ಕಮಲ್ ಹಾಸನ್ 'ಇಂಡಿಯನ್-2' ಚಿತ್ರ ಮತ್ತೆ ಮುಂದೂಡಿಕೆ!
'ಮಾಸ್ಟರ್' ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಕಮಲ್ ಹಾಸನ್ 232ನೇ ಚಿತ್ರವನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕಮಲ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. 'ವಿಕ್ರಂ' ಎಂದು ಹೆಸರಿಟ್ಟಿರುವ ಈ ಚಿತ್ರದ ಟೀಸರ್ ಭರ್ಜರಿ ಸದ್ದು ಮಾಡಿದೆ.
ಇದಕ್ಕೂ ಮುಂಚೆ ಆರಂಭವಾಗಿರುವ 'ಇಂಡಿಯನ್-2' ಸಿನಿಮಾ ಮತ್ತೆ ಮುಂದೂಡಿಕೆಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಲಾಕ್‌ಡೌನ್‌ಗೂ ಮುಂಚೆ ಚಿತ್ರೀಕರಣ ಆರಂಭಿಸಿದ್ದ ಇಂಡಿಯನ್ 2 ಸಿನಿಮಾ ನಂತರ ಶೂಟಿಂಗ್‌ಗೆ ಬ್ರೇಕ್ ಹಾಕಿತ್ತು.
ಇದೀಗ, ಲಾಕ್‌ಡೌನ್ ಬಳಿಕ ಮತ್ತೆ ಚಿತ್ರೀಕರಣ ಮಾಡಲು ಎಲ್ಲ ತಯಾರಿ ನಡೆದಿತ್ತು. ಆದ್ರೀಗ, ಪುನಃ ಇಂಡಿಯನ್ 2 ಕೆಲಸ ಮತ್ತಷ್ಟು ದಿನಕ್ಕೆ ಮುಂದಕ್ಕೆ ಹಾಕಲು ಶಂಕರ್ ನಿರ್ಧರಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಲೋಕೇಶ್ ಕನಗರಾಜ್ ನಿರ್ದೇಶನದ 'ವಿಕ್ರಮ್' ಚಿತ್ರದ ಚಿತ್ರೀಕರಣವನ್ನು ನವೆಂಬರ್ ಎರಡನೇ ವಾರದಿಂದ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಬ್ಯುಸಿಯಾಗಲಿದ್ದಾರೆ. ಹಾಗಾಗಿ, ಇಂಡಿಯನ್ 2 ಚಿತ್ರೀಕರಣ ಇನ್ನು ಸ್ವಲ್ಪ ದಿನ ಮುಂದೂಡಲು ತೀರ್ಮಾನಿಸಿದ್ದಾರೆ.
ಈ ನಡುವೆ ನಿರ್ದೇಶಕ ಶಂಕರ್ ತಮ್ಮ ಹಿರಿಯ ಮಗಳ ಮದುವೆ ತಯಾರಿ ನಡೆಸಿದ್ದಾರೆ. ಶಂಕರ್ ಮತ್ತು ಈಶ್ವರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅದಿತಿ ಮತ್ತು ಐಶ್ವರ್ಯಾ ಹಾಗೂ ಒಬ್ಬ ಮಗ ಅರ್ಜಿತ್ ಇದ್ದಾರೆ.
ಇಂಡಿಯನ್ 2 ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿಯಲ್ಲಿ ಭಾರತೀಯ 2 ರ ಸೆಟ್‌ಗಳಲ್ಲಿ ಕ್ರೇನ್ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಮೂವರು ಸಹಾಯಕ ನಿರ್ದೇಶಕರು ದುರಂತ ಅಪಘಾತದಲ್ಲಿ ಸಾವನ್ನಪ್ಪಿದ್ದರು.


Click it and Unblock the Notifications











