For Quick Alerts
  ALLOW NOTIFICATIONS  
  For Daily Alerts

  'ಇಂಡಿಯನ್ 2' ಸೆಟ್ ನಲ್ಲಿ ಭೀಕರ ಅಪಘಾತ: 3 ಸಹಾಯಕ ನಿರ್ದೇಶಕರು ಮರಣ

  |

  ನಟ ಕಮಲ್ ಹಾಸನ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್ 2' ಸೆಟ್ ನಲ್ಲಿ ಬೆಂಕಿ ಅವಘಡ ನಡೆದಿದೆ. ಚಿತ್ರದ ಸೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಹಾಯಕ ನಿರ್ದೇಶಕರು ಸಾವನಪ್ಪಿದ್ದಾರೆ.

  'ಇಂಡಿಯನ್ 2' ಸಿನಿಮಾದ ಸೆಟ್ ವರ್ಕ್ ಚೆನ್ನೈ ಬಳಿಯ ಎವಿಪಿ ಫಿಲ್ಮ್ ಸ್ಟೂಡಿಯೊದಲ್ಲಿ ನಡೆಯುತ್ತಿತ್ತು. ಸಹಾಯಕ ನಿರ್ದೇಶಕರು ಸೇರಿದಂತೆ ಕಲಾ ನಿರ್ದೇಶನ ವಿಭಾಗದ ಹುಡುಗರು ಇದರಲ್ಲಿ ಭಾಗಿಯಾಗಿದ್ದರು. ಸೆಟ್ ನಿರ್ಮಾಣ ಕಾರ್ಯಕ್ಕೆ ಕ್ರೇನ್ ಬಳಸಲಾಗಿತ್ತು. ಕ್ರೇನ್ ಕುಸಿದ ಕಾರಣ ಈ ಅವಘಡ ನಡೆದಿದೆ.

  'ಇಂಡಿಯನ್-2' ಚಿತ್ರದ ಫಸ್ಟ್ ಲುಕ್ ಬಿಡುಗಡೆ'ಇಂಡಿಯನ್-2' ಚಿತ್ರದ ಫಸ್ಟ್ ಲುಕ್ ಬಿಡುಗಡೆ

  ಕ್ರೇನ್ ಅಡಿಯಲ್ಲಿ ಸಿಕ್ಕು ಸಹಾಯಕ ನಿರ್ದೇಶಕರಾದ ಮಧು, ಕೃಷ್ಣ ಹಾಗೂ ಚಂದ್ರನ್ ಮೃತಪಟ್ಟಿದ್ದಾರೆ. ಇನ್ನು ಕೆಲವು ಹುಡುಗರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಘಟನೆಗೆಯ ಬಗ್ಗೆ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದು, ''ನಾನು ಸಾಕಷ್ಟು ಅಪಘಾತಗಳನ್ನು ನೋಡಿದ್ದೇನೆ ಮತ್ತು ಅದರಿಂದ ಹೊರ ಬಂದಿದ್ದೇನೆ. ಆದರೆ, ಇಂದು ನೋಡಿದ ಅಪಘಾತ ನಿಜಕ್ಕೂ ಭೀಕರ. ನಾನು ನನ್ನು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ," ಎಂದು ಸಂತಾಪ ಸೂಚಿಸಿದ್ದಾರೆ.

  ಕಮಲ್-ಶಂಕರ್ ಜೋಡಿಯ 'ಇಂಡಿಯನ್-2' ನಿಂತು ಹೋಯ್ತಂತೆ.!ಕಮಲ್-ಶಂಕರ್ ಜೋಡಿಯ 'ಇಂಡಿಯನ್-2' ನಿಂತು ಹೋಯ್ತಂತೆ.!

  ಅಂದಹಾಗೆ, 'ಇಂಡಿಯನ್ 2' ಶಂಕರ್ ನಿರ್ದೇಶನದ ಸಿನಿಮಾವಾಗಿದೆ. ಸೌತ್ ಇಂಡಿಯಾದ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ.

  English summary
  Crane crashes in 'Indian 2' accident 3 assistant director death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X