For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ 233ನೇ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್; ವಿಜಯ್ ಸೇತುಪತಿಯೂ ಇರಲಿದ್ದಾರೆ

  |

  ಈ ವರ್ಷ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರ ತಮಿಳುನಾಡಿನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತು. ಇತ್ತೀಚಿನ ವರ್ಷಗಳಲ್ಲಿ ಸಿಗದಿದ್ದಂತಹ ಯಶಸ್ಸನ್ನು ಕಮಲ್ ಹಾಸನ್ ಈ ಚಿತ್ರದ ಮೂಲಕ ಪಡೆದರು.

  ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ವಿಕ್ರಮ್ ಸಿನಿಮಾಗೆ ಬಂಡವಾಳ ಹೂಡಿದ್ದ ಕಮಲ್ ಹಾಸನ್ ಚಿನ್ನದ ಬೆಳೆ ಬೆಳೆದಿದ್ದರು. ಹೀಗೆ ವಿಕ್ರಮ್ ಯಶಸ್ಸಿನ ಅಲೆಯಲ್ಲಿರುವ ಕಮಲ್ ಹಾಸನ್ ಅಭಿನಯದ ಮುಂದಿನ ಚಿತ್ರ ಇಂಡಿಯನ್ 2ನ ಚಿತ್ರೀಕರಣ ಇನ್ನೂ ಮುಕ್ತಾಯಗೊಂಡಿಲ್ಲ.

  ಇನ್ನು ಇಂಡಿಯನ್ 2 ಚಿತ್ರದ ಚಿತ್ರೀಕರಣಕ್ಕೆ ಸದ್ಯ ಬ್ರೇಕ್ ಬಿದ್ದಿದ್ದು, ಕಮಲ್ ಹಾಸನ್ ತಮ್ಮ ನಿರ್ಮಾಣ ಸಂಸ್ಥೆಯಡಿಯಲ್ಲಿ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಿ ನಟಿಸಲು ಮುಂದಾಗಿದ್ದಾರೆ. ಇದು ಕಮಲ್ ಹಾಸನ್ ಅಭಿನಯದ 233ನೇ ಚಿತ್ರವಾಗಿದ್ದು ಈ ಚಿತ್ರವನ್ನು ನಿರ್ದೇಶಕ ಹೆಚ್. ವಿನೋದ್ ನಿರ್ದೇಶಿಸಲಿದ್ದಾರೆ.

  ಚದುರಂಗ ವೇಟ್ಟೈ, ಧೀರನ್ ಅಧಿಗಾರಮ್ ಒಂಡ್ರು ರೀತಿಯ ಸ್ವಮೇಕ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸೂಪರ್‌ ಬ್ಲಾಕ್ ಬಸ್ಟರ್ ನೀಡಿದ್ದ ಎಚ್ ವಿನೋದ್ ನಂತರ ಹಿಂದಿಯ ಪಿಂಕ್ ಚಿತ್ರವನ್ನು ನೇರ್ಕೊಂಡ ಪಾರ್ವೈ ಎಂಬ ಶೀರ್ಷಿಕೆಯಡಿಯಲ್ಲಿ ನಟ ಅಜಿತ್ ಕುಮಾರ್‌‌ಗೆ ರಿಮೇಕ್ ಮಾಡಿದರು. ನಂತರ ವಾಲಿಮೈ ಎಂಬ ಸ್ವಮೇಕ್ ಚಿತ್ರವನ್ನು ಅಜಿತ್ ಕುಮಾರ್‌‌ಗೆ ನಿರ್ದೇಶಿಸಿದ ವಿನೋದ್ ಸದ್ಯ ಮತ್ತೆ ಇದೇ ನಟನಿಗೆ 'ತುನಿವು' ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ತುನಿವು ಚಿತ್ರ ಮುಂದಿನ ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದು, ಇದಾದ ಬಳಿಕ ಕಮಲ್ ಹಾಸನ್ ಚಿತ್ರವನ್ನು ವಿನೋದ್ ಕೈಗೆತ್ತಿಕೊಳ್ಳಲಿದ್ದಾರೆ.

  ಇನ್ನು ವಿಕ್ರಮ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಜಯ್ ಸೇತುಪತಿ ಕಮಲ್ ಹಾಸನ್ ಹಾಗೂ ವಿನೋದ್ ಕಾಂಬಿನೇಷನ್ ಚಿತ್ರದಲ್ಲೂ ಅಭಿನಯಿಸಲಿದ್ದು, ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯಕ್ಕೆ ಚಿತ್ರದ ಕುರಿತು ಇಷ್ಟು ಮಾಹಿತಿ ಮಾತ್ರ ಲಭ್ಯವಾಗಿದ್ದು ಮತ್ತಷ್ಟು ವಿವರಗಳು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.

  English summary
  Kamal Haasan's 233rd film to be directed by H Vinoth
  Thursday, November 17, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X