯವಿಲ್ಲ' ಎಂದಿದ್ದ ಮಣಿರತ್ನಂ: ಯಾಕೆ?

  |

  ಭಾರತದ ಸುಪ್ರಸಿದ್ಧ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ 'ಪೊನ್ನಿಯಿನ್ ಸೆಲ್ವನ್ 2'. ದಸರಾ ಹಬ್ಬಕ್ಕೆ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸೆಪ್ಪೆಂಬರ್ 30ಕ್ಕೆ ಬಹುತಾರಾಗಣದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದಕ್ಕೆ ಸಜ್ಜಾಗಿ ನಿಂತಿದೆ.

  'ಪೊನ್ನಿಯಿನ್ ಸೆಲ್ವನ್ 1' ಸಿನಿಮಾದಲ್ಲಿ ಬಿಗ್ ಸ್ಟಾರ್‌ಕಾಸ್ಟ್ ಇದೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಂ, ತ್ರಿಶಾ ಕೃಷ್ಣನ್, ಕಾರ್ತಿ, ಐಶ್ವರ್ಯಾ ಲಕ್ಷ್ಮಿ, ಜಯಂ ರವಿ ಸೇರಿದಂತೆ ಬಹಳಷ್ಟು ಮಂದಿ 'ಪೊನ್ನಿಯಿನ್ ಸೆಲ್ವನ್ 1'ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದು ಖಚಿತ ಅನ್ನೋದು ಎಲ್ಲರ ನಿರೀಕ್ಷೆ. ಇನ್ನೊಂದು ಚಿತ್ರತಂಡ ಕೂಡ ಭರ್ಜರಿಯಾಗಿ ಪ್ರಚಾರವನ್ನು ಆರಂಭಿಸಿದೆ.

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

  ಸಿನಿಮಾ ಪ್ರಚಾರದ ವೇಳೆ ನಟಿ ತ್ರಿಶಾ ಕೊಟ್ಟ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ಹಾಗೂ ತ್ರಿಶಾ ಇಬ್ಬರಿಗೂ ಮಣಿರತ್ನ ದೂರ ಇರುವಂತೆ ಹೇಳಿದ್ದರಂತೆ. ಅಲ್ಲದೆ ಈ ಸಿನಿಮಾದಲ್ಲೂ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಮಣಿರತ್ನ ಇಬ್ಬರೂ ದೂರ ಇರಿ ಅಂತ ಹೇಳಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

   ಐಶ್ವರ್ಯಾ ರೈ-ತ್ರಿಶಾ ಇಬ್ಬರೂ ಸ್ನೇಹಿತರಲ್ಲವೇ?

  ಐಶ್ವರ್ಯಾ ರೈ-ತ್ರಿಶಾ ಇಬ್ಬರೂ ಸ್ನೇಹಿತರಲ್ಲವೇ?

  'ಪೊನ್ನಿಯಿನ್ ಸೆಲ್ವನ್ 1' ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ತ್ರಿಶಾ ನಟಿಸಿರೋ ಎರಡೂ ಪಾತ್ರಗಳೂ ಪ್ರಮುಖ. ಸಾಮಾನ್ಯವಾಗಿ ಎರಡು ಪ್ರಮುಖ ಪಾತ್ರಗಳ ಸಂಬಂಧವನ್ನು ನಿರ್ದೇಶಕರು ಗಟ್ಟಿ ಮಾಡಲು ಯತ್ನಿಸುತ್ತಾರೆ. ಆದರೆ, ಈ ಸಿನಿಮಾದಲ್ಲಿ ಮಣಿರತ್ನಂ ಐಶ್ವರ್ಯಾ ರೈ ಹಾಗೂ ತ್ರಿಶಾ ಇಬ್ಬರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಬದಲಿಗೆ ಇಬ್ಬರು ತೆರೆ ಹಿಂದೆನೂ ದೂರು ಇರಿ ಅಂತಲೇ ಹೇಳಿದ್ದರಂತೆ. ಈ ಮಾತನ್ನು ಸ್ವತ: ತ್ರಿಶಾ ಇತ್ತೀಚೆಗೆ ಪ್ರಚಾರದ ವೇಳೆ ಹೇಳಿಕೊಂಡಿದ್ದಾರೆ.

  'ಪೊನ್ನಿಯನ್ ಸೆಲ್ವನ್'ಗಾಗಿ ರಜನಿಕಾಂತ್, ಕಮಲ್ ಹಾಸನ್ ಸಮಾಗಮ!'ಪೊನ್ನಿಯನ್ ಸೆಲ್ವನ್'ಗಾಗಿ ರಜನಿಕಾಂತ್, ಕಮಲ್ ಹಾಸನ್ ಸಮಾಗಮ!

   'ನೀವು ಸ್ನೇಹಿತರಾಗಲು ಸಾಧ್ಯವಿಲ್ಲ'

  'ನೀವು ಸ್ನೇಹಿತರಾಗಲು ಸಾಧ್ಯವಿಲ್ಲ'

  'ಪೊನ್ನಿಯಿನ್ ಸೆಲ್ವನ್ 1' ಸಿನಿಮಾ ಪ್ರಚಾರದ ವೇಳೆ ತ್ರಿಶಾ ಮಣಿರತ್ನಂ ಕೊಟ್ಟಿದ್ದ ಸೂಚನೆಯನ್ನು ರಿವೀಲ್ ಮಾಡಿದ್ದಾರೆ. " ಐಶ್ವರ್ಯಾ ರೈ ಮತ್ತು ತ್ರಿಶಾ ಕೃಷ್ಣನ್ ಈ ಸಿನಿಮಾದಲ್ಲಿ ಕೆಲಸ ಮಾಡಿರಲಿಲ್ಲ. ನಾವು ನಂದಿನಿ ಮತ್ತು ಕುಂದವೈ ಆಗಿದ್ವಿ. ಮಣಿರತ್ನಂ ಆಗಲೇ ಹೇಳಿದ್ದರು. ನೀವು ಸ್ನೇಹಿತರಾಗಿರಲು ಸಾಧ್ಯವಿಲ್ಲ. ಇಲ್ಲಿ ನೀವಿಬ್ಬರೂ ನಂದಿನಿ ಹಾಗೂ ಕುಂದವೈ. ಇಬ್ಬರೂ ಸ್ನೇಹಿತರಾಗಿರುವುದಕ್ಕೆ ಸಾಧ್ಯವೇ ಇಲ್ಲ." ಎಂದು ಮಣಿರತ್ನಂ ಹೇಳಿದ್ದನ್ನು ತ್ರಿಶಾ ರಿವೀಲ್ ಮಾಡಿದ್ದಾರೆ.

   ಇಬ್ಬರ ನಡುವೆ ದ್ವೇಷವಿದೆ!

  ಇಬ್ಬರ ನಡುವೆ ದ್ವೇಷವಿದೆ!

  ನಿರ್ದೇಶಕ ಮಣಿರತ್ನಂ ಇಬ್ಬರಿಗೂ ಹೇಗೆ ಹೇಳುವುದಕ್ಕೊಂದು ಕಾರಣವಿತ್ತು. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ರಾಣಿ ನಂದಿನಿಯಾಗಿಯೂ, ತ್ರಿಶಾ ಕೃಷ್ಣನ್ ರಾಣಿ ಕುಂದವೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಥೆಯ ಪ್ರಕಾರ, ಎರಡೂ ಪಾತ್ರಗಳಿಗೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ತೆರೆಮೇಲೆ ಈ ಎರಡೂ ಪಾತ್ರಗಳೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇ ಇಲ್ವಂತೆ. ಈ ಕಾರಣಕ್ಕೆ ತೆರೆ ಹಿಂದೆನೂ ಇಬ್ಬರಿಗೂ ದೂರವಿರುವಂತೆ ಮಣಿರತ್ನಂ ಸೂಚನೆ ನೀಡಿದ್ದರಂತೆ.

  'ಪೊನ್ನಿಯನ್ ಸೆಲ್ವನ್'ನಲ್ಲಿ ವಿಕ್ರಮ್, ಕಾರ್ತಿ ಮತ್ತು ಐಶ್ವರ್ಯಾಗಿಂತ ಹೆಚ್ಚು ಸಂಭಾವನೆ ಪಡೆದಿದ್ಯಾರು?'ಪೊನ್ನಿಯನ್ ಸೆಲ್ವನ್'ನಲ್ಲಿ ವಿಕ್ರಮ್, ಕಾರ್ತಿ ಮತ್ತು ಐಶ್ವರ್ಯಾಗಿಂತ ಹೆಚ್ಚು ಸಂಭಾವನೆ ಪಡೆದಿದ್ಯಾರು?

   ಮೊದಲ ದಿನವೇ ತ್ರಿಶಾಗೆ ಗಾಬರಿ

  ಮೊದಲ ದಿನವೇ ತ್ರಿಶಾಗೆ ಗಾಬರಿ

  ಇದೇ ವೇಳೆ ತ್ರಿಶಾ ಮೊದಲ ದಿನದ ಅನುಭವವನ್ನೂ ಹಂಚಿಕೊಂಡಿದ್ದಾರೆ. " ಮೊದಲ ದಿನ ನನಗೆ ಗಾಬರಿಯಾಗಿತ್ತು. ಆಸ್ಥಾನದಲ್ಲಿ 10 ಮಂದಿ ಪುರುಷರ ಮುಂದೆ ಡೈಲಾಗ್ ಹೇಳುವ ದೃಶ್ಯವಿತ್ತು. ಕಥೆ ನನ್ನ ಪಾತ್ರ ಕುಂದವೈ ಯಶಸ್ಸಿನ ಉತ್ತುಂಗದಲ್ಲಿದ್ದಳು. ಕುಂದವೈ ಪಾತ್ರ ಹೇಗಿದೆಯೋ ನಾನು ಹಾಗೇ ಇದ್ದೇನೆ. ಕುಂದವೈ ಪಾತ್ರದಲ್ಲಿ ಚಿಕ್ಕ ಪ್ರಮಾಣದಲ್ಲಿ ತ್ರಿಶಾ ಕೂಡ ಇದ್ದಾರೆ ಅಂತ ಹೇಳಬಹುದು" ಎಂದು ಪಾತ್ರದ ಬಗ್ಗೆ ತ್ರಿಶಾ ವಿವರಿಸಿದ್ದಾರೆ.

  English summary
  Aishwarya Rai Bachchan And Trisha Not A Friends In Ponniyin Selvan 1, Know More.
  Saturday, September 24, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X