twitter
    For Quick Alerts
    ALLOW NOTIFICATIONS  
    For Daily Alerts

    ಮೂರೇ ದಿನದಲ್ಲಿ 'ವಿಕ್ರಂ' ಕಲೆಕ್ಷನ್ ₹150 ಕೋಟಿ: ಕಮಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

    |

    ದಕ್ಷಿಣದ ಸಿನಿಮಾಗಳ ದರ್ಬಾರ್ ಇನ್ನೂ ನಿಂತಿಲ್ಲ. 'ಕೆಜಿಎಫ್ 2' ಬಾಕ್ಸಾಫೀಸ್‌ ಲೂಟಿ ಮಾಡಿದ್ದಾಯ್ತು. ₹1200 ಕೋಟಿ ಗಡಿದಾಟಿದ್ದೂ ಆಯ್ತು. 'RRR', 'ಪುಪ್ಪ' ಮೋಡಿಗೆ ಉತ್ತರ ಮಂದಿ ಬೆಚ್ಚಿಬಿದ್ದಿದ್ದೂ ಇದೆ. ಇನ್ನೇ ದಕ್ಷಿಣದ ದಂಡಯಾತ್ರೆ ಮುಗೀತು ಅನ್ನುವಾಗಲೇ ಕಮಲ್ ಹಾಸನ್ ಅಶ್ವಮೇಧ ಯಾಗ ಆರಂಭಿಸಿದ್ದಾರೆ.

    ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ದಿಗ್ಗಜರ ಸಿನಿಮಾಗಳೇ ಸೀತು ಸುಣ್ಣವಾಗಿದ್ದವು. ತಮಿಳು ಚಿತ್ರರಂಗದಲ್ಲಿ ಕಳೆದ 6 ತಿಂಗಳಿಂದ ಬಾಕ್ಸಾಫೀಸ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿರಲಿಲ್ಲ. ಈ ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಕಾಲಿವುಡ್‌ಗೆ ಹೊಸ ಹುರುಪು ನೀಡುತ್ತಿದೆ.

    'ಪೃಥ್ವಿರಾಜ್‌'ಗೆ ಟಕ್ಕರ್ ಕೊಟ್ಟ ಕಮಲ್ ಹಾಸನ್ 'ವಿಕ್ರಂ': 2 ದಿನದ ಕಲೆಕ್ಷನ್ ಎಷ್ಟು?'ಪೃಥ್ವಿರಾಜ್‌'ಗೆ ಟಕ್ಕರ್ ಕೊಟ್ಟ ಕಮಲ್ ಹಾಸನ್ 'ವಿಕ್ರಂ': 2 ದಿನದ ಕಲೆಕ್ಷನ್ ಎಷ್ಟು?

    ಲಾಂಗ್ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗೆ ಮರಳಿರುವ ಉಳಗನಾಯಗನ್ ಕಮಲ್‌ ಹಾಸನ್‌ಗೆ 'ವಿಕ್ರಂ' ವೆಲ್‌ಕಮ್ ಟ್ರೀಟ್ ಕೊಟ್ಟಿದೆ. ಬಾಕ್ಸಾಫೀಸ್ ಕಳೆದ ಮೂರು ದಿನಗಳ ಗಳಿಕೆ ಕಂಡು ತಮಿಳು ಚಿತ್ರರಂಗವೇ ಕುಣಿದು ಕುಪ್ಪಳಿಸಿದೆ. ಕಳೆದ ಮೂರು ದಿನಗಳಿಂದ ' ವಿಕ್ರಂ' ಸಿನಿಮಾ ಗಳಿಸಿದ್ದೆಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    'ವಿಕ್ರಂ' 3 ದಿನಗಳ ಕಲೆಕ್ಷನ್ ₹150 ಕೋಟಿ

    'ವಿಕ್ರಂ' 3 ದಿನಗಳ ಕಲೆಕ್ಷನ್ ₹150 ಕೋಟಿ

    ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ವಿಕ್ರಂ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾ ಭಾರತದ ಜೊತೆ ಜೊತೆಗೆ, ವಿದೇಶದಲ್ಲೂ ಉತ್ತರ ರೆಸ್ಪಾನ್ಸ್ ಸಿಕ್ಕಿದೆ. ಕೇವಲ ಮೂರು ದಿನಗಳಲ್ಲಿಯೇ ಸಿನಿಮಾದ ಗಳಿಕೆ ₹150 ಕೋಟಿ ಕಲೆಕ್ಷನ್ ಮಾಡಿದೆ. ಒಂದು ಲೆಕ್ಕಾಚಾರದ ಪ್ರಕಾರ, 'ವಿಕ್ರಂ' ವಿಜಯಯಾತ್ರೆ ಹೀಗೆ ಮುಂದುವರೆದರೆ, ಅವರ ಕರಿಯರ್‌ನಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಲಿದೆ ಎಂದು ಹೇಳಲಾಗುತ್ತಿದೆ.

    ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

    3ನೇ ದಿನ 'ವಿಕ್ರಂ' ಗಳಿಕೆ ಎಷ್ಟು?

    3ನೇ ದಿನ 'ವಿಕ್ರಂ' ಗಳಿಕೆ ಎಷ್ಟು?

    ಕಮಲ್ ಹಾಸನ್ ಅಭಿನಯದ ಸಿನಿಮಾ 'ವಿಕ್ರಂ' ಆರಂಭದ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ. ಮೊದಲ ದಿನ ಸುಮಾರು ₹58 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಹಾಗೇ ವೀಕೆಂಡ್‌ನಲ್ಲೂ ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ.

    ಮೊದಲನೇ ದಿನ ₹58 ಕೋಟಿ
    ಎರಡನೇ ದಿನ ₹44 ಕೋಟಿ
    ಮೂರನೇ ದಿನ ₹48.28 ಕೋಟಿ

    ಒಟ್ಟು ₹150.28 ಕೋಟಿ

    ಕರ್ನಾಟಕದಲ್ಲಿ 'ವಿಕ್ರಂ' ಕಲೆಕ್ಷನ್ ಎಷ್ಟು?

    ಕರ್ನಾಟಕದಲ್ಲಿ 'ವಿಕ್ರಂ' ಕಲೆಕ್ಷನ್ ಎಷ್ಟು?


    ಕರ್ನಾಟಕದಲ್ಲೂ 'ವಿಕ್ರಂ' ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. ಕರ್ನಾಟಕದಲ್ಲೂ ಕಮಲ್ ಹಾಸನ್ ಸಿನಿಮಾ ₹11 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಇದರೊಂದಿಗೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲೂ ಸಿನಿಮಾ ಕಲೆಕ್ಷನ್ ಅದ್ಬುತವಾಗಿಯೇ ಇದೆ.

    ತಮಿಳುನಾಡು ₹64.50 ಕೋಟಿ
    ಆಂಧ್ರ/ತೆಲಂಗಾಣ ₹12.26 ಕೋಟಿ
    ಕರ್ನಾಟಕ ₹11.02 ಕೋಟಿ
    ಕೇರಳ ₹14.05 ಕೋಟಿ
    ಇತರೆ ರಾಜ್ಯಗಳು ₹02.35 ಕೋಟಿ
    ವಿದೇಶ ₹46.10 ಕೋಟಿ

    ಒಟ್ಟು ₹150.28 ಕೋಟಿ

    46 ವರ್ಷದ ಹಿಂದೆ ರಾಜ್‌ಕುಮಾರ್ ಹೇಳಿದ್ದ ಮಾತು ನೆನಪಿಸಿಕೊಂಡ ಕಮಲ್ ಹಾಸನ್46 ವರ್ಷದ ಹಿಂದೆ ರಾಜ್‌ಕುಮಾರ್ ಹೇಳಿದ್ದ ಮಾತು ನೆನಪಿಸಿಕೊಂಡ ಕಮಲ್ ಹಾಸನ್

    ವಿದೇಶದಲ್ಲೂ 'ವಿಕ್ರಂ' ಮೋಡಿ

    ವಿದೇಶದಲ್ಲೂ 'ವಿಕ್ರಂ' ಮೋಡಿ

    'ವಿಕ್ರಂ' ಸಿನಿಮಾ ತಮಿಳುನಾಡಿನಲ್ಲಿ 900 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದರೆ, ವಿಶ್ವದಾದ್ಯಂತ ಸುಮಾರು 2500 ಸ್ಕ್ರೀನ್‌ಗಳಲ್ಲಿ ತೆರೆಕಂಡಿತ್ತು. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಈ ಮೂವರ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. 'ವಿಕ್ರಂ' ಅಮೆರಿಕದಲ್ಲಿ ₹12 ಕೋಟಿ, ಯುಎಇಯಲ್ಲಿ ₹13 ಕೋಟಿ, ಯುಕೆಯಲ್ಲಿ ₹2.78 ಕೋಟಿ, ಆಸ್ಟ್ರೇಲಿಯಾದಲ್ಲಿ ₹2.60 ಕೋಟಿ, ನ್ಯೂಜಿಲ್ಯಾಂಡ್‌ನಲ್ಲಿ ₹24 ಲಕ್ಷ ಗಳಿಕೆ ಕಂಡಿದೆ.

    English summary
    Kamal Haasan Starrer Vikram Boxoffice Worldwide Collection Day 3 Report, Know More.
    Monday, June 6, 2022, 14:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X