For Quick Alerts
  ALLOW NOTIFICATIONS  
  For Daily Alerts

  ಎಆರ್ ರೆಹಮಾನ್ ಜೊತೆ ಸಚಿನ್ ತೆಂಡೂಲ್ಕರ್: ಇಬ್ಬರು ಲೆಜೆಂಡ್‌ಗಳ ಭೇಟಿಯ ಗುಟ್ಟೇನು?

  |

  ಕ್ರಿಕೆಟ್‌ಗೂ ಚಿತ್ರರಂಗದವರಿಗೂ ಬಿಡಲಾರದ ನಂಟಿದೆ. ಇದು ಇಂದು-ನಿನ್ನೆಯದಲ್ಲ. ಐದಾರು ದಶಕಗಳಿಂದ ಈ ನಂಟು ಬೆಳೆದುಕೊಂಡೇ ಬಂದಿದೆ. ಸ್ನೇಹ-ಪ್ರೀತಿಗೆ ತಿರುಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉದಾಹರಣೆಗಳು ಕಣ್ಮುಂದೆ ಇವೆ.

  ಅದೇ ಕ್ರಿಕೆಟ್ ಆಟಗಾರನಾಗಿದ್ದು ಕೊಂಡು ಸಿನಿಮಾದಲ್ಲಿ ನಟಿಸಿದ ಉದಾಹರಣೆಗಳು ಇಂದಿಗೂ ಸಿಗುತ್ತವೆ. ಇರ್ಫಾನ್ ಪಠಾಣ್, ಶಿಖರ್ ಧವನ್ ಇತ್ತೀಚೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಕ್ರಿಕೆಟಿಗರಿಗೂ, ಸಿನಿಮಾ ಮಂದಿಗೂ ಬಿಡಲಾರದ ನಂಟು ಇದೆ. ಅಷ್ಟಕ್ಕೂ ಈ ಮಾತು ಈಗ್ಯಾಕೆ ಅಂದರೆ, ಇಬ್ಬರು ಲೆಜೆಂಡ್‌ಗಳು ಭೇಟಿ.

  'ಹೊಯ್ಸಳ' ಸೆಟ್ ಗೆ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ'ಹೊಯ್ಸಳ' ಸೆಟ್ ಗೆ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ

  ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಸಂಗೀತ ಲೋಕದ ಲೆಜೆಂಡ್ ಎ ಆರ್ ರೆಹಮಾನ್ ಇಬ್ಬರೂ ದಿಢೀರನೇ ಭೇಟಿಯಾಗಿದ್ದಾರೆ. ಈ ಭೇಟಿ ಸಂಗೀತ ಕ್ಷೇತ್ರ ಹಾಗೂ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

  ಅಂದ್ಹಾಗೆ, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಹಾಗೂ ಮ್ಯೂಸಿಕ್ ಲೆಜೆಂಡ್ ಎ ಆರ್ ರೆಹಮಾನ್ ಇಬ್ಬರೂ ಮುಂಬೈನಲ್ಲಿ ಮುಖಾಮುಖಿಯಾಗಿದ್ದಾರೆ. ಇಲ್ಲಿನ ಬಾಂದ್ರಾದ ಎಂಸಿಎ ಕ್ಲಬ್‌ನಲ್ಲಿ ಇಬ್ಬರು ದಿಗ್ಗಜರ ಭೇಟಿ ಕುತೂಹಲ ಕೆರಳಿಸಿದೆ. ಇದರ ಹಿಂದಿನ ಗುಟ್ಟೇನು ಅನ್ನೋದು ಅಧಿಕೃತವಾಗಿ ತಿಳಿದಿಲ್ಲ. ಆದರೆ ಎಆರ್ ರೆಹಮಾನ್ ಈ ಅಮೂಲ್ಯ ಕ್ಷಣದ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ, ಸಚಿನ್ ಆ ಟ್ವೀಟ್‌ಗೆ ಕಮೆಂಟ್ ಮಾಡಿದ್ದಾರೆ.

  ಸಚಿನ್ ತೆಂಡೂಲ್ಕರ್ ಹಾಗೂ ಎ ಆರ್‌ ರೆಹಮಾನ್ ಇಬ್ಬರ ಸ್ನೇಹ ಇಂದಿನದಲ್ಲ. ಬಹಳ ಹಿಂದಿನಿಂದಲೂ ಈ ಇವರಿಬ್ಬರೂ ಅತ್ಯುತ್ತಮ ಸ್ನೇಹಿತರೇ. ಆಗಾಗ ವಿಶೇಷ ಸಂದರ್ಭಗಳಲ್ಲಿ ಇಬ್ಬರು ಲೆಜೆಂಡ್‌ಗಳ ಮುಖಾಮುಖಿ ಆಗುತ್ತಲೇ ಇರುತ್ತೆ. ಈ ಕಾರಣಕ್ಕಾಗಿಯೇ ಎಆರ್ ರೆಹಮಾನ್ ಟ್ವೀಟ್‌ಗೆ ಸಚಿನ್ ತೆಂಡೂಲ್ಕರ್ ರಿಯಾಕ್ಟ್ ಮಾಡಿದ್ದು, "ಸಂಗೀತ ಸುನಾಮಿ ಎಆರ್ ರೆಹಮಾನ್ ಜೊತೆ ಈ ಭಾನುವಾರ ಅದ್ಭುತವಾಗಿತ್ತು ಎಂದು ಉತ್ತರಿಸಿದ್ದಾರೆ.

  Cricket Legend Sachin Tendulkar And AR Rahman Sunday Photo Goes Viral

  ಈ ಹಿಂದೆ ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆಯಾಧರಿಸಿದ್ದ ಸಿನಿಮಾ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಸಿನಿಮಾ ಎ ಆರ್ ರೆಹಮಾನ್ ಅವರೇ ಸಂಗೀತ ನೀಡಿದ್ದರು. ಈ ಸಿನಿಮಾ 2017ರಲ್ಲಿ ಏಪ್ರಿಲ್ 26ರಂದು ಬಿಡುಗಡೆಯಾಗಿತ್ತು.

  English summary
  Cricket Legend Sachin Tendulkar And AR Rahman Sunday Photo Goes Viral, Know More.
  Monday, October 17, 2022, 23:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X