Don't Miss!
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ವಿಜಯ್ ನಂ 1 ಸ್ಟಾರ್ ಹೆಚ್ಚು ಥಿಯೇಟರ್ ಕೊಡಿ" ಎಂದು ದಿಲ್ ರಾಜು: ಅಜಿತ್ ಫ್ಯಾನ್ಸ್ ಅಕ್ರೋಶ!
2023ಕ್ಕೆ ತಮಿಳುನಾಡಿನ ಬಾಕ್ಸಾಫೀಸ್‌ನಲ್ಲಿ ಮಹಾಯುದ್ಧವೇ ನಡೆಯಲಿದೆ. ದಳಪತಿ ವಿಜಯ್ ಸಿನಿಮಾ 'ವಾರಿಸು' ಹಾಗೂ ಅಜಿತ್ ಸಿನಿಮಾ 'ಥುನಿವು' ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಇಬ್ಬರು ಸೂಪರ್‌ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಂ 1 ಸ್ಥಾನಕ್ಕಾಗಿ ಫೈಟ್ ಮಾಡೋದು ಪಕ್ಕಾ ಆಗಿದೆ.
ತೆಲುಗಿನ ಸ್ಟಾರ್ ನಿರ್ಮಾಪಕ ದಿಲ್ ರಾಜು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದಳಪತಿ ವಿಜಯ್ ಅಭಿನಯದ 'ವಾರಿಸು' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸಂಕ್ರಾಂತಿ ಹಬ್ಬಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಅಜಿತ್ ಸಿನಿಮಾ 'ಥುನಿವು' ಕೂಡ ಇದೇ ವೇಳೆ ರಿಲೀಸ್ ಆಗುತ್ತಿರೋದ್ರಿಂದ ಥಿಯೇಟರ್‌ಗಾಗಿ ಪೈಪೋಟಿ ಹೆಚ್ಚಾಗಿದೆ.
'ವಾರಿಸು'
ಆಡಿಯೋ
ಲಾಂಚ್:
ನಿರ್ಮಾಪಕರ
ವಿರುದ್ಧ
ಸಿಡಿದೆದ್ದ
ವಿಜಯ್
ಅಭಿಮಾನಿಗಳು
ದಳಪತಿ ವಿಜಯ್ ಹೆಸರನ್ನು ಮುಂದಿಟ್ಟುಕೊಂಡು ದಿಲ್ ರಾಜ್ ಹೆಚ್ಚು ಥಿಯೇಟರ್‌ಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ಅಜಿತ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಷ್ಟಕ್ಕೂ ದಿಲ್ ರಾಜು ವಿರುದ್ಧ ಅಜಿತ್ ಫ್ಯಾನ್ಸ್ ಕೋಪಕೊಳ್ಳಲು ಅಸಲಿ ಕಾರಣವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ವಾರಿಸು' Vs 'ಥುನಿವು'
ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಬಳಿಕ 'ವಾರಿಸು' ರಿಲೀಸ್‌ಗೆ ರೆಡಿಯಾಗಿದೆ. ದಿಲ್ ರಾಜು ಸಿನಿಮಾವನ್ನು ನಿರ್ಮಾಣ ಮಾಡಿದ್ರೆ, ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ದಳಪತಿ ವಿಜಯ್ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿವೆ. ಇದೇ ವೇಳೆ ತಮಿಳಿನ ಮತ್ತೊಬ್ಬ ಸೂಪರ್‌ಸ್ಟಾರ್ ಅಜಿತ್ ಸಿನಿಮಾ 'ಥುನಿವು' ಕೂಡ ಬಿಡುಗಡೆಯಾಗುತ್ತಿರೋದ್ರಿಂದ ಇಬ್ಬರೂ ಅಭಿಮಾನಿಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಹೊತ್ತಲ್ಲಿ ದಿಲ್ ರಾಜು ಹೇಳಿಕೆಗಳು ಅಜಿತ್ ಅಭಿಮಾನಿಗಳ ನಿದ್ದೆ ಕೆಡಿಸುತ್ತಿವೆ.

ಹೆಚ್ಚು ಥಿಯೇಟರ್‌ಗೆ ಬೇಡಿಕೆ ಇಟ್ಟ ವಿಜಯ್
ಇಬ್ಬರು ಸೂಪರ್‌ಸ್ಟಾರ್ ಸಿನಿಮಾಗಳು ಒಟ್ಟಿಗೆ ರಿಲೀಸ್‌ಗೆ ರೆಡಿಯಾದ್ರೆ, ಫ್ಯಾನ್ಸ್ ಅಲರ್ಟ್ ಆಗುತ್ತಾರೆ. ಈ ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆದರೂ, ಫ್ಯಾನ್ಸ್ ವಾರ್‌ಗೆ ಕಾರಣ ಆಗುತ್ತೆ. ಇದು ಗೊತ್ತಿದ್ದರೂ, ದಳಪತಿ ವಿಜಯ್ ನಂ 1 ಸ್ಟಾರ್ ಅದಕ್ಕೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಿ ಅಂತ ದಿಲ್ ರಾಜು ಬ್ಯುಸಿನೆಸ್ ಮಾಡುತ್ತಿದ್ದಾರೆ. ಹೀಗಾಗಿ ವಿತರಕರಿಗೆ ಶೇ.20ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದಾರಂತೆ.

ದಿಲ್ ರಾಜು ವಿರುದ್ಧ ಅಜಿತ್ ಫ್ಯಾನ್ ಗರಂ
ದಿಲ್ ರಾಜು ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ 'ವಾರಿಸು' ಸಿನಿಮಾ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ವಿಜಯ್ ನಂ 1 ಸ್ಟಾರ್ ಅಂತ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಅಜಿತ್ ಅಭಿಮಾನಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ದಿಲ್ ರಾಜು ವಿರುದ್ಧ ಕಿಡಿಕಾರುತ್ತಿದ್ದಾರೆ.

ವಿಜಯ್ ಅಜಿತ್ ಫ್ಯಾನ್ಸ್ ವಾರ್?
ದಳಪತಿ ವಿಜಯ್ ಸಿನಿಮಾ 'ವಾರಿಸು' ಎರಡು ಭಾಷೆಗಳಲ್ಲಿ ನಿರ್ಮಾಣ ಆಗಿದೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಎರಡೂ ಭಾಷೆಯಲ್ಲೂ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ. ಅದೇ ಇನ್ನೊಂದು ಕಡೆ ಅಜಿತ್ ಸಿನಿಮಾ 'ಥುನಿವು' ಬಗ್ಗೆ ಕುತೂಹಲ ಹೆಚ್ಚಾಗಿದೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೆ. ಇರಡೂ ಸಿನಿಮಾಗಳಲ್ಲೂ ಗೆಲ್ಲೋದು ಯಾವುದು? ಅನ್ನೋ ಲೆಕ್ಕಾಚಾರ ಶುರುವಾಗಿದೆ.