For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್‌ಗೆ ಕೋವಿಡ್ -19 ಪಾಸಿಟಿವ್: ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲು!

  |

  ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತ ಇದ್ದಂದೆ, ಜನ ಮೈ ಮರೆಯುತ್ತಾ ಇದ್ದಾರೆ. ಕೊರೊನಾ ಬಗ್ಗೆ ಸುದ್ದಿಗಳು ಕಡಿಮೆ ಆಗುತ್ತಲೇ ಜನರು ಸಹಜ ಜೀವನಕ್ಕೆ ಮರಳಿದ್ದು ಕೊರೊನಾ ಮರೆತು ಸಹಜವಾಗಿ ಇರಲು ಪ್ರಾರಂಭಿಸಿದ್ದಾರೆ. ಆದರೆ ಈಗ ಕೊರೊನಾ ಮತ್ತೆ ಶಾಕ್ ಕೊಡ್ತಿದೆ.

  ನಟ ಕಮಲ್ ಹಾಸನ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಕಮಲ್ ಹಾಸನ್ ಇತ್ತೀಚೆಗೆ ಅಮೆರಿಕದಿಂದ ನಿಂದ ಭಾರತಕ್ಕೆ ಬಂದಿದ್ದಾರೆ. ಅಲ್ಲಿಂದ ಬಂದ ಬಳಿಕ ಕಮಲ್‌ ಹಾಸನ್‌ ಅವರು ಅಸ್ವಸ್ಥರಾಗಿದ್ದಾರೆ. ಈಗ ಕೊರೊನಾ ದೃಢ ಪಟ್ಟಿದೆ.

  ಸದ್ಯ ಕಮಲ್‌ ಹಾಸನ್‌ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳಿಂದ ಕಮಲ್ ಹಾಸನ್‌ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ನಂತರ ಅವರು ವೈದ್ಯಕೀಯ ಪರೀಕ್ಷೆಗೆ ಒಳ ಪಟ್ಟಿದ್ದಾರೆ. ಆಗ ಕೊರೋನಾ ಇರುವುದು ದೃಢವಾಗಿದೆ.

  ಟ್ವೀಟ್‌ ಮಾಡಿ ಕಮಲ್ ಹೇಳಿದ್ದೇನು?

  ಕಮಲ್ ಹಾಸನ್ ಅವರು ಯುಎಸ್‌ನಿಂದ ಮರಳಿದ ನಂತರ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿದೆ. ನಂತರ ಅವರು ಟ್ವೀಟ್‌ ಮಾಡುವ ಮೂಲಕ ಈ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದಾರೆ. ಟ್ವೀಟ್‌ನಲ್ಲಿ ಕಮಲ್‌ ಹಾಸನ್‌ ಹೀಗೆ ಬರೆದು ಕೊಂಡಿದ್ದಾರೆ. "ಅಮೆರಿಕದ ಪ್ರವಾಸದಿಂದ ಹಿಂತಿರುಗಿದ ನಂತರ ಸ್ವಲ್ಪ ಕೆಮ್ಮು ಇತ್ತು. ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನಾನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ. ಮತ್ತು ನೀವು ಎಲ್ಲರೂ ಸುರಕ್ಷಿತ ಆಗಿರಿ". ಎಂದು ಟ್ವೀಟ್ ಮಾಡಿದ್ದಾರೆ.

  ಅಮೆರಿಕದಿಂದ ಬಂದ ಬಳಿಕಾ ಹೀಗಾಯ್ತು!

  ಅಮೆರಿಕದಿಂದ ಬಂದ ಬಳಿಕಾ ಹೀಗಾಯ್ತು!

  ಸದ್ಯ ಕಮಲ್ ಹಾಸನ್ ಅವರು ತಮ್ಮ ಮುಂಬರುವ ಚಿತ್ರ, ಲೋಕೇಶ್ ಕನಗರಾಜ್ ನಿರ್ದೇಶನದ 'ವಿಕ್ರಮ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅವರು ಬಿಗ್ ಬಾಸ್ ತಮಿಳು ಸೀಸನ್ 5 ರ ವಾರಾಂತ್ಯದ ಸಂಚಿಕೆಗಳನ್ನು ಸಹ ಮಾಡುತ್ತಿದ್ದಾರೆ. ಇದರ ಜೊತೆಗ ಕಮಲ್ ಹಾಸನ್‌ ಯುಎಸ್‌ಗೆ ಕೂಡಾ ಭೇಟಿ ನೀಡಿ ಬಂದಿದ್ದಾರೆ. ಹಾಗಾಗಿ ಈ ವಾರದ ಬಿಗ್‌ ಬಾಸ್‌ನಲ್ಲಿ ಕಮಲ್‌ ಹಾಸನ್‌ ಇರುವುದಿಲ್ಲ ಎನ್ನಲಾಗಿತ್ತು. ಆದರೆ ಅವರು ಅಲ್ಲಿಂದ ವಾಪಸ್ಸಾಗಿದ್ದಾರೆ.

  ಅಮೆರಿಕದಿಂದ ಬಂದ ಬಳಿಕ, ಇಂದು (ನವೆಂಬರ್ 22 )ರಂದು ಕಮಲ್ ಹಾಸನ್ ಅವರು ಕೊರೊನಾ ವೈರಸ್‌ ಪರೀಕ್ಷೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢ ಪಟ್ಟಿದೆ. ಅವರು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಕೂಡಲೇ ಚೆನ್ನೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ.

  ಚಿಕಾಗೋಗೆ ಕಮಲ್ ಭೇಟಿ ನೀಡಿದ್ದು ಯಾಕೆ?

  ಚಿಕಾಗೋಗೆ ಕಮಲ್ ಭೇಟಿ ನೀಡಿದ್ದು ಯಾಕೆ?

  ಕಳೆದವಾರ ನಟ ಕಮಲ್ ಹಾಸನ್ ಚಿಕಾಗೋದಲ್ಲಿ ತಮ್ಮ ಹೊಸ ಜವಳಿ ಉದ್ಯಮದ ಪ್ರಾರಂಭಕ್ಕೆ ಮುಹೂರ್ತ ಇಟ್ಟಿದ್ದರು. ವಸ್ತ್ರ ವಿನ್ಯಾಸಕಿ ಅಮೃತಾ ರಾಮ್ ಅವರ ಸಹಭಾಗಿತ್ವದಲ್ಲಿ 'ಕೆ.ಹೆಚ್ ಹೌಸ್ ಆಫ್ ಖದ್ದರ್' ಎಂಬ ತಮ್ಮ ಬಟ್ಟೆ ಬ್ರ್ಯಾಂಡ್ ಪ್ರಾರಂಭಿಸಿದರು. ಖಾದಿಯನ್ನು ಜವಳಿಯಾಗಿ ಉತ್ತೇಜಿಸುವ ಈ ಬ್ರ್ಯಾಂಡ್ ಹಿಂದಿನ ಆಲೋಚನೆಯಾಗಿದೆ.

  ಈ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್ "ಚಿಕಾಗೋ ಅತ್ಯುತ್ತಮ ಇತಿಹಾಸವನ್ನು ಹೊಂದಿರುವ ವಿಶೇಷ ನಗರವಾಗಿದೆ. ಇಲ್ಲಿನ ದೇಸಿ ಸಂಸ್ಕೃತಿಯನ್ನು ತಾನೇ ಹೇಳುತ್ತದೆ. ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲು ನಮಗೆ

  ಇದೆ ಸರಿಯಾದ ನಗರ". ಎಂದು ತಮ್ಮ ಬ್ರ್ಯಾಂಡ್‌ ಲಾಂಚ್ ವೇಳೆ ಕಮಲ್ ಹಾಸನ್ ಮಾತನಾಡಿದ್ದರು.

  ಕಮಲ್ ಸಿನಿಮಾ, ಬಿಗ್ ಬಾಗ್ ಕೆಲಸಗಳು ಸ್ಥಗಿತ?

  ಕಮಲ್ ಸಿನಿಮಾ, ಬಿಗ್ ಬಾಗ್ ಕೆಲಸಗಳು ಸ್ಥಗಿತ?

  ಕಮಲ್ ಹಾಸನ್ ಅಭಿನಯಿಸುತ್ತಿರುವ 'ವಿಕ್ರಮ್' ಮತ್ತು ಇನ್ನೂ ನೂರು ದಿನಗಳ ಚಿತ್ರೀಕರಣ ಬಾಕಿ ಇರುವ ಇಂಡಿಯನ್ 2 ಚಿತ್ರದ ಕೆಲಸಗಳು ಮತ್ತಷ್ಟು ಮುಂದೂಡಲಾಗುತ್ತದೆ.

  ಕಮಲ್ ಹಾಸನ್ ಪ್ರಸ್ತುತ ತಮಿಳು ಬಿಗ್ ಬಾಸ್ ಸೀಸನ್ 5ರ ನಿರೂಪಣೆ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಸದ್ಯ ಕೊರೊನಾ ಚಿಕಿತ್ಸೆಗೆ ಕಮಲ್‌ ಹಾಸನ್‌ ತೆರಳಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಒಂದಷ್ಟು ಬದಲಾವಣೆಗಳು ಆಗುವುದು ಖಚಿತ.

  English summary
  Kamal Haasan Tests COVID Positive After Returning from USA, Isolated in Hospital

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X